ಆರೋಪಿ ಕೃಷ್ಣ ಜೈಸ್ವಾಲ್ 
ದೇಶ

50ರವರೆಗಿನ ಮಗ್ಗಿ ಹೇಳಲಿಲ್ಲ ಎಂದು ಅಪ್ರಾಪ್ತ ಮಗಳನ್ನು ಹೊಡೆದು ಕೊಂದ ತಂದೆ; ಬಂಧನ | Father arrested

ಚಂಡೀಗಢ: ಹರಿಯಾಣದ ಚಂಡೀಗಢದಲ್ಲಿ 50ರವರೆಗಿನ ಮಗ್ಗಿಗಳನ್ನು ಹೇಳೋಕೆ ಬರಲ್ಲ ಎಂದು ಒಂದನೇ ತರಗತಿಯ ಅಪ್ರಾಪ್ತ ಮಗಳನ್ನು ಚಪಾತಿ ಮಾಡುವ ಲಟ್ಟಣೆಗೆಯಿಂದ ಹೊಡೆದು ಕೊಂದ ಆರೋಪದ ಮೇಲೆ ಅವಳ ತಂದೆಯನ್ನೇ ಪೊಲೀಸರು ಬಂಧಿಸಿದ್ದಾರೆ ಎಂದು ಶನಿವಾರ(ಜ. 24) ವರದಿಯಾಗಿದೆ.
ಜ. 24ರಂದು ಈ ಘಟನೆ ನಡೆದಿದ್ದು, ಮೊದಲು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆಂದು ನಂಬಿಸಲು ಪ್ರಯತ್ನಿಸಿದ್ದು, ಬಳಿಕ ಅನುಮಾನದ ಮೇರೆಗೆ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ವಿಚಾರಣೆ ನಡೆಸಿದ ಬಳಿಕ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ತಂದೆ ಕೃಷ್ಣ ಜೈಸ್ವಾಲ್​ನನ್ನು ಬಂಧಿಸಿದ್ದಾರೆ.
ಮೂಲತಃ ಉತ್ತರ ಪ್ರದೇಶದವನಾಗಿರುವ ಕೃಷ್ಣ ಜೈಸ್ವಾಲ್, ಹರಿಯಾಣದ ಫರಿದಾಬಾದ್ ಜಿಲ್ಲೆಯ ಝಾರ್ಸೆಂತಲಿ ಗ್ರಾಮದಲ್ಲಿ ಕುಟುಂಬದೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ದಂಪತಿಗಳು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಏಳು ವರ್ಷದ ಮಗ ಸೇರಿ ಇಬ್ಬರು ಚಿಕ್ಕ ಹೆಣ್ಣುಮಕ್ಕಳಿದ್ದಾರೆ.
ಈ ಮಧ್ಯೆ ಜ. 21ರಂದು ಅವರ ನಾಲ್ಕು ವರ್ಷದ ಮಗಳು ಶಾಲೆಗೆ ಹೋಗಿರಲಿಲ್ಲ. ಮನೆಯಲ್ಲೇ ಇದ್ದ ತಂದೆ ಕೃಷ್ಣ ಮಗಳಿಗೆ ಮಗ್ಗಿಗಳನ್ನು ಕಲಿಸಿದ್ದು, ಬಳಿಕ 50ರವರೆಗೆ ಹೇಳದಿದ್ದಕ್ಕೆ ಕೋಪಗೊಂಡು ಚಪಾತಿ ಮಾಡುವ ಲಟ್ಟಣೆಗೆಯಿಂದ ಹೊಡೆದಿದ್ದಾನೆ. ಈ ವೇಳೆ ಮಗುವಿಗೆ ತೀವ್ರ ಪೆಟ್ಟುಬಿದ್ದು, ಪ್ರಜ್ಞೆ ತಪ್ಪಿ ಬಿದ್ದಿದೆ. ಇದರಿಂದ ಆತಂಕಗೊಂಡ ತಂದೆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.
ಬಳಿಕ ಪತ್ನಿಗೆ ಕರೆ ಮಗು ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮೆಟ್ಟಿಲ ಮೇಲಿಂದ ಬಿದ್ದು ಸಾವನ್ನಪ್ಪಿದೆ ಎಂದು ಹೇಳಿದ್ದನು. ಆದರೆ, ಕೆಲಸಕ್ಕೆ ಹೋಗಿದ್ದ ಪತ್ನಿ ತಕ್ಷಣ ಆಸ್ಪತ್ರೆಗೆ ತಲುಪಿದರು. ಮಗಳ ದೇಹದ ಮೇಲೆ ಹಲವು ಗಾಯಗಳನ್ನು ಅವರು ಗಮನಿಸಿ ಪತಿಯೆ ಹೊಡೆದಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಳು. 
ಪತ್ನಿ ನೀಡಿದ ದೂರಿನನ್ವಯ ತಂದೆ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಈ ವೇಳೆ ಆತನನ್ನು ಬಂಧಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ (ಏಜೆನ್ಸೀಸ್).