ಗಂಡ ನೈಟ್​ ಶಿಫ್ಟ್​ ಡ್ಯೂಟಿಗೆ ಹೋದ ಬೆನ್ನಲ್ಲೇ ಲವರ್​ ಜತೆ ಹೊರಟ ಹೆಂಡ್ತಿ: ಮಾರ್ಗ ಮಧ್ಯೆ ಪತಿ-ಪತ್ನಿಗೆ ಕಾದಿತ್ತು ಶಾಕ್​! Extra Marital affairs 
ದೇಶ

ಗಂಡ ನೈಟ್​ ಶಿಫ್ಟ್​ ಡ್ಯೂಟಿಗೆ ಹೋದ ಬೆನ್ನಲ್ಲೇ ಲವರ್​ ಜತೆ ಹೊರಟ ಹೆಂಡ್ತಿ: ಮಾರ್ಗ ಮಧ್ಯೆ ಪತಿ-ಪತ್ನಿಗೆ ಕಾದಿತ್ತು ಶಾಕ್​! Extra Marital affairs

ಪ್ರಮುಖ ಮುಖ್ಯಾಂಶಗಳು

  • ರಾತ್ರಿ ಪಾಳಯಕ್ಕೆ ತೆರಳಿದ್ದ ಪತಿಗೆ ರಸ್ತೆಬದಿಯ ಸ್ಟಾಲ್‌ನಲ್ಲಿ ಪ್ರೇಮಿಯೊಂದಿಗೆ ಸಿಕ್ಕಿಬಿದ್ದ ಹೆಂಡತಿ
  • ಮೆಮೋಸ್ ತಿನ್ನಲು ಬಂದಿದ್ದ ಪತ್ನಿಯನ್ನು ಮತ್ತೊಬ್ಬ ಪುರುಷನೊಂದಿಗೆ ನೋಡಿ ದಂಗಾದ ಗಂಡ
  • ಸ್ಥಳದಲ್ಲೇ ಗಲಾಟೆ ನಡೆಸಿ ಪ್ರಿಯಕರನ ಮೇಲೆ ಪತಿ ಹಾಗೂ ಪತ್ನಿಯಿಂದಲೇ ಹಲ್ಲೆ
  • ನಡುರಸ್ತೆಯಲ್ಲಿ ನಡೆದ ಈ ಹೈಡ್ರಾಮಾದಿಂದಾಗಿ ಕೆಲಕಾಲ ಅಸ್ತವ್ಯಸ್ತಗೊಂಡ ವಾಹನ ಸಂಚಾರ
ಭೋಪಾಲ್​: ಭಾರತದಲ್ಲಿ ವಿವಾಹ ವ್ಯವಸ್ಥೆಗೆ ಅತ್ಯಂತ ಹೆಚ್ಚಿನ ಗೌರವವಿದ್ದರೂ, ಕೆಲವರು ಕ್ಷಣಿಕ ಸುಖಕ್ಕಾಗಿ ಈ ಪವಿತ್ರ ಸಂಬಂಧಕ್ಕೆ ಕಳಂಕ ತರುತ್ತಿದ್ದಾರೆ. ಅಕ್ರಮ ಸಂಬಂಧಗಳು ( Extra Marital affairs ) ಇಂದು ಅನೇಕ ಸಂಸಾರಗಳನ್ನು ಬೀದಿಪಾಲು ಮಾಡುತ್ತಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿರುವ ಇಂತಹದ್ದೇ ಒಂದು ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಈ ಘಟನೆ ಭೋಪಾಲ್‌ನ ಅಶೋಕ ಗಾರ್ಡನ್ ಪ್ರದೇಶದಲ್ಲಿ ನಡೆದಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗಂಡನು ರಾತ್ರಿ ಪಾಳಿಯ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದ. ಇದೇ ಅವಕಾಶವನ್ನು ಬಳಸಿಕೊಂಡ ಪತ್ನಿ, ತನ್ನ ಬಾಯ್‌ಫ್ರೆಂಡ್ ಜತೆ ರಾತ್ರಿ ವೇಳೆ ರಸ್ತೆಬದಿಯ ಸ್ಟಾಲ್‌ನಲ್ಲಿ ಮೆಮೋಸ್ ತಿನ್ನಲು ತೆರಳಿದ್ದಾಳೆ.
ಆದರೆ, ವಿಧಿ ಹಾಗೂ ಕಾಕತಾಳೀಯ ಎಂಬಂತೆ, ಅದೇ ಸಮಯದಲ್ಲಿ ಅದೇ ಮೆಮೋಸ್ ಸ್ಟಾಲ್‌ಗೆ ಪತಿಯೂ ಬಂದಿದ್ದಾನೆ. ತನ್ನ ಹೆಂಡತಿ ಮತ್ತೊಬ್ಬ ಪುರುಷನ ಜತೆ ಅನ್ಯೋನ್ಯವಾಗಿರುವುದನ್ನು ಕಂಡ ಪತಿಗೆ ಒಂದು ಕ್ಷಣ ಹೃದಯ ನಿಂತಷ್ಟು ನೋವಾಗಿದೆ. ತಕ್ಷಣ ಆಕ್ರೋಶಗೊಂಡ ಪತಿ, ನೇರವಾಗಿ ಇಬ್ಬರನ್ನು ಪ್ರಶ್ನಿಸಿದ್ದರಿಂದ ಅಲ್ಲಿ ದೊಡ್ಡ ಗಲಾಟೆಯೇ ನಡೆಯಿತು.
ಈ ಹೈಡ್ರಾಮಾದ ವೇಳೆ ಆಕ್ರೋಶಭರಿತ ಪತಿ ತನ್ನ ಪ್ರತ್ನಿಯ ಪ್ರಿಯಕರನ ಮೇಲೆ ಹಲ್ಲೆ ಮಾಡಿದನು. ಅಷ್ಟೇ ಅಲ್ಲದೆ, ಗಲಾಟೆಯ ಭರದಲ್ಲಿ ಸ್ವತಃ ಪತ್ನಿಯೂ ಕೂಡ ತನ್ನ ಬಾಯ್‌ಫ್ರೆಂಡ್‌ ಮೇಲೆ ಹಲ್ಲೆ ನಡೆಸಿ ಆಕ್ರೋಶ ಹೊರಹಾಕಿರುವ ವಿಚಿತ್ರ ದೃಶ್ಯ ಕಂಡುಬಂದಿದೆ. ರಸ್ತೆ ಮಧ್ಯೆ ಪತಿ, ಪತ್ನಿ ಹಾಗೂ ಪ್ರೇಮಿಯ ನಡುವೆ ನಡೆದ ಈ ನಡುರಸ್ತೆಯ ಮಾರಾಮಾರಿ ನೋಡುನೋಡುತ್ತಿದ್ದಂತೆ ದೊಡ್ಡ ಜನಸ್ತೂಪವೇ ಅಲ್ಲಿ ನೆರೆದಿತ್ತು.
ಪತಿ-ಪತ್ನಿಯರ ನಡುವಿನ ಈ ಗಲಾಟೆಯಿಂದಾಗಿ ಆ ರಸ್ತೆಯಲ್ಲಿ ಕೆಲಕಾಲ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿ ಸಂಚಾರ ಕೂಡ ಅಸ್ತವ್ಯಸ್ತಗೊಂಡಿತು. ಅಲ್ಲದೆ, ಅಲ್ಲಿದ್ದ ಸಾರ್ವಜನಿಕರು ಈ ಸಂಪೂರ್ಣ ಹೈಡ್ರಾಮಾವನ್ನು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಹಾಗೂ ವೈರಲ್ ಸುದ್ದಿಗೆ ಗ್ರಾಸವಾಗಿದೆ, (ಏಜೆನ್ಸೀಸ್​).