ಇಸ್ಕಾನ್ ದೇವಸ್ಥಾನದ ಅಡುಗೆ ಮನೆಯಲ್ಲಿ ಸಿಲಿಂಡರ್ ಸೋರಿಕೆ 
ದೇಶ

ಇಸ್ಕಾನ್ ದೇವಸ್ಥಾನದ ಅಡುಗೆ ಮನೆಯಲ್ಲಿ ಸಿಲಿಂಡರ್ ಸ್ಫೋಟದ ಆತಂಕ: ಕಾನ್‌ಸ್ಟೆಬಲ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ! ISKCON

ಜೈಪುರ: ಕೃಷ್ಣ ಜನ್ಮಾಷ್ಟಮಿ ದಿನವೇ ಜೈಪುರದ ಮುಹಾನಾದಲ್ಲಿರುವ ಇಸ್ಕಾನ್ (ISKCON)​ ದೇವಸ್ಥಾನದ ಅಡುಗೆ ಮನೆಯಲ್ಲಿ ಅಗ್ನಿ ಅವಗಢ ಸಂಭವಿಸಿದ್ದು, ಕಾನ್ಸಸ್ಟೆಬಲ್​ವೊಬ್ಬರ ಸಮಯ ಪ್ರಜ್ಞೆಯಿಂದಾಗಿ ಪರಿಸ್ಥಿತಿ ಹಿಡಿತಕ್ಕೆ ಬಂದಿದೆ ಎಂದು ವರದಿಯಾಗಿದೆ. ಒಮ್ಮೆಲೆ ಸಿಲಿಂಡರ್​ಗೆ ಬೆಂಕಿ ಕಾಣಿಸಿಕೊಂಡ ಹಿನ್ನಲೆ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತೆಂದು ದೇವಸ್ಥಾನದ ಸಿಬ್ಬಂದಿ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸ್ ಸಿಬ್ಬಂದಿ ಶೌರ್ಯ!

ಸಿಲಿಂಡರ್​ಗೆ ಬೆಂಕಿ ಕಾಣಿಸಿಕೊಂಡ ಕೂಡಲೇ ಅಲ್ಲಿದ್ದ ಜನ ಗಾಬರಿಗೊಂಡು ಚಿರುತ್ತಿದ್ದಾಗ, ಕರ್ತವ್ಯನಿರತರಾಗಿದ್ದ ಕಾನ್​ ಸಿಂಗ್​ ಎಂಬ ಪೊಲೀಸ್ ಕಾನ್ಸಸ್ಟೆಬರ್​, ಸಿಲಿಂಡರ್​ ಅನ್ನು ಜನರಿಂದ ದೂರ ತೆಗೆದುಕೊಂಡು ಹೋಗಿದ್ದಾರೆ.
ನಂತರ ಅದಕ್ಕೆ ಗೋಣಿ ಚೀಲ ಹೊದಿಸಿ, ಬೆಂಕಿಯನ್ನು ನಂದಿಸಿ, ನಂತರ ನೀರಿನಿಂದ ಸಿಲಿಂಡರ್​ಅನ್ನು ತೊಳೆದಿದ್ದಾರೆ. ಈ ಮೂಲಕ ದೇವಸ್ಥಾನದಲ್ಲಿ ಸಂಭವಿಸಬಹುದಾಗಿದ್ದ ಭಾರಿ ದುರ್ಘಟನೆಯನ್ನು ಪೊಲೀಸ್​ ಸಿಬ್ಬಂದಿ ತಡೆದಿದ್ದಾರೆ.

ಸುರಕ್ಷತೆ ಹೆಚ್ಚಳ!

ಈ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದ್ದು, ಇಂದು ಸಂಜೆ ಮುಖ್ಯಮಂತ್ರಿ ಭಜನ್​ ಲಾಲ್​ ಶರ್ಮಾ ಇಸ್ಕಾನ್​ಗೆ ಬೇಟಿ ನೀಡುತ್ತಿರುವ ಹಿನ್ನಲೆ ಭದ್ರತೆ ಮಟ್ಟವನ್ನು ಇನ್ನಷ್ಟು ಹೆಚ್ಚಿಸಲಾಗಿದೆ ಎಂದು ತಿಳಿದು ಬಂದಿದೆ. ಸಂಜೆ ಸಿಎಂ ಬೇಟಿಗೂ ಮುನ್ನ ನಡೆದ ಈ ಘಟನೆ ದೇವಸ್ಥಾನ ಸಿಬ್ಬಂದಿ ಹಾಗೂ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದಂತು ಸತ್ಯವಾಗಿದೆ, (ಏಜನ್ಸೀಸ್​).