ಇದು ಕೋತಿಯಿಂದಲೂ ಸಾಧ್ಯವಿಲ್ಲ... 4 ಮಿಲಿಯನ್ ವೀಕ್ಷಣೆ ಕಂಡ ಈ ವೈರಲ್ ವಿಡಿಯೋ ಅಮ್ಮಂದಿರಿಗೆ ಅರ್ಪಣೆ! Monkey
- ತಾಯಂದಿರು ತಮ್ಮ ಮಕ್ಕಳನ್ನು ಎಷ್ಟು ಮುದ್ದು ಮಾಡುತ್ತಾರೋ ತಪ್ಪು ಮಾಡಿದಾಗಲೂ ಅಷ್ಟೇ ದಂಡಿಸುತ್ತಾರೆ
- ಅಪ್ಪನ ಕೈಯಿಂದ ತಪ್ಪಿಸಿಕೊಳ್ಳಬಹುದು ಆದರೆ, ಅಮ್ಮನ ಕೈನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ
- ಮಕ್ಕಳು ಏನಾದರೂ ಎಡವಟ್ಟು ಮಾಡಿದಾಗ ತಾಯಿಯ ಬೈಗುಳಗಳನ್ನು ತಡೆಯಲು ಸಾಧ್ಯವೇ ಇಲ್ಲ
- ನಮ್ಮ ಭಾರತೀಯ ತಾಯಂದಿರೂ ಪ್ರಾಣಿಗಳನ್ನು ಸುಮ್ಮನೇ ಬಿಡುವುದಿಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ
Monkey : ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಿರುತ್ತಲೇ ಇರುತ್ತವೆ. ಅವುಗಳಲ್ಲಿ ಕೆಲವೇ ಕೆಲವು ವಿಡಿಯೋಗಳು ವಿಶೇಷ ಕಾರಣಕ್ಕೆ ನೆಟ್ಟಿಗರ ಗಮನವನ್ನು ಸೆಳೆದು ಕ್ಷಣಾರ್ಧದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರಿಕೊಂಡಿದೆ.
ತಾಯಂದಿರು ತಮ್ಮ ಮಕ್ಕಳನ್ನು ಎಷ್ಟು ಮುದ್ದು ಮಾಡುತ್ತಾರೋ ತಪ್ಪು ಮಾಡಿದಾಗಲೂ ಅಷ್ಟೇ ದಂಡಿಸುತ್ತಾರೆ. ಅಪ್ಪನ ಕೈಯಿಂದ ತಪ್ಪಿಸಿಕೊಳ್ಳಬಹುದು ಆದರೆ, ಅಮ್ಮನ ಕೈನಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಮಕ್ಕಳನ್ನು ಸರಿಯಾದ ದಿಕ್ಕಿಗೆ ತರುವಲ್ಲಿ ತಾಯಿಯು ಮಹತ್ವದ ಪಾತ್ರ ವಹಿಸುತ್ತಾಳೆ. ಮಕ್ಕಳು ಏನಾದರೂ ಎಡವಟ್ಟು ಮಾಡಿದಾಗ ಅಥವಾ ತಪ್ಪು ಮಾಡಿದಾಗ ತಾಯಿಯ ಬೈಗುಳಗಳನ್ನು ತಡೆಯಲು ಸಾಧ್ಯವೇ ಇಲ್ಲ. ಮಕ್ಕಳು ಮಾತ್ರವಲ್ಲ ಪ್ರಾಣಿಗಳು ಕೂಡ ತಪ್ಪು ಮಾಡುತ್ತಿವೆ ಅಂತಾ ಗೊತ್ತಾದಾಗ ನಮ್ಮ ಭಾರತೀಯ ತಾಯಂದಿರೂ ಪ್ರಾಣಿಗಳನ್ನು ಸುಮ್ಮನೇ ಬಿಡುವುದಿಲ್ಲ ಅನ್ನೋದಕ್ಕೆ ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋ ತಾಜಾ ಸಾಕ್ಷಿಯಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವಿಡಿಯೋದಲ್ಲಿ ಕೋತಿಯೊಂದು ಸೋಪು ತಿನ್ನಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸೋಪು ತಿನ್ನಲು ಪ್ರಯತ್ನಿಸುತ್ತಿರುವ ಕೋತಿಯನ್ನು ನೋಡಿದ ಮಹಿಳೆ, ತಕ್ಷಣ ಅದನ್ನು ಗದರಿಸಿ ಸೋಪು ಕೆಳಗೆ ಇಡಲು ಕೇಳುತ್ತಾಳೆ. ಅಲ್ಲದೆ, ಕೋತಿಗೆ ಏರು ಧ್ವನಿಯಿಂದ ಬೈಯುತ್ತಾಳೆ. ಕೊನೆಗೆ ಆಲೂಗೆಡ್ಡೆಯ ಆಮಿಷ ನೀಡಿ, ಸೋಪು ಇಡುವ ಬಾಕ್ಸ್ ಅನ್ನು ಕಳಗೆ ಬೀಸಾಡುವಂತೆ ಕೇಳುತ್ತಾಳೆ. ಅಂತಿಮವಾಗಿ ಕೋತಿ ಆ ಬಾಕ್ಸ್ ಅನ್ನು ಎಸೆದು ಮಹಿಳೆ ಕೊಡುವ ಆಲೂಗೆಡ್ಡೆಯನ್ನು ತೆಗೆದುಕೊಳ್ಳುತ್ತದೆ. ಇದನ್ನು ನೋಡಿದ ಆ ಮಹಿಳೆಯ ಪುತ್ರ ಜೋರಾಗಿ ನಗುತ್ತಾ, "ತಾಯಂದಿರು ಯಾವಾಗಲೂ ತಾಯಂದಿರೇ" ಎನ್ನುತ್ತಾರೆ. ವಿಡಿಯೋ ಶೀರ್ಷಿಕೆಯಲ್ಲೂ ಅದನ್ನೇ ಬರೆದಿದ್ದಾನೆ.
ಸದ್ಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಮಗನಿಸಿದ್ದನ್ನು ಕಾಮೆಂಟ್ ಮೂಲಕ ತಿಳಿಸುತ್ತಿದ್ದಾರೆ. ತಾಯಿಯ ಬೈಗುಳದಿಂದ ಕೋತಿ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ತಾಯಿ ಮಾತ್ರ ಅದನ್ನು ಅರ್ಥಮಾಡಿಕೊಳ್ಳಬಲ್ಲಳು, ಇದು ತುಂಬಾ ಒಳ್ಳೆಯ ವಿಡಿಯೋ, ಕೋತಿ ನೋಡಲು ತುಂಬಾ ಮುದ್ದಾಗಿದೆ, ಬಡ ತಾಯಿ, ಕೋತಿಯ ಮೇಲಿನ ಪ್ರೀತಿಯನ್ನು ನೀವು ನೋಡಿದ್ದೀರಾ?, ಆ ತಾಯಿಗೆ ಒಳ್ಳೆಯ ಹೃದಯವಿದೆ. ಸೋಪು ತಿಂದಿದ್ದರೆ, ಕೋತಿಯ ಜೀವಕ್ಕೆ ಅಪಾಯಕಾರಿಯಾಗುತ್ತಿತ್ತು ಎಂದೆಲ್ಲ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ.
ಈ ವೈರಲ್ ವಿಡಿಯೋ ನೋಡಿ ನಿಮಗೆ ಏನು ಅನಿಸಿತು ಅನ್ನೋದನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ, (ಏಜೆನ್ಸೀಸ್).