buses collide | ತಮಿಳುನಾಡಿನಲ್ಲಿ 2 ಬಸ್‌ಗಳು ಡಿಕ್ಕಿ 
ದೇಶ

ತಮಿಳುನಾಡಿನ ಶಿವಗಂಗೆಯಲ್ಲಿ ಎರಡು ಬಸ್ಸುಗಳ ನಡುವೆ ಭೀಕರ ಅಪಘಾತ: 12 ಮಂದಿ ಮೃತ, 40 ಜನರಿಗೆ ಗಂಭೀರ ಗಾಯ | buses collide

ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪತ್ತೂರು ಬಳಿ ಎರಡು ಸರ್ಕಾರಿ ಬಸ್‌ಗಳು ಮುಖಾಮುಖಿ(buses collide) ಡಿಕ್ಕಿ ಹೊಡೆದ ಪರಿಣಾಮ ಒಂದು ಮಗು ಸೇರಿದಂತೆ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, ಅಪಘಾತದಲ್ಲಿ 40 ಜನ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಹಿರಿಯ ಜಿಲ್ಲಾ ಪೊಲೀಸ್ ಅಧಿಕಾರಿಯೊಬ್ಬರು ಡಿಕ್ಕಿಯಲ್ಲಿ 11 ಪ್ರಯಾಣಿಕರು ತಕ್ಷಣವೇ ಸಾವನ್ನಪ್ಪಿದ್ದಾರೆ. ಅಲ್ಲದೆ, ಇದು ಮುಖಾಮುಖಿ ಡಿಕ್ಕಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲವಾದ್ದರಿಂದ ನಾವು ಪರಿಶೀಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ತಮಿಳುನಾಡಿನಲ್ಲಿ ಒಂದು ವಾರದೊಳಗೆ ನಡೆದ ಎರಡನೇ ಅಪಘಾತ ಇದಾಗಿದೆ. ಅಲ್ಲದೆ, ಇದೆ ತಿಂಗಳ ನವೆಂಬರ್ 24 ರಂದು ತೆಂಕಸಿ ಜಿಲ್ಲೆಯ ಇಡೈಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಆರು ಜನರು ಸಾವನ್ನಪ್ಪಿ, 56 ಜನರು ಗಾಯಗೊಂಡಿದ್ದರು.
ಆ ಬಸ್‌ಗಳಲ್ಲಿ ಒಂದು ಮಧುರೈನಿಂದ ಸೆಂಕೊಟ್ಟೈಗೆ ಪ್ರಯಾಣಿಸುತ್ತಿದ್ದು, ಇನ್ನೊಂದು ತೆಂಕಸಿಯಿಂದ ಕೋವಿಲ್‌ಪಟ್ಟಿಗೆ ಹೋಗುತ್ತಿತ್ತು. ಪೊಲೀಸರ ಪ್ರಕಾರ, ಬಸ್ ಚಾಲಕರೊಬ್ಬರು ಅತಿ ವೇಗವಾಗಿ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸಿ ವಿಚಾರಣೆಯ ಭಾಗವಾಗಿ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಈ ಅಪಘಾತಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂ.ಗಳನ್ನು ನೀಡಲಾಗುವುದು. ಇದರ ಜೊತೆಗೆ, ಗಂಭೀರವಾಗಿ ಗಾಯಗೊಂಡವರಿಗೆ ತಲಾ 1 ಲಕ್ಷ ರೂ.ಗಳನ್ನು ನೀಡಲಾಗುವುದು. ಅಲ್ಲದೆ, ಸಣ್ಣಪುಟ್ಟ ಗಾಯಗಳಾದವರಿಗೆ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ ತಲಾ 50,000 ರೂ.ಗಳನ್ನು ನೀಡಲಾಗಿದೆ,(ಏಜೆನ್ಸೀಸ್).