ಬೀದಿಯಲ್ಲಿ ಚೆಲ್ಲಿದ ಮಣ್ಣಿನಲ್ಲಿ ಬಂಗಾರ: ಮರಳನ್ನು ಸಂಗ್ರಹಿಸಲು ಮುಗಿಬೀಳುತ್ತಿರುವ ಜನರು! ಏಕೆ ಗೊತ್ತಾ? Sand 
ದೇಶ

ಬೀದಿಯಲ್ಲಿ ಚೆಲ್ಲಿದ ಮಣ್ಣಿನಲ್ಲಿ ಬಂಗಾರ: ಮರಳನ್ನು ಸಂಗ್ರಹಿಸಲು ಮುಗಿಬೀಳುತ್ತಿರುವ ಜನರು! ಏಕೆ ಗೊತ್ತಾ? Sand

ಪ್ರಮುಖ ಮುಖ್ಯಾಂಶಗಳು

  • ಚಿನ್ನ ಇಂದು ಯಾವ ಮಟ್ಟಕ್ಕೆ ತಲುಪಿದೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ
  • ಐದು ವರ್ಷಗಳ ಹಿಂದೆ ಪ್ರತಿ ಗ್ರಾಂಗೆ 5 ಸಾವಿರ ಇದ್ದ ಚಿನ್ನ ಇಂದು 15 ಸಾವಿರಕ್ಕೆ ತಲುಪಿದೆ
  • ಕೆಲವೇ ವರ್ಷಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 20 ಸಾವಿರ ತಲುಪಿದರೆ ಅಚ್ಚರಿಪಡಬೇಕಿಲ್ಲ
  • ಚಿನ್ನ ಇಷ್ಟೊಂದು ದುಬಾರಿಯಾಗಿರುವಾಗ ಚಿನ್ನದ ಸಣ್ಣ ತುಣುಕುಗಳು ರಸ್ತೆ ಬದಿಯಲ್ಲಿ ಸಿಕ್ಕರೆ ಬಿಡ್ತಾರಾ?
Sand : ಚಿನ್ನ ಇಂದು ಯಾವ ಮಟ್ಟಕ್ಕೆ ತಲುಪಿದೆ ಅನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಐದು ವರ್ಷಗಳ ಹಿಂದೆ ಪ್ರತಿ ಗ್ರಾಂಗೆ 5 ಸಾವಿರ ಇದ್ದ ಚಿನ್ನ ಇಂದು 15 ಸಾವಿರಕ್ಕೆ ತಲುಪಿದೆ. ಅಷ್ಟೇ ಅಲ್ಲ, ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರುತ್ತಲೇ ಇದೆ. ಕೆಲವೇ ವರ್ಷಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 20 ಸಾವಿರ ತಲುಪಿದರೆ ಅಚ್ಚರಿಪಡಬೇಕಿಲ್ಲ.
ಚಿನ್ನ ದುಬಾರಿಯಾಗಿ ಜನ ಸಾಮಾನ್ಯರ ಕೈಗೆಟುಕದೇ ದೂರ ಸರಿಯುತ್ತಿದ್ದರೂ ಚಿನ್ನದ ಮೇಲಿನ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಏಕೆಂದರೆ, ಈ ಚಿನ್ನ ನಮ್ಮ ಭಾರತೀಯ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದೆ. ಮದುವೆ ಸೇರಿದಂತೆ ಯಾವುದೇ ಶುಭ ಸಮಾರಂಭಗಳು ಎದುರಾದರೂ ಚಿನ್ನ ಖರೀದಿ ಮಾಡುವುದು ವಾಡಿಕೆಯಾಗಿದೆ. ಹೀಗಾಗಿ ಭಾರತದಲ್ಲಿ ಚಿನ್ನದ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ. ಚಿನ್ನ ಇಷ್ಟೊಂದು ದುಬಾರಿಯಾಗಿರುವಾಗ ಚಿನ್ನದ ಸಣ್ಣ ತುಣುಕುಗಳು ರಸ್ತೆ ಬದಿಯಲ್ಲಿ ಸಿಗುತ್ತವೆ ಅಂದರೆ ಯಾರಾದರೂ ಬಿಡುತ್ತಾರಾ? ಖಂಡಿತ ಬಿಡುವುದಿಲ್ಲ.
ಚಿನ್ನದ ಅಂಗಡಿಗಳು ಮತ್ತು ಆಭರಣ ಕಾರ್ಖಾನೆಗಳಿಂದ ಮರಳಿಗೆ ಭಾರಿ ಬೇಡಿಕೆಯಿದೆ. ಇದೇನಪ್ಪಾ ಚಿನ್ನಕ್ಕೆ ಬೇಡಿಕೆ ಇರುವುದೇನೋ ಸರಿ ಮರಳಿಗೆ ಬೇಡಿಕೆ ಇರೋದೇಕೆ? ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. ನಾವು ಹೇಳುತ್ತಿರುವುದು ಏನೆಂದರೆ, ಚಿನ್ನದ ಅಂಗಡಿಗಳಿಂದ ಬಿದ್ದು ಮಣ್ಣು ಅಥವಾ ಮರಳಿನೊಂದಿಗೆ ಬೆರೆಯುವ ಚಿನ್ನದ ಕಣಗಳಿಗೆ ಭಾರಿ ಬೇಡಿಕೆ ಇದೆ. ಮರಳಿನಲ್ಲಿ ಬೆರೆಯುವ ಚಿನ್ನವನ್ನು ಸಂಗ್ರಹಿಸುವುದೇ ಕೆಲ ಮಂದಿಗೆ ಕಾಯಕವಾಗಿದೆ. ಈ ಹಿಂದೆ ಮರಳನ್ನು ಸಂಗ್ರಹಿಸಲೆಂದೇ ಜನರು ತಮಿಳುನಾಡಿನಿಂದ ಕೇರಳಕ್ಕೆ ಬರುತ್ತಿದ್ದರಂತೆ. ತ್ರಿಶೂರ್​​ನಲ್ಲಿ ಚಿನ್ನದ ಮಾರುಕಟ್ಟೆ ಇದ್ದು, ಅಲ್ಲಿ ಮರಳನ್ನು ಸಂಗ್ರಹಿಸಲು ಜನರು ಬರುತ್ತಿದ್ದರು.
ಅಂದಹಾಗೆ, ಈ ಹಿಂದಿನ ಕಾಲದಲ್ಲಿ ಮಣ್ಣಿನ ಅಚ್ಚುಗಳನ್ನು ಬಳಸಿ ಚಿನ್ನದ ಆಭರಣಗಳನ್ನು ತಯಾರಿಸುತ್ತಿದ್ದಾಗ, ಮಣ್ಣಿನಲ್ಲಿ ಚಿನ್ನದ ಸಣ್ಣ ಸಣ್ಣ ತುಣುಕುಗಳು ಸಿಗುವುದು ಸಾಮಾನ್ಯವಾಗಿತ್ತು. ಆದರೆ, ಇಂದು ಆಧುನಿಕ ಯಂತ್ರೋಪಕರಣಗಳ ಬಳಕೆಯಿಂದಾಗಿ ಮಣ್ಣಿನಲ್ಲಿ ಈ ಮೊದಲಿಗಿಂತ ಅಷ್ಟೊಂದು ಪ್ರಮಾಣದಲ್ಲಿ ಚಿನ್ನದ ಕಣಗಳು ಸಿಗುತ್ತಿಲ್ಲ. ಆದರೂ ಸಹ, ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಚಿನ್ನದ ಕಣಗಳು ಪತ್ತೆಯಾಗುತ್ತಿರುವ ವರದಿಗಳಿವೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ, ಇಂತಹ ಸಣ್ಣ ಕಣಗಳು ಸಿಕ್ಕರೂ ಸಹ ಜನರು ಬಹಳ ಸಂತೋಷಪಡುತ್ತಾರೆ.
ಇದೇ ಕಾರಣಕ್ಕೆ, ಇಂದಿಗೂ ಅನೇಕ ಜನರು ಚಿನ್ನದ ಅಂಗಡಿಗಳ ಮುಂಭಾಗದ ಅಂಗಳದಲ್ಲಿ ಮಣ್ಣನ್ನು ಜರಡಿ ಹಿಡಿದು ಚಿನ್ನದ ಕಣಗಳಿಗಾಗಿ ಹುಡುಕಾಟ ನಡೆಸುತ್ತಾರೆ. ಕೇರಳದ ತ್ರಿಶೂರ್‌ನಲ್ಲಿ ಇಂತಹ ಮಣ್ಣಿನ ಕಣಗಳಿಂದ ಚಿನ್ನವನ್ನು ಹೊರತೆಗೆಯುವ ಮೂರು ಪ್ರಮುಖ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಈ ರೀತಿ ಮಣ್ಣಿನಿಂದ ಸಂಗ್ರಹಿಸಿದ ಚಿನ್ನದ ಕಣಗಳನ್ನು ಮರಳಿ ಚಿನ್ನದ ಅಂಗಡಿಗಳಿಗೆ ನೀಡಿದರೆ, ಬದಲಾಗಿ ಹಣವನ್ನು ಪಡೆಯಬಹುದಾಗಿದೆ.
ಸಾಮಾನ್ಯವಾಗಿ ಚಿನ್ನದ ಕೆಲಸ ನಡೆಯುವ ಹಳೆಯ ಪೇಟೆಗಳು, ಆಭರಣ ತಯಾರಿಕಾ ಘಟಕಗಳಿರುವ ಬಜಾರ್‌ಗಳು ಮತ್ತು ಚಿನ್ನದ ಅಂಗಡಿಗಳ ಮುಂದಿನ ಚರಂಡಿ ಹಾಗೂ ರಸ್ತೆಗಳ ಮರಳಿನಿಂದ ಚಿನ್ನದ ಕಣಗಳನ್ನು ತೆಗೆಯಲಾಗುತ್ತದೆ. ಆಭರಣಗಳನ್ನು ತಯಾರಿಸುವಾಗ ಅಥವಾ ಪಾಲಿಶ್ ಮಾಡುವಾಗ ಉಂಟಾಗುವ ಅತ್ಯಂತ ಸೂಕ್ಷ್ಮವಾದ ಚಿನ್ನದ ಧೂಳು ಮಣ್ಣಿನಲ್ಲಿ ಬೆರೆತಿರುತ್ತದೆ. ಇದನ್ನು ಕಲೆಹಾಕಿ ವಿಶೇಷವಾಗಿ ಸಂಸ್ಕರಿಸುವ ಮೂಲಕ ಚಿನ್ನವನ್ನು ಬೇರ್ಪಡಿಸುತ್ತಾರೆ. ಕರ್ನಾಟಕದ ಹಳೇ ಬೆಂಗಳೂರಿನ ಅರಳೇಪೇಟೆ ಮತ್ತು ಫ್ಲವರ್ ಸ್ಟ್ರೀಟ್‌ನಂತಹ ಪ್ರದೇಶಗಳಲ್ಲಿ ಹಾಗೂ ಕೇರಳದ ತ್ರಿಶೂರ್‌ನಂತಹ ಪ್ರಮುಖ ಚಿನ್ನದ ಮಾರುಕಟ್ಟೆ ಇರುವ ನಗರಗಳಲ್ಲಿ ಇಂದಿಗೂ ಅನೇಕರು ಈ ಕಾಯಕದಲ್ಲಿ ತೊಡಗಿರುವುದನ್ನು ಕಾಣಬಹುದು, (ಏಜೆನ್ಸೀಸ್​).