ಬಾಲಿವುಡ್​ ನಟಿ ನರ್ಗಿಸ್ ಫಕ್ರಿ 
ದೇಶ

ದುಬೈನಲ್ಲಿ ಯುದ್ಧದ ಭೀತಿ: "ಮಲಗಲು ಭಯವಾಗುತ್ತಿದೆ" ಎಂದು ಕಣ್ಣೀರು ಹಾಕಿದ ನಟಿ ನರ್ಗಿಸ್ ಫಕ್ರಿ! ಇರಾನ್ ಮಿಸೈಲ್ ದಾಳಿಯ ನಡುವೆ ಸಿಲುಕಿದ ಬಾಲಿವುಡ್ ಬೆಡಗಿ | Nargis Fakhri

ಪ್ರಮುಖ ಮುಖ್ಯಾಂಶಗಳು

  • ಇರಾನ್​ ಇಸ್ರೇಲ್​ ಯುದ್ಧ
  • ದುಬೈ ಮೇಲೆ ಮಿಸೈಲ್​ ದಾಳಿ ಮಾಡಿದ ಇರಾನ್​
  • ಇಲ್ಲಿ ಮಲಗಲು ಭಯವಾಗುತ್ತಿದೆ ಎಂದು ಮಾಹಿತಿ ಹಂಚಿಕೊಂಡ ನಟಿ ನರ್ಗಿಸ್ ಫಕ್ರಿ
ದುಬೈ: ಮಧ್ಯಪ್ರಾಚ್ಯದಲ್ಲಿ ಅಕ್ಷರಶಃ ಯುದ್ಧದ ರೌದ್ರನರ್ತನ ಆರಂಭವಾಗಿದೆ. ಶನಿವಾರ (ಫೆ.28) ಅಮೆರಿಕ ಮತ್ತು ಇಸ್ರೇಲ್​ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡುವ ಮೂಲಕ ಈ ಕಾದಾಟವನ್ನು ಪ್ರಾರಂಭಿಸಿದರೆ, ಇರಾನ್​ ಈಗ ದುಬೈ ಮೇಲೆ ದಾಳಿ ಮಾಡುವ ಮೂಲಕ ಪರಿಸ್ಥಿತಿಯ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ.
ದುಬೈನಲ್ಲಿ ಭಾರತದ ಹಲವಾರು ನಾಗರಿಕರು ಮತ್ತು ಸೆಲೆಬ್ರಿಟಿಗಳು ನೆಲೆಸಿದ್ದು, ಅವರು ದುಬೈನ ಪರಿಸ್ಥಿತಿ ಹೇಗಿದೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.
ಇರಾನಿನ ಮಿಸೈಲ್​ ದಾಳಿಗೆ ತುತ್ತಾಗಿರುವ ದುಬೈನಲ್ಲಿ ನೆಲೆಸಿರುವ ಬಾಲಿವುಡ್​ನ ಖ್ಯಾತ ನಟಿ ನರ್ಗಿಸ್ ಫಕ್ರಿ (Nargis Fakhri), ದುಬೈನಲ್ಲಿ ಮುಂದೆ ಏನಾಗಲಿದೆ ಎಂದು ತಿಳಿಯುತ್ತಿಲ್ಲ, ರಾತ್ರಿ ಮಲಗಲು ಧೈರ್ಯ ಸಹ ಬರುತ್ತಿಲ್ಲ, ಇಲ್ಲಿ ತುಂಬಾ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಈ ಮೂಲಕ ನಟಿ ನರ್ಗಿಸ್, ಯುದ್ಧ ಪೀಡಿತ ಮತ್ತು ಉದ್ವಿಗ್ನತೆಯ ನಡುವೆ ಸಿಲುಕಿಕೊಂಡವರ ಪರಿಸ್ಥಿತಿ ಹಾಗೂ ಮನಸ್ಥಿತಿ ಯಾವ ರೀತಿಯಲ್ಲಿ ಇರುತ್ತದೆ ಎಂದು ಸಾಮಾಜಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಸ್ಥಳೀಯ ಅಧಿಕಾರಿಗಳಿಗೆ ಸಲ್ಯೂಟ್​!

ಈ ಭಯದ ವಾತಾವರಣದಲ್ಲಿ ದುಬೈನ ಅಧಿಕಾರಿಗಳ ಶ್ರಮವನ್ನು ನರ್ಗಿಸ್ ಫಕ್ರಿ ಶ್ಲಾಘೀಸಿದ್ದಾರೆ. ನಗರದಾದ್ಯಂತ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದರ ಕುರಿತು ರೀಲ್ಸ್​ ಒಂದನ್ನು ನಟಿ ನರ್ಗಿಸ್ ಹಂಚಿಕೊಂಡಿದ್ದಾರೆ.

ನರ್ಗಿಸ್ ಫಕ್ರಿ ಹಿನ್ನಲೆ

ನರ್ಗಿಸ್ ಫಕ್ರಿ ಮೂಲತಃ ಅಮೆರಿಕದಲ್ಲಿ ಜನಿಸಿದ ಭಾರತೀಯಳಾಗಿದ್ದು, ಪ್ರಾರಂಭದಲ್ಲಿ ಮಾಡೆಲಿಂಗ್​ನಲ್ಲಿ ತೊಡಗಿದ್ದ ನರ್ಗಿಸ್, 2011 ರಲ್ಲಿ ರಣಬೀರ್​ ಕಪೂರ್​ ನಟನೆಯ ರಾಕ್‌ಸ್ಟಾರ್​ ಮೂಲಕ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ನಂತರ ಇವರು ಮದ್ರಾಸ್ ಕೆಫೆ, ಮೈನ್ ತೇರಾ ಹೀರೋ, ಹೌಸ್‌ಫುಲ್ 5 ಮತ್ತು ಅಜರ್ ಸಿನಿಮಾದಲ್ಲಿ ನಟಿಸಿದ್ದಾರೆ. ನರ್ಗಿಸ್ ನಟನೆಯ ಜೊತೆಗೆ ಯೋಗ ಮತ್ತು ಉತ್ತಮ ಜೀವನಶೈಲಿಗೂ ಮಹತ್ವ ನೀಡುವವರಾಗಿದ್ದು, ಈ ಕುರಿತು ಅವರು ತಮ್ಮ ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಮಾಹಿತಿಯುಕ್ತ ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ,(ಏಜನ್ಸೀಸ್​).