9 ವರ್ಷಗಳ ನಂತರ ಕಾಂಗ್ರೆಸ್‌‌ಗೆ ಮರಳಲು ಸಜ್ಜಾದ ಮಾಜಿ ಸಿಎಂ ಶಂಕರ್‌ಸಿಂಗ್ ವಘೇಲಾ 
ದೇಶ

ಗುಜರಾತ್ ರಾಜಕಾರಣದಲ್ಲಿ ದೊಡ್ಡ ಬೆಳವಣಿಗೆ: 9 ವರ್ಷಗಳ ನಂತರ ಕಾಂಗ್ರೆಸ್‌‌ಗೆ ಮರಳಲು ಸಜ್ಜಾದ ಮಾಜಿ ಸಿಎಂ ಶಂಕರ್‌ಸಿಂಗ್ ವಘೇಲಾ! | Shankarsinh Vaghela

ಗಾಂಧಿನಗರ: ಗುಜರಾತಿನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್ ವಘೇಲಾ (Shankarsinh Vaghela) ಅವರು ಮತ್ತೆ ಕಾಂಗ್ರೆಸ್‌ಗೆ ಸೇರುವ ಸುದ್ದಿಗಳು ದೊಡ್ಡ ಮಟ್ಟದಲ್ಲಿ ಹರಿದಾಡುತ್ತಿದ್ದು, ವಘೇಲಾ ಅವರು ಪಕ್ಷಕ್ಕೆ ಮರಳಲು ಒಲವು ತೋರಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಗುಜರಾತ್ ಕಾಂಗ್ರೆಸ್ ರಾಜ್ಯ ಘಟಕವು ಅವರ ಘರ್​ವಾಪ್ಸಿಗೆ ಈಗಾಗಲೇ ಒಪ್ಪಿಗೆ ನೀಡಿದೆ, ಆದರೆ ಪಕ್ಷದ ವರಿಷ್ಠರಿಂದ ಅಂತಿಮ ಅನುಮೋದನೆ ಮಾತ್ರ ಬಾಕಿ ಇದೆ ಎಂದು ತಿಳಿದುಬಂದಿದೆ.

ಮುಂಬರುವ ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಗೆ ಶಂಕರ್‌ಸಿಂಗ್ ವಘೇಲಾ ಅವರನ್ನು ಸ್ಟಾರ್ ಪ್ರಚಾರಕರಾಗಿ ಕಣಕ್ಕಿಳಿಸಲು ಸ್ಥಳೀಯ ಮುಖಂಡರು ಯೋಜನೆ ರೂಪಿಸಿದ್ದು, ಆದಷ್ಟು ಬೇಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಗುಜರಾತ್ ಕಾಂಗ್ರೆಸ್ ಘಟಕ ಬಯಸಿದೆ. ಈ ಕುರಿತು ಕೇಳಿದಾಗ, ಹಿರಿಯ ಕಾಂಗ್ರೆಸ್ ನಾಯಕ ಶಕ್ತಿಸಿನ್ಹ್ ಗೋಹಿಲ್ ಅವರು, ಸರಿಯಾದ ಸಮಯದಲ್ಲಿ ಎಲ್ಲರಿಗೂ ಸರಿಯಾದ ಉತ್ತರ ಸಿಗಲಿದೆ ಎಂದು ಹೇಳುವ ಮೂಲಕ ಸ್ವಲ್ಪ ಸಮಯ ಕಾಯುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ:ಭಿನ್ನಮತದ ಸುದ್ದಿಗೆ ಬ್ರೇಕ್​: ಕಳೆದ ವರ್ಷದ ಫೆಬ್ರವರಿಯಿಂದ ಆಯೋಗದ ಪ್ರತಿಯೊಂದು ನಿರ್ಧಾರವೂ ಒಮ್ಮತದ್ದೇ ಎಂದ ಮೂಲಗಳು! | Election Commission

ವಘೇಲಾ ಹಿನ್ನಲೆ!

ವಘೇಲಾ ಅವರು ಗುಜರಾತ್ ರಾಜಕಾರಣದಲ್ಲಿ ಸುದೀರ್ಘ ಇತಿಹಾಸ ಹೊಂದಿದ್ದಾರೆ. ಅವರು ತಮ್ಮ ರಾಜಕೀಯ ಜೀವನವನ್ನು ಜನಸಂಘದೊಂದಿಗೆ ಪ್ರಾರಂಭಿಸಿದರು ಮತ್ತು ನಂತರ ಕೇಶುಭಾಯ್ ಪಟೇಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸಂಸ್ಥಾಪಕ-ರೂವಾರಿಗಳಲ್ಲಿ ಒಬ್ಬರಾದರು. ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ, ಅವರು 1996 ರಲ್ಲಿ ಬಿಜೆಪಿಯಿಂದ ಹೊರಬಂದು ತಮ್ಮದೇ ಆದ ರಾಷ್ಟ್ರೀಯ ಜನತಾ ಪಕ್ಷವನ್ನು ಸ್ಥಾಪಿಸಿದರು.

ಕಾಂಗ್ರೆಸ್ ಬೆಂಬಲದೊಂದಿಗೆ 1996 ರಿಂದ 1997 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು, 1998 ರಲ್ಲಿ ತಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದರು. ಮುಂದಿನ ಎರಡು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು, ಯುಪಿಎ ಸರ್ಕಾರದಲ್ಲಿ ಕೇಂದ್ರ ಜವಳಿ ಸಚಿವರಾಗಿ ಮತ್ತು ಗುಜರಾತ್ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದರು. ಬಳಿಕ 2017ರಲ್ಲಿ ಅವರು ಕಾಂಗ್ರೆಸ್‌ನೊಂದಿಗೆನ ತಮ್ಮ ಸಂಬಂಧವನ್ನು ಕಡಿದುಕೊಂಡಿದ್ದರು.

ಪ್ರಾದೇಶಿಕ ಮಹಾನಗರ ಪಾಲಿಕೆ ಚುನಾವಣೆಗಳು ಮತ್ತು ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಗಳಿಗಾಗಿ ಅವರ ರಾಜಕೀಯ ಅನುಭವವನ್ನು ಬಳಸಿಕೊಳ್ಳಲು ಗುಜರಾತ್ ಕಾಂಗ್ರೆಸ್ ಬಯಸಿದ್ದು, ಸದ್ಯಕ್ಕೆ, ಪಕ್ಷದ ಕಾರ್ಯಕರ್ತರು ವರಿಷ್ಠರ ಅಂತಿಮ ನಿರ್ಧಾರಕ್ಕಾಗಿ ಕಾಯುತ್ತಿದ್ದಾರೆ(ಏಜೆನ್ಸೀಸ್​).