Tech To Food Business ಸಾಂದರ್ಭಿಕ ಚಿತ್ರ 
ದೇಶ

ಗೂಗಲ್‌ನಲ್ಲಿ 4.2 ಕೋಟಿ ಸಂಬಳದ ಕೆಲಸ ಬಿಟ್ಟ ಟೆಕ್ಕಿ; ಹಲಾಲ್ ಬಾರ್ಬೆಕ್ಯೂ ಮಾರಿ ಈಗ ಗಳಿಸುತ್ತಿರುವುದು ಎಷ್ಟು ಗೊತ್ತಾ? Tech To Food Business

Tech To Food Business: ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ವಲಯದ ಒತ್ತಡದ ಜೀವನ ಮತ್ತು ಯಾಂತ್ರಿಕತೆಗೆ ಬೇಸತ್ತು, ತಮ್ಮದೇ ಆದ ಸ್ವತಂತ್ರ ಉದ್ಯಮ ಆರಂಭಿಸುವ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಅತ್ಯಂತ ಆಕರ್ಷಕ ಮತ್ತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವ ಉದಾಹರಣೆಯೆಂದರೆ 35 ವರ್ಷದ ಸಾಫ್ಟ್‌ವೇರ್ ಇಂಜಿನಿಯರ್ ಸಲಾಹೋದೀನ್ ಅಬ್ದುಲ್-ಕಾಫಿ ಅವರ ಕಥೆ.
ಮೈಕ್ರೋಸಾಫ್ಟ್, ಗೂಗಲ್, ಯೂಟ್ಯೂಬ್ ಮತ್ತು ಕ್ರೂಸ್‌ನಂತಹ ವಿಶ್ವದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಬರೋಬ್ಬರಿ 14 ವರ್ಷಗಳ ಕಾಲ ಕೆಲಸ ಮಾಡಿದ್ದ ಇವರು, ವಾರ್ಷಿಕ 4.25 ಕೋಟಿ ರೂಪಾಯಿ ಸಂಬಳ ತರುತ್ತಿದ್ದ ತಮ್ಮ ಐಷಾರಾಮಿ ಕೆಲಸವನ್ನು ತೊರೆದು, ಅಮೆರಿಕದ ಟೆಕ್ಸಾಸ್​ನಲ್ಲಿ ಸ್ವಂತವಾಗಿ ಹಲಾಲ್​ ಬಾರ್ಬೆಕ್ಯೂ ರೆಸ್ಟೋರೆಂಟ್​ ತೆರೆಯಲು ನಿರ್ಧರಿಸುವುದಾಗಿ ತಿಳಿಸಿದ್ದಾರೆ. 
ಕಾರ್ಪೊರೇಟ್ ಜಗತ್ತಿನಿಂದ ಹೊರಬಂದ ಅಬ್ದುಲ್-ಕಾಫಿ, ಕೇವಲ ಹಣದ ಹಿಂದೆ ಓಡುವುದನ್ನು ನಿಲ್ಲಿಸಿ ಶೇಕಡಾ 50 ಕ್ಕಿಂತ ಹೆಚ್ಚು ವೇತನ ಕಡಿತವನ್ನು ಸ್ವೀಕರಿಸಿದರು. ಭಾರಿ ಸಂಬಳದ ಆಸೆಯನ್ನು ತೊರೆದ ಅವರು, ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿದ್ದ ಸ್ಯಾನ್ ಫ್ರಾನ್ಸಿಸ್ಕೋ ನಗರವನ್ನು ಬಿಟ್ಟು ಧಾರ್ಮಿಕ ಲಾಭರಹಿತ ಸಂಸ್ಥೆಯೊಂದನ್ನು ಸೇರಿಕೊಂಡರು. ಆದಾಗ್ಯೂ, ಈ ಸಂಸ್ಥೆಯಲ್ಲಿ ದಿನದ ಕೆಲಸ ಮುಗಿದ ನಂತರ, ಅವರು ತಮ್ಮ ಸ್ನೇಹಿತರಿಗಾಗಿ ವಿಶೇಷ ಭೋಜನ ಕೂಟಗಳು ಮತ್ತು ಬಾರ್ಬೆಕ್ಯೂ ಪಾರ್ಟಿಗಳನ್ನು ಆಯೋಜಿಸಲು ಪ್ರಾರಂಭಿಸಿದರು. ಇವರ ಕೈರುಚಿಯನ್ನು ಸವಿದ ನಂತರ ಅವರ ಸ್ನೇಹಿತರು ಅವರ ಅಡುಗೆ ಶೈಲಿಯನ್ನು ಇಲ್ಲಿಯವರೆಗೂ ಯಾರೂ ಪ್ರಯತ್ನಿಸಿಲ್ಲ ಎಂದು ಹೇಳಿದರು. 
"ಟೆಕ್ಸಾಸ್ ಬಾರ್ಬೆಕ್ಯೂನಲ್ಲಿ ಈಗಾಗಲೇ ಇಲ್ಲದಿರುವ ರೆಸಿಪಿಯನ್ನು ಮಾಡಲು ಸ್ಥಳವಿದಿಯೇ ಎಂದು ನಾನು ಯೋಚಿಸಲು ಪ್ರಾರಂಭಿಸಿದರು. ನಂತರ ಕಾಫಿ ಬಾರ್ಬೆಕ್ಯೂ ಡಿಸೆಂಬರ್ 2024 ರಲ್ಲಿ ಪ್ರಾರಂಭಿಸಿದೆವು. ಆದಾಗ್ಯೂ, ಮೂರು ದಿನಗಳವರೆಗೆ ಸಾಕಷ್ಟು ಬಾರ್ಬೆಕ್ಯೂ ತಯಾರಿಸಿದ್ದೇವೆ ಅವುಗಳನ್ನು ಮೊದಲ ದಿನವೇ ಮಾರಾಟ ಮಾಡಿದ್ದೇವೆ ಎಂದು ಅಬ್ಧುಲ್  ಬಿಸಿನೆಸ್ ಇನ್ಸೈಡರ್‌ಗೆ ತಿಳಿಸಿದ್ದಾರೆ. 
ಈ ಆಹಾರವು ರಾಜ್ಯ ಮತ್ತು ದೇಶಾದ್ಯಂತ ಶೀಘ್ರ ಜನಪ್ರಿಯತೆಯನ್ನು ಗಳಿಸುವುದರ ಜೊತೆಗೆ ಈ ವರ್ಷ ನಮ್ಮ ರೆಸ್ಟೋರೆಂಟ್  ಬರೋಬ್ಬರಿ 37.8 ಕೋಟಿ ರೂ. ಆದಾಯವನ್ನು ಗಳಿಸಿತು ಎಂದು ಅವರು ಹೇಳಿಕೊಂಡಿದ್ದಾರೆ. 
ಕಳೆದ ವರ್ಷ ನಾವು 21.7 ಕೋಟಿ ರೂ. ಆದಾಯ ಗಳಿಸಿದ್ದೇವೆ. ಈ ವರ್ಷ ನಾವು 37.8 ಕೋಟಿ ರೂ ಆದಾಯವನ್ನು ತಲುಪುವ ನಿರೀಕ್ಷೆ ಇದೆ. ಆದಾಗ್ಯೂ, ನಾನು ಇನ್ನೂ ತೆರೆದಾಗಿನಿಂದ ಒಂದೇ ಒಂದು ಡಾಲರ್ ಪಾವತಿಸಿಲ್ಲ ಮತ್ತು ನನ್ನ ಉಳಿತಾಯದಿಂದ ಬದುಕುತ್ತಿದ್ದೇನೆ ಎಂದು ಅವರು ಹೇಳಿದರು.

ಚಾಲನೆಯ ಹೆಚ್ಚಿನ ವೆಚ್ಚ

ರೆಸ್ಟೋರೆಂಟ್ ವ್ಯವಹಾರವು ಅತ್ಯಂತ ಯಶಸ್ವಿಯಾಗಿ ಉತ್ತುಂಗಕ್ಕೇರುತ್ತಿದ್ದರೂ ಸಹ, ಅಬ್ದುಲ್-ಕಾಫಿ ಅವರು ತಮ್ಮ ಭವಿಷ್ಯದ ಬಗ್ಗೆ ತೀವ್ರ ಎಚ್ಚರಿಕೆಯೊಂದಿಗೆ ಆಶಾವಾದವನ್ನು ಹೊಂದಿದ್ದಾರೆ. ಪ್ರಸ್ತುತ ಈ ಉದ್ಯಮವು ಲಾಭದಾಯಕವಾಗಿ ಮುನ್ನಡೆಯುತ್ತಿದೆಯಾದರೂ, ರೆಸ್ಟೋರೆಂಟ್ ಆರಂಭಿಸಲು ತಗುಲಿದ ಸುಮಾರು 8.3 ಕೋಟಿಗೂ ಬೃಹತ್ ಹೂಡಿಕೆಯ ವೆಚ್ಚವನ್ನು ಅವರು ಇನ್ನೂ ಸಂಪೂರ್ಣವಾಗಿ ಮರುಪಾವತಿಸಿಲ್ಲ ಎಂಬುದನ್ನು ನೆನಪಿಸಿಕೊಂಡಿದ್ದಾರೆ.
ಅಬ್ದುಲ್-ಕಾಫಿ ರೆಸ್ಟೋರೆಂಟ್ ನಡೆಸುವ ಹೆಚ್ಚಿನ ವೆಚ್ಚವನ್ನು ಎತ್ತಿ ತೋರಿಸಿದರು, ಮಾಸಿಕ ವೆಚ್ಚಗಳು 215,000 ಮೀರಿದೆ ಎಂದು ಗಮನಿಸಿದರು. ಇದರಲ್ಲಿ ಆಹಾರಕ್ಕಾಗಿ 125,000, ಕಾರ್ಮಿಕರಿಗೆ 50,000 ಮತ್ತು ಬಾಡಿಗೆಗೆ 15,000 ಸೇರಿವೆ, ಜೊತೆಗೆ ಮಾರ್ಕೆಟಿಂಗ್ ಮತ್ತು ಇತರ ಚಟುವಟಿಕೆಗಳಿಗೆ ಸಾವಿರಾರು ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾರೆ (ಏಜೆನ್ಸೀಸ್​).