ಮುಂಬೈ ಏರ್‌ಪೋರ್ಟ್‌ನಲ್ಲಿ ಬಿಗಿ ಭದ್ರತೆ ಹಾಗೂ ಅತ್ಯಾಧುನಿಕ ಬಂದೂಕು ಹಿಡಿದ ಅಂಗರಕ್ಷಕರೊಂದಿಗೆ ನಟ ಸಲ್ಮಾನ್ ಖಾನ್ Actor Salman Khan at Mumbai Airport, accompanied by tight security and bodyguards armed with state-of-the-art weapons.
ದೇಶ

ಬಿಷ್ಣೋಯ್ ಗ್ಯಾಂಗ್ ಭೀತಿ: ಟೈಗರ್ ಶ್ರಾಫ್ ಮೇಲೆ ಶೂಟೌಟ್ ಬೆನ್ನಲ್ಲೇ ಸಲ್ಮಾನ್ ಹೈ-ಅಲರ್ಟ್; ಅತ್ಯಾಧುನಿಕ ಗನ್‌ಗಳೊಂದಿಗೆ ಏರ್‌ಪೋರ್ಟ್‌ಗೆ ಬಂದಿಳಿದ ‘ಭಾಯಿಜಾನ್’! Salman Khan

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ಸಲ್ಮಾನ್ ಖಾನ್ ಭದ್ರತೆ ಬಿಗಿಗೊಳಿಸಲಾಗಿದೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭೀತಿ ನಡುವೆ ಅತ್ಯಾಧುನಿಕ ಬಂದೂಕುಗಳ ಕಾವಲಿನಲ್ಲಿ ನಟ ಏರ್‌ಪೋರ್ಟ್‌ಗೆ ಆಗಮಿಸಿದ್ದಾರೆ.

ಮುಂಬೈ: ಬಾಲಿವುಡ್​ ನಟ, ಆಕ್ಷನ್​ ಹೀರೋ ಟೈಗರ್​ ಶ್ರಾಫ್​ ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಈಗ ನಟ ಸಲ್ಮಾನ್​ ಖಾನ್​ ಅವರ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಟೈಗರ್​ ಮೇಲೆ ಶೂಟೌಟ್​ ನಡೆದು ಮೂರು ದಿನ ಕಳೆದ ನಂತರ ಸಲ್ಮಾನ್​ ಮೊದಲ ಬಾರಿಗೆ ಮನೆಯಿಂದ ಆಚೆ ಬಿದ್ದಿದ್ದು, ಈ ಸಮಯದಲ್ಲಿ ಅವರ ಅಂಗರಕ್ಷಕರು ಎಂಪಿ 5, ಎಸ್​ಡಿ 6 ಮಾದರಿಯ ಅತ್ಯಾಧುನಿಕ ಬಂದೂಕುಗಳನ್ನು ಹಿಡಿದಿರುವುದು ಕಂಡುಬಂದಿದೆ. ಈ ಹಿನ್ನಲೆ, ಲಾರೆನ್ಸ್​​ ಬಿಷ್ಣೋಯ್​ ಗ್ಯಾಂಗ್​ನ ಬೆದರಿಕೆಗೆ ನಟ ಸಲ್ಮಾನ್​ ಖಾನ್​​ ಅವರಲ್ಲಿ ಭೀತಿಯನ್ನು ಹುಟ್ಟಿಸಿದೆ ಎಂದು ಖಾತರಿ ಪಡೆಸಿದೆ.

ಏರ್​ಪೋರ್ಟ್​ಗೆ ಬಂದಿಳಿದ ಸಲ್ಮಾನ್​!

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ನಟ ಸಲ್ಮಾನ್​ ಖಾನ್​​, ಭಾರೀ ಭದ್ರತೆಯೊಂದಿಗೆ ತಮ್ಮ ಖಾಸಗಿ ಏರ್​ಪೋರ್ಟ್​ಗೆ ಬಂದಿದ್ದಾರೆ. ಈ ಸಮಯದಲ್ಲಿ ಅವರ ಪ್ರಮುಖ ಅಂಗರಕ್ಷಕ ಶೇರಾ ಕೂಡ ಈ ವಿಡಿಯೋನಲ್ಲಿದ್ದಾರೆ. ಕಾರಿನಲ್ಲಿ ಬಂದಿಳಿದ ಸಲ್ಮಾನ್​, ಪಾಪಾರಾಜಿಗಳ ಮಾತನಾಡದೇ ನೇರವಾಗಿ ವಿಮಾನ ನಿಲ್ದಾಣವನ್ನು ಸೇರಿದ್ದಾರೆ.

ಸಲ್ಮಾನ್​ ಮನೆ ಮೇಲೆ ಫೈರಿಂಗ್​!

2024 ರಲ್ಲಿ ನಟ ಸಲ್ಮಾನ್​ ಖಾನ್​ ಅವರ ಗೆಲಾಕ್ಸಿ ಅಪಾರ್ಟಮೆಂಟ್​ ಮೇಲೆ ಆರು ಜನ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು, ವಿಕ್ಕಿ ಗುಪ್ತಾ, ಸಾಗರ್ ಪಾಲ್, ಹರ್ಪಾಲ್ ಸಿಂಗ್, ಸೋನು ಕುಮಾರ್ ಬಿಷ್ಣೋಯ್, ಮೊಹಮ್ಮದ್ ರಫೀಕ್ ಚೌಧರಿ ಮತ್ತು ಅನುಜ್ ಕುಮಾರ್ ಥಪನ್ ಎಂಬಾತನನ್ನು ವಶಕ್ಕೆ ಪಡೆಯಲಾಗುತ್ತು. ಈ ಘಟನೆಯ ಜವಾಬ್ದಾರಿಯನ್ನು ಕೂಡ ಲಾರೆನ್ಸ್​​ ಬಿಷ್ಣೋಯ್​ ಗ್ಯಾಂಗ್​ ಹೊತ್ತುಕೊಂಡಿತ್ತು.

ಹಠ, ಬಿಟ್ಟು ಕ್ಷಮೆ ಕೇಳು!

ಇನ್ನು, ನಟ ಟೈಗರ್ ಶ್ರಾಫ್​ ಮೇಲಿನ ದಾಳಿ ಬಾಲಿವುಡ್​ನಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ. ಆದರೆ, ಈ ದಾಳಿ ನಟ ಸಲ್ಮಾನ್​ ಖಾನ್ ರನ್ನು ಉದ್ದೇಶಿಸಿ ನಡೆದಿದ್ದೆಂದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ, ಹಿರಿಯ ಗಾತಕ ಅನುಪ್​ ಜಲೋಟಾ, ಸಲ್ಮಾನ್​ ಖಾನ್​ ನೀವು ನಿಮ್ಮ ಹಠವನ್ನು ಬದಿಗಿಟ್ಟು, ಕೃಷ್ಣಮೃಗವನ್ನು ಬೇಟೆಯಾಡಿದ್ದಕ್ಕಾಗಿ ಬಿಷ್ಣೋಯ್​ ಸಮುದಾಯಕ್ಕೆ ಕ್ಷಮೆ ಕೇಳಿಬಿಡಿ. ಇಲ್ಲದೆ ಹೋದರೆ, ಈ ರೀತಿಯ ಟಾರ್ಗೆಟೆಡ್​ ಕಿಲ್ಲಿಂಗ್​ಗಳು ಮುಂದುವರಿಯಲಿದೆ ಎಂದಿದ್ದಾರೆ. ಆದರೆ ಈ ಘಟನೆ ಬಗ್ಗೆ ನಟ ಸಲ್ಮಾನ್​ ಇಲ್ಲಿವರೆಗೆ ಯಾವುದೇ ಹೇಳಿಕೆ ನೀಡಿಲ್ಲ, (ಏಜೆನ್ಸೀಸ್​).