- ಮದುವೆಗಾಗಿ ಇಡೀ ಕೋಚ್ ಅನ್ನು ಬುಕ್ ಮಾಡಿದ ಮಾರ್ವಾಡಿ ಕುಟುಂಬ
- ಮಾರ್ವಾಡಿ ಮದುವೆ ಎಂದರೆ ಹೀಗಿರುತ್ತದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೆ
- ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್ ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆ ಹುಟ್ಟುಹಾಕಿದೆ
Indian Railways: ಭಾರತದ ಮದುವೆಯೇ ಒಂದು ವಿಶೇಷತೆ. ಹಳದಿ ಶಾಸ್ತ್ರ, ಬಳೆ, ಮೆಹಂದಿ. ಹೆಣ್ಣು ಮತ್ತು ಗಂಡಿನ ಪರಿಚಯ ಹೀಗೆ ಸಾಕಷ್ಟು ಕೌತುಕಗಳನ್ನು ಹೊತ್ತು ಸಾಗುತ್ತದೆ. ಇಲ್ಲಿನ ವಿವಾಹ ಸಂಭ್ರಮ(Indian Wedding)ಬಣ್ಣ ಹಾಗೂ ಬಾಂಧವ್ಯದಂತಹ ಅದ್ಧೂರಿತನಕ್ಕೆ ಹೆಸರುವಾಸಿ. ಇತ್ತೀಚಿನ ದಿನದಲ್ಲಿ ನವ ಜೋಡಿಗಳು ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ನಾನಾ ಹಾದಿಯಲ್ಲಿ ಹುಡುಕಾಟ ನಡೆಸುತ್ತಾರೆ. ಸದ್ಯ ಅಂತದ್ದೇ ಒಂದು ವಿಶಿಷ್ಟ ಘಟನೆಯೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ಮದುವೆ ಸಮಾರಂಭಕ್ಕೆ ಪ್ರಯಾಣಿಸುವಾಗ ಬಸ್ ಬಳಕೆ ಮಾಡುವುದು ಅಥವಾ ಖಾಸಗಿ ವಾಹನ ಬಳಕೆ ಮಾಡಿಕೊಳ್ಳೋದು ಮಾಮೂಲು, ಆದರೆ, ಈ ಮಾರ್ವಾಡಿ ಕುಟುಂಬವೂ ಭಾರತೀಯ ರೈಲ್ವೆ ಇಲಾಖೆಯ ರೈಲ್ವೆಯ Full Tariff Rate ಯೋಜನೆಯಡಿ ಇಡೀ ಕೋಚ್ ಅನ್ನು ಕಾಯ್ದಿರಿಸುವ ಮೂಲಕ ಎಲ್ಲರ ಗಮನ ಸೆಳೆದಿದೆ.
ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ವಧು-ವರರ ಕುಟುಂಬ ರೈಲ್ವೆ ನಿಲ್ದಾಣದಲ್ಲಿ ಸೇರಿದೆ ಮೊದಲು ಕೇಕ್ ಕತ್ತರಿಸಿ, ನಂತರ ರೈಲನ್ನು ತಳಿರು ತೋರಣ ಹಾಗೂ ಹೂವಿನಿಂದ ಸಿಂಗರಿಸಿದೆ. ರೈಲಿನೊಳಗೆ ಮನೆಗಿಂತಲೂ ಹೆಚ್ಚು ಆರಾಮವಾಗಿ ಹಬ್ಬದ ವಾತಾವರಣ ನಿರ್ಮಾಣ ಮಾಡಿಕೊಂಡಿರುವುದು ಕಾಣಸಿಗುತ್ತದೆ. ಇದರಲ್ಲೇ ನೀರಿನ ಬಾಟಲಿಗಳು, ಬಾಳೆ ಎಲೆ, ಹೊಸ ಪಂಚೆ, ಸೀರೆಗಳನ್ನು ಕ್ಯಾರಿ ಮಾಡಿರುವುದು. ಸಾಲು ಸಾಲು ಹೆಂಗಳೆಯರು ಮಕ್ಕಳು, ಪುರುಷರು ಕುಳಿತುರುವುದು ಕಾಣಿಸುತ್ತದೆ. ಇದರೊಂದಿಗೆ ವಿಡಿಯೋದಲ್ಲಿ ಮಾರ್ವಾಡಿಗಳ ಮದುವೆ ಎಂದರೆ ಹೀಗಿರುತ್ತದೆ ಎನ್ನುವ ಶೀರ್ಷಿಕೆ ಕೊಟ್ಟುಕೊಳ್ಳಲಾಗಿದೆ.
ಇದೊಂದು ಅದ್ಭುತ ಐಡಿಯಾ ಕಡಿಮೆ ಹಣ ಮತ್ತು ವೆಚ್ಚದಲ್ಲಿ ಪ್ರಯಾಣಿಸಲು ಅತ್ಯುತ್ತಮ ಸರಳ ಮಾರ್ಗ ಎಂದು ಶ್ಲಾಘಿಸಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಹೀಗೆ ಬಳಸುವುದರಿಂದ ಇತರ ಪ್ರಯಾಣಿಕರು ಸಮಸ್ಯೆ ಎದುರಿಸುವ ಸಾಧ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್).