ಲವರ್​ ಜತೆ ಬೆಡ್​ರೂಮ್​ನಲ್ಲಿ ಬೆತ್ತಲೆಯಾಗಿ ಸಿಕ್ಕಿಬಿದ್ದ ಪತ್ನಿಗೆ ಅಲ್ಲಿಯೇ ಮದುವೆ ಮಾಡಿಸಿದ ಪತಿ! Extra Marital affairs  
ದೇಶ

ಲವರ್​ ಜತೆ ಬೆಡ್​ರೂಮ್​ನಲ್ಲಿ ಬೆತ್ತಲೆಯಾಗಿ ಸಿಕ್ಕಿಬಿದ್ದ ಪತ್ನಿಗೆ ಅಲ್ಲಿಯೇ ಮದುವೆ ಮಾಡಿಸಿದ ಪತಿ! Extra Marital affairs

ಪ್ರಮುಖ ಮುಖ್ಯಾಂಶಗಳು

  • ಝಾನ್ಸಿಯಲ್ಲಿ ಲವರ್​ ಜೊತೆ ಬೆಡ್‌ರೂಮ್‌ನಲ್ಲಿ ಸಿಕ್ಕಿಬಿದ್ದ ಹೆಂಡತಿ
  • ಹೆಂಡತಿಯನ್ನು ಆಕೆಯ ಪ್ರಿಯಕರನ ಜತೆ ಮದುವೆ ಮಾಡಿಸಿದ ಗಂಡ
  • ಮಾಹಿತಿ ತಿಳಿಯುತ್ತಿದ್ದಂತೆ ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು
ಲಖನೌ: ಬದುಕಿನ ದಾರಿಯಲ್ಲಿ ನಂಬಿಕೆ ಎನ್ನುವುದು ಅತಿ ಸೂಕ್ಷ್ಮವಾದ ದಾರ. ಆ ದಾರ ಕಿತ್ತು ಹೋಗದಂತೆ ಕಾಪಾಡಿಕೊಳ್ಳುವುದೇ ಎಲ್ಲರ ಜವಾಬ್ದಾರಿ. ಅದರಲ್ಲೂ ಗಂಡ-ಹೆಂಡತಿ ನಡುವಿನ ಸಂಬಂಧಕ್ಕೆ ನಂಬಿಕೆಯೇ ಆಧಾರ. ಆದರೆ, ಇಂದಿನ ಕೆಲ ಅತಿರೇಕದ ವರ್ತನೆಗಳು ಮಾನವೀಯತೆಯ ಗಡಿಯನ್ನೇ ಮೀರಿ ( Extra Marital affairs ) ನಿಲ್ಲುತ್ತಿದ್ದು, ನಂಬಿಕೆಯನ್ನು ಕಾಲ ಕಸಕ್ಕಿಂತ ಕಡೆಯಾಗಿ ನೋಡುತ್ತಿರುವುದಕ್ಕೆ ಈ ಘಟನೆಯೇ ಸಾಕ್ಷಿ.
ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯ ಚಿರಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಹಾಗೂ ನಾಟಕೀಯ ಘಟನೆ ವರದಿಯಾಗಿದೆ. ಅದೇನೆಂದರೆ, ರಾಜೇಶ್ ಪ್ರಜಾಪತಿ ಎಂಬಾತ ತನ್ನ ಹೆಂಡತಿ ಅಭಿಲಾಷಾಳನ್ನು ಆಕೆಯ ಪ್ರೇಮಿಯೊಂದಿಗೆ ಬೆಡ್ ರೂಮ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದು, ಈ ಪ್ರಕರಣ ಅಲ್ಲಿನ ಸ್ಥಳೀಯರ ಸಮ್ಮುಖದಲ್ಲಿ ಹೈಡ್ರಾಮಕ್ಕೆ ಕಾರಣವಾಯಿತು.
ಜೂನ್ 24 ರಂದು ವಿವಾಹವಾಗಿದ್ದ ಈ ದಂಪತಿಯ ಜೀವನದಲ್ಲಿ ಕೇವಲ ಒಂದೇ ತಿಂಗಳಲ್ಲೇ ಅನುಮಾನದ ಕಪ್ಪು ನೆರಳು ಆವರಿಸಿಕೊಳ್ಳಲು ಪ್ರಾರಂಭಿಸಿತು. ಅಭಿಲಾಷಾಗೆ ಮೊದಲೇ ಓರ್ವ ಪ್ರಿಯಕರನಿದ್ದ. ಈ ನಡುವೆ, ಆಗಸ್ಟ್ 19 ರಂದು ಮನೆಯಲ್ಲಿದ್ದ ಬಂಗಾರದ ಆಭರಣಗಳು ನಾಪತ್ತೆಯಾಗಿದ್ದವು. ಈ ಬಗ್ಗೆ ಸರಿಯಾಗಿ ವಿಚಾರಣೆ ನಡೆಸಿದಾಗ ಪತ್ನಿಯೇ ತನ್ನ ಪ್ರೇಮಿಗೆ ಒಡವೆಗಳನ್ನು ಕೊಟ್ಟಿರುವುದು ಬಯಲಿಗೆ ಬಂದಿತು.

ಇದಾದ ಬಳಿಕ ಆಗಸ್ಟ್ 23 ರಂದು ರಾಜೇಶ್ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡು ಅನುಮಾನಗೊಂಡ. ಬಳಿಕ ಮೇಲ್ಛಾವಣಿಯ ಮೂಲಕ ಮನೆಯ ಒಳಗೆ ನುಗ್ಗಿದ್ದಾನೆ. ಈ ವೇಳೆ ಹೆಂಡತಿ ಮತ್ತು ಆಕೆಯ ಪ್ರೇಮಿ ಬೆಡ್​​ರೂಮ್​ನ ಹಾಸಿಗೆಯ ಮೇಲೆ ಸಿಕ್ಕಿಬಿದ್ದಿದ್ದು, ತಕ್ಷಣವೇ ನೆರೆಹೊರೆಯವರಿಗೆ ಹಾಗೂ ಸ್ಥಳೀಯರಿಗೆ ಈ ವಿಷಯವನ್ನು ಮುಟ್ಟಿಸಲಾಗಿದೆ.

ತಕ್ಷಣ ಸ್ಥಳಕ್ಕೆ ಜಮಾಯಿಸಿದ ಗ್ರಾಮಸ್ಥರು ಹಾಗೂ ಸ್ಥಳೀಯರು ಆಕ್ರೋಶಗೊಳ್ಳುವ ಬದಲು, ಆ ಇಬ್ಬರಿಗೂ ಅಲ್ಲಿಯೇ ಬಲವಂತವಾಗಿ ಮದುವೆ ಮಾಡಿಸಿದರು. ಸಿಕ್ಕಿಬಿದ್ದ ಪ್ರಿಯಕರ, ಮಹಿಳೆಗೆ ಸಿಂಧೂರವಿಟ್ಟು, ಪರಸ್ಪರ ಹೂಮಾಲೆ ಹಾಕಿಕೊಳ್ಳುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಆ ಇಬ್ಬರನ್ನು ಕಾನೂನಿಗೆ ಒಪ್ಪಿಸಬೇಕಾದ ಸ್ಥಳೀಯರೇ ಇಂತಹ ಕಾನೂನು ಬಾಹಿರ ಹಾಗೂ ವಿಚಿತ್ರ ತೀರ್ಮಾನ ಕೈಗೊಂಡಿರುವುದು ಇದೀಗ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಈ ಘಟನೆ ತೀವ್ರ ಸ್ವರೂಪ ಪಡೆದುಕೊಂಡ ನಂತರ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ತಕ್ಷಣವೇ ಪತ್ನಿ ಹಾಗೂ ಆಕೆಯ ಪ್ರೇಮಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕೈಗೆತ್ತಿಕೊಂಡವರ ವಿರುದ್ಧ ಮತ್ತು ಇಡೀ ಪ್ರಸಂಗದ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ನಡೆದ ಈ ಕೌಟುಂಬಿಕ ಹಾಗೂ ವಿಚಿತ್ರ ವಿವಾದವು ಸಮಾಜದಲ್ಲಿ ನೈತಿಕತೆ ಮತ್ತು ಕಾನೂನಿನ ಪಾತ್ರದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ,