Volcano  
ದೇಶ

ಭಾರತದತ್ತ ತಲುಪಿದ ಇಥಿಯೋಪಿಯಾ ಜ್ವಾಲಾಮುಖಿ ಹೊಗೆ: ವಿಮಾನಗಳ ಹಾರಾಟ ರದ್ದು! | Volcano

ನವದೆಹಲಿ: ಇಥಿಯೋಪಿಯಾದ ಹೈಲೆ ಗುಬ್ಬಿನ್ ಜ್ವಾಲಾಮುಖಿ(Volcano)ಸ್ಫೋಟದಿಂದ ಉಂಟಾದ ಬೃಹತ್ ಬೂದಿ(ಹೊಗೆ) ಮೋಡವು 25,000-45,000 ಅಡಿ ಎತ್ತರದಲ್ಲಿ ಭಾರತವನ್ನು ತಲುಪಿದ್ದು, ದೆಹಲಿ, ರಾಜಸ್ಥಾನ ಮತ್ತು ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ತನ್ನ ಪ್ರಭಾವವನ್ನು ಉಂಟುಮಾಡಿದೆ.
ರಾಜಧಾನಿ ದೆಹಲಿಯ ಹಲವು ಪ್ರದೇಶಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 400 ಮೀರಿದೆ ಮತ್ತು ವಿಷಕಾರಿ ಹೊಗೆ ಆವರಿಸಿದೆ. ಜ್ವಾಲಾಮುಖಿ ಬೂದಿಯಿಂದಾಗಿ, ಆಕಾಶ ಏರ್, ಇಂಡಿಗೋ ಮತ್ತು ಹಲವಾರು ಅಂತರರಾಷ್ಟ್ರೀಯ ವಿಮಾನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಮತ್ತು ಕೆಲವನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದ್ದು, ಬೂದಿಯಿಂದ ಆವೃತವಾದ ಪ್ರದೇಶಗಳು ಮತ್ತು ಎತ್ತರದ ಪ್ರದೇಶಗಳನ್ನು ತಪ್ಪಿಸುವಂತೆ, ಮಾರ್ಗಗಳನ್ನು ಬದಲಾಯಿಸುವಂತೆ ಮತ್ತು ಎಂಜಿನ್‌ಗಳನ್ನು ಪರಿಶೀಲಿಸುವಂತೆ ಸೂಚಿಸಿದೆ. ಹೆಚ್ಚಿನ ಎತ್ತರದಲ್ಲಿರುವ ವಿಮಾನಗಳು ಅಪಾಯದಲ್ಲಿಯೇ ಇರುತ್ತವೆ ಎಂದು ಹೇಳಲಾಗಿದೆ.

10 ಸಾವಿರ ವರ್ಷಗಳಲ್ಲಿ ಮೊದಲ ಬಾರಿಗೆ ಸ್ಫೋಟ

ಇಥಿಯೋಪಿಯಾದ ಹೈಲಿ ಗುಬಿ ಜ್ವಾಲಾಮುಖಿ ಸುಮಾರು 10,000 ವರ್ಷಗಳ ನಂತರ ಸ್ಫೋಟಗೊಂಡಿದೆ. ಈ ಸ್ಫೋಟದಿಂದಾಗಿ 10 ರಿಂದ 15 ಕಿಲೋಮೀಟರ್‌ಗಳಷ್ಟು ಬೃಹತ್ ಪ್ರಮಾಣದ ಬೂದಿ ಆಕಾಶಕ್ಕೆ ಹಾರಿದೆ. ಇದು ಅಪರೂಪದ ನೈಸರ್ಗಿಕ ವಿದ್ಯಮಾನವಾಗಿದ್ದು, ಸುತ್ತಮುತ್ತಲಿನ ಪ್ರದೇಶಗಳ ಹವಾಮಾನ ಮತ್ತು ಗಾಳಿಯ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ,(ಏಜೆನ್ಸೀಸ್​).