ಆರೋಪಿ ಅಳಿಯ(Son-in-law) ಸೋಹನ್ ಲಾಲ್ 
ದೇಶ

ಕೌಟುಂಬಿಕ ಕಲಹ: ಅತ್ತೆಯ ಮೂಗು ಕತ್ತರಿಸಿ ಎಸ್ಕೇಪ್ ಆದ ಅಳಿಯ; ಪೊಲೀಸರಿಂದ ಮುಂದುವರೆದ ಶೋಧ ಕಾರ್ಯ! Son-in-law

ಪ್ರಮುಖ ಮುಖ್ಯಾಂಶಗಳು

  • ಕೌಟುಂಬಿಕ ಕಲಹದ ಹಿನ್ನಲೆ ಅತ್ತೆಯ ಮೂಗನ್ನು ಕತ್ತರಿಸಿದ ಅಳಿಯ
  • ಕತ್ತರಿ ಮೂಲಕ ಮೂಗನ್ನು ಸಿಳೀದ ಅಳಿಯ ಸೋಹನ್​ ಲಾಲ್​
  • ರಾಜಸ್ಥಾನದ ಜಾಲೋರ್​ನಲ್ಲಿ ನಡೆದ ಘಟನೆ
ರಾಜಸ್ಥಾನ: ಮನೆಯಲ್ಲಿ ನಿರಂತರ ಕೌಟುಂಬಿಕ ಕಲಹ ನಡೆಯುತಿದ್ದ ಹಿನ್ನಲೆಯಲ್ಲಿ ಅಳಿಯ(Son-in-law)ನೊಬ್ಬ ತನ್ನ ಅತ್ತೆಯ ಮೂಗನ್ನೇ ಕತ್ತರಿಸಿರುವ ಘಟನೆ ರಾಜಸ್ಥಾನದ ಜಾಲೋರ್​ನಲ್ಲಿ ವರದಿಯಾಗಿದೆ.
ಆರೋಪಿ ಸೋಹನ್ ಲಾಲ್ ತನ್ನ ಅತ್ತೆ ಕೇಲಿ ದೇವಿಯ ಮೂಗನ್ನು ಕತ್ತರಿಯಿಂದ ಕತ್ತರಿಸಿ ಮನೆಯಿಂದ ಪರಾರಿಯಾಗಿದ್ದು, ಈ ಕುರಿಯು ಪೊಲೀಸ್​ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುತ್ತಿರುವುದಾಗಿ ತಿಳಿದು ಬಂದಿದೆ.

ಹಲ್ಲೆ ನಡೆಸಲು ಕಾರಣವೇನು?

ಆರೋಪಿ ಸೋಹನ್ ಲಾಲ್ ಆರು ವರ್ಷದ ಹಿಂದೆ ಕೇಲಿ ದೇವಿಯ ಮಗಳಾದ ಸರಿತಾಳನ್ನು ಮದುವೆಯಾಗಿದ್ದ. ಆದರೆ ಕಳೆದ ಒಂದು ವರ್ಷದಿಂದ ಈ ದಂಪತಿಗಳಿಬ್ಬರೂ ಬೇರೆ-ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಈ ಕೌಟುಂಬಿಕ ವಿವಾದವನ್ನು ಕೊನೆಗಾಣಿಸಲು ಎರಡೂ ಮನೆಯವರು ಮುಂದಾಗಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಪೊಲೀಸ್​ ಠಾಣೆಗೆ ಹೋಗುತ್ತಿದ್ದಾಗ ಅಟ್ಯಾಕ್​!

ಶನಿವಾರ (ಮಾ.7) ಸಂಜೆ ಮಾತುಕತೆ ನಡೆಸುತ್ತಿದ್ದಾಗ ಪರಸ್ಪರ ಜಗಳವಾಗಿದೆ. ಇದರಿಂದ ಕುಪಿತಗೊಂಡ ಕೇಲಿ ದೇವಿ ಪೊಲೀಸರಲ್ಲಿ ದೂರು ನೀಡುವುದಾಗಿ ಹೇಳಿ ಮನೆಯಿಂದ ಹೊರ ನಡೆದಿದ್ದಾರೆ. ಇನ್ನೇನು ಪೊಲೀಸ್​ ಠಾಣೆ ತಲುಪಬೇಕು ಎನ್ನು ವಷ್ಟರಲ್ಲಿ ಸೋಹನ್ ಲಾಲ್ ಕತ್ತರಿ ಮೂಲಕ ಅತ್ತೆ ಕೇಲಿ ದೇವಿ ಮೇಲೆ ದಾಳಿ ಮಾಡಿದ್ದಾನೆ.

ಪೊಲೀಸರಿಂದ ಮುಂದುವರೆದ ತನಿಖೆ

ಈ ಘಟನೆ ಕುರಿತು ಸರ್ವಾನ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅರೋಪಿ ಸೋಹನ್ ಲಾಲ್​ನನ್ನು ಹುಡುಕುವ ಪ್ರಯತ್ನ ನಡೆಯುತ್ತಿದೆ ಎಂದು ಠಾಣಾಧಿಕಾರಿ ಮೋಹನ್ ಲಾಲ್ ತಿಳಿಸಿದ್ದಾರೆ. ಸಂತ್ರಸ್ತೆ ಕೇಲಿ ದೇವಿ ಅವರನ್ನು ಗುಜರಾತಿನ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಅವರ ಹೇಳಿಕೆಯನ್ನು ಇಲ್ಲಿವರೆಗೆ ದಾಖಲಿಸಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ,(ಏಜನ್ಸೀಸ್​).