ಅಯೋಧ್ಯೆ ರಾಮ ಮಂದಿರ ಕಾಣಿಕೆ ಲೂಟಿ ಪ್ರಕರಣ  
ದೇಶ

ಅಯೋಧ್ಯೆ ರಾಮಮಂದಿರ ಟ್ರಸ್ಟ್​ ಮಹತ್ವದ ಸಭೆ ಇಂದು! ಈ ಪ್ರಮುಖ ವಿಷಯಗಳೇ ಚರ್ಚೆ? Ayodhya Ram Mandir

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯೆ ರಾಮನ ಕಾಣಿಕೆ ಲೂಟಿ ಪ್ರಕರಣ
  • ಇಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು ಮಹತ್ವದ ಸಭೆ
  • ಚಂಪತ್​ ರಾಯ್​, ಅನಿಲ್​ ಮಿಶ್ರಾಗೆ ಗೇಟ್​ಪಾಸ್​?
ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಇಂದು ಮಹತ್ವದ ಸಭೆ ನಡೆಸಲಿದೆ (Ayodhya Ram Mandir). ರಾಮನ ಕಾಣಿಕೆ ಲೂಟಿ ಪ್ರಕರಣದ ಸುದೀರ್ಘ ತನಿಖೆಯ ನಡುವೆಯೇ ಈ ದೊಡ್ಡ ಹಗರಣದ ಆರೋಪದ ಹಿನ್ನೆಲೆ ಮತ್ತು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ಸಲ್ಲಿಸಿರುವ ರಾಜೀನಾಮೆಗಳ ಕುರಿತು ನಿರ್ಣಾಯಕ ಚರ್ಚೆ ನಡೆಯಲಿದೆ.
ಚಂಪತ್ ರಾಯ್ ಟ್ರಸ್ಟ್‌ನಲ್ಲಿ ಮುಂದುವರಿಯಬೇಕಾ ಅಥವಾ ಅವರ ರಾಜೀನಾಮೆ ಅಂಗಿಕರಿಸಬೇಕಾ? ಎಂಬ ವಿಷಯ ಚರ್ಚೆಯ ಪ್ರಮುಖ ವಿಷಯವಾಗಿದೆ ಎಂಬುದು ಇಲ್ಲಿ ಗಮನಾರ್ಹ. ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭೆಯನ್ನು ಆರಂಭದಲ್ಲಿ ಮಣಿರಾಮ್ ಕಂಟೋನ್ಮೆಂಟ್‌ನಲ್ಲಿ ನಡೆಸಲು ನಿರ್ಧರಿಸಲಾಗಿದ್ದೇ ಆದರೂ, ನಂತರ ಸ್ಥಳವನ್ನು ರಾಮ ಜನ್ಮಭೂಮಿ ಆವರಣಕ್ಕೆ ಬದಲಾಯಿಸಲಾಗಿದೆ. ಟ್ರಸ್ಟ್‌ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ ದಾಸ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರೆ, ಹಿರಿಯ ಟ್ರಸ್ಟಿ ಕೆ. ಪರಾಶರನ್ ಅವರು ಅನಾರೋಗ್ಯ ಕಾರಣಗಳಿಂದಾಗಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿದೆ.

ಸಭೆಯಲ್ಲಿ ಚರ್ಚಿಸಲಿರುವ ಪ್ರಮುಖ ವಿಷಯಗಳು

ಈ ಸಭೆಯಲ್ಲಿ ಪ್ರಮುಖ ವಿಷಯಗಳನ್ನು ಚರ್ಚೆಯಾಗುವ ನಿರೀಕ್ಷೆಗಳಿವೆ. ಅವುಗಳಲ್ಲಿ, ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರ ರಾಜೀನಾಮೆಗಳ ನಿರ್ಧಾರವು ಅತ್ಯಂತ ನಿರ್ಣಾಯಕವಾಗಿದೆ. ಅಲ್ಲದೆ, ರಾಮ ಮಂದಿರದ ದೇಣಿಗೆ ಕಳ್ಳತನದ ಆರೋಪಗಳ ಕುರಿತು ಎಸ್‌ಐಟಿ ಸಲ್ಲಿಸಿರುವ ಪ್ರಾಥಮಿಕ ವರದಿಯನ್ನು ಪರಿಶೀಲಿಸಲಾಗುವುದು. ಹೆಚ್ಚುತ್ತಿರುವ ಭಕ್ತರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಭವಿಷ್ಯದ ನಿರ್ವಹಣಾ ಕ್ರಮಗಳು, 2025-26ರ ಹಣಕಾಸು ವರ್ಷಕ್ಕೆ ಆದಾಯ ಮತ್ತು ವೆಚ್ಚದ ಖಾತೆಗಳ ಪರಿಶೀಲನೆ ಮತ್ತು ಟ್ರಸ್ಟ್‌ನ ಆಡಳಿತ ವ್ಯವಸ್ಥೆಯಲ್ಲಿ ಮಾಡಬೇಕಾದ ಮಹತ್ವದ ಬದಲಾವಣೆಗಳು ಸಹ ಕಾರ್ಯಸೂಚಿಯಲ್ಲಿವೆ.

ಸಿಇಒ ನೇಮಕದ ಬಗ್ಗೆಯೂ ಚರ್ಚೆ

ಟ್ರಸ್ಟ್‌ನ ಆಡಳಿತವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಹೊಸ ಆಡಳಿತ ವ್ಯವಸ್ಥೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ನೇಮಕದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ ಎನ್ನಲಾಗಿದೆ. ಗೋಪಾಲ್ ರಾವ್ ಅವರ ಪಾತ್ರದ ಬಗ್ಗೆ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಬಳಿಕ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯೆತೆಯಿದೆ.

ರಾಮಮಂದಿರ ಟ್ರಸ್ಟ್‌ನ ಪ್ರಸ್ತುತ ಸದಸ್ಯರು

ಪ್ರಸ್ತುತ, ಟ್ರಸ್ಟ್ ನೃತ್ಯ ಗೋಪಾಲ ದಾಸ್, ವಾಸುದೇವಾನಂದ ಸರಸ್ವತಿ, ವಿಶ್ವಪ್ರಸನ್ನ ತೀರ್ಥ, ಪರಮಾನಂದ ಗಿರಿ, ಗೋವಿಂದ್ ದೇವ್ ಗಿರಿ, ಕೃಷ್ಣ ಮೋಹನ್, ದಿನೇಂದ್ರ ದಾಸ್, ಕೆ. ಪರಾಸರನ್, ಚಂಪತ್ ರಾಯ್, ಅನಿಲ್ ಮಿಶ್ರಾ ಸೇರಿ ಒಟ್ಟು 11 ಸಾಮಾನ್ಯ ಸದಸ್ಯರನ್ನು ಹೊಂದಿದೆ. ಟ್ರಸ್ಟಿ ವಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ ಅವರ ಅಗಲಿಕೆಯಿಂದ ಉಪಾಧ್ಯಕ್ಷ ಹುದ್ದೆ ಸದ್ಯದ ಮಟ್ಟಿಗೆ ಖಾಲಿಯಿದೆ. ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಹಲವಾರು ಹಿರಿಯ ಅಧಿಕಾರಿಗಳು ಸಹ ಟ್ರಸ್ಟ್‌ನ ಪದನಿಮಿತ್ತ ಸದಸ್ಯರಾಗಿ ಮುಂದುವರೆದಿದ್ದಾರೆ.

ತನಿಖೆ ಯಾವ ಹಂತದಲ್ಲಿದೆ?

ರಾಮ ಮಂದಿರದ ದೇಣಿಗೆ ಕಳ್ಳತನದ ಆರೋಪದ ತನಿಖೆ ಪ್ರಸ್ತುತ ಎರಡು ಹಂತಗಳಲ್ಲಿ ನಡೆಯುತ್ತಿದೆ. ಒಂದೆಡೆ, ವಿಶೇಷ ತನಿಖಾ ತಂಡ (ಎಸ್‌ಐಟಿ) ಆಡಳಿತಾತ್ಮಕ ತನಿಖೆ ನಡೆಸುತ್ತಿದ್ದರೆ, ಮತ್ತೊಂದೆಡೆ, ಟ್ರಸ್ಟ್‌ನ ದೂರಿನ ಆಧಾರದ ಮೇರೆಗೆ ಪೊಲೀಸರು ಕ್ರಿಮಿನಲ್ ತನಿಖೆ ಕೈಗೊಂಡಿದ್ದಾರೆ. ಅಧಿಕಾರಿಗಳು ಈಗಾಗಲೇ ಚಂಪತ್ ರಾಯ್, ಅನಿಲ್ ಮಿಶ್ರಾ ಮತ್ತು ವಿಶೇಷ ಆಹ್ವಾನಿತ ಸದಸ್ಯ ಗೋಪಾಲ್ ರಾವ್ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಇಲ್ಲಿಯವರೆಗೆ ಅವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂಬುದು ಗಮನಾರ್ಹ,(ಏಜೆನ್ಸೀಸ್).