ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
- ಭಾರತೀಯರು ತಮ್ಮ ಮನಸ್ಸಿನಲ್ಲಿರುವ ಜಾತಿಯತೆಯನ್ನು ಮರೆಯಬೇಕು
- ಜಾತಿ ಆಧಾರಿತ ತಾರತಮ್ಯವನ್ನು ನಿಲ್ಲಿಸಿದರೆ ಜಾತಿ ವ್ಯವಸ್ಥೆ 10 ವರ್ಷಗಳಲ್ಲಿ ಒನೆಗೊಳ್ಳಲಿದೆ
- ವ್ಯಕ್ತಿತ್ವದ ಮೂಲಕ ರಾಷ್ಟ್ರ ನಿರ್ಮಾಣವೇ ಆರ್‌ಎಸ್‌ಎಸ್‌ನ ಧ್ಯೇಯ
- ಸಂತರನ್ನು ಗೌರವಿಸುವುದು ರಾಷ್ಟ್ರೀಯ ಕರ್ತವ್ಯ
ಮುಂಬೈ: ಭಾರತೀಯರು ತಮ್ಮ ಮನಸ್ಸಿನಿಂದ ಜಾತಿಯತೆಯನ್ನು ಮರೆತು ಆಳವಾಗಿ ಬೇರೂರಿರುವ ತಾರತಮ್ಯವನ್ನು ಬೇರುಸಹಿತ ಕಿತ್ತುಹಾಕಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಹೇಳಿದ್ದಾರೆ.
ಈ ಕ್ರಮವನ್ನು ಶ್ರದ್ಧೆಯಿಂದ ಅನುಸರಿಸಿದರೆ 10-12 ವರ್ಷಗಳಲ್ಲಿ ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯ ಕೊನೆಗೊಳ್ಳುತ್ತದೆ ಎಂದು ಆರ್‌ಎಸ್‌ಎಸ್ ಶತಮಾನೋತ್ಸವದ ನಿಮಿತ್ತ ನಡೆಸಲಾದ ಸಾರ್ವಜನಿಕ ಸಂವಾದದಲ್ಲಿ ಅವರು ಮಾತನಾಡಿದರು.
ಜಾತಿಯ ವೃತ್ತಿಯಿಂದ ಪೂರ್ವಾಗ್ರಹಕ್ಕೆ ಪರಿವರ್ತನೆ
ಜಾತಿ ಎನ್ನುವುದು ಪ್ರಾರಂಭದಲ್ಲಿ ಜನರು ನಿರ್ವಹಿಸುವ ಔದ್ಯೋಗಿಕ ಪಾತ್ರಗಳಾಗಿದ್ದು, ನಂತರ ಸಾಮಾಜಿಕ ವಿಭಜನೆಯ ಪರಿಣಾಮ ಪಕ್ಷಪಾತಕ್ಕೆ ಕಾರಣವಾಯಿತು ಎಂದರು. ಭಾರತದಾದ್ಯಂತ ಸಾಮೂಹಿಕವಾಗಿ ಜಾತಿ ನಿರ್ಮೂಲನೆಗಾಗಿ ನಾವು ಕೆಲಸ ಮಾಡಿದರೇ ಕೇವಲ 10-12 ವರ್ಷಗಳಲ್ಲಿ ಜಾತಿಯತೆಯ ಪೀಡುಗು ನಮ್ಮಿಂದ ದೂರವಾಗುತ್ತದೆ ಎಂದರು.
ವ್ಯಕ್ತಿತ್ವದ ಮೂಲಕ ರಾಷ್ಟ್ರ ನಿರ್ಮಾಣವೇ ಆರ್‌ಎಸ್‌ಎಸ್‌ನ ಧ್ಯೇಯ
ಸಾಮಾಜಿಕ ಶಕ್ತಿಗಾಗಿ ವೈಯಕ್ತಿಕ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ಭಾರತದ ಮೇಲಕ್ಕೇತ್ತುವುದೇ ಆರ್‌ಎಸ್‌ಎಸ್‌ನ ಧ್ಯೇಯವಾಗಿದೆ ಎಂದರು. ಸಂಘ ಯಾವತ್ತೂ ಸಮಾಜಕ್ಕಿಂತ ದೊಡ್ಡದಾಗ ಬಯಸುವುದಿಲ್ಲ, ಸಮಾಜದ ಉನ್ನತಿಕರಣವೇ ಸಂಘದ ಉನ್ನತಿಕರಣವಾಗಿದೆ ಎಂದರು.
ಸಂಘ ಇನ್ನೂ ತನಕ ಯಾರನ್ನು ತನ್ನ ಪ್ರತಿಸ್ಪರ್ಧಿ ಎಂದು ಭಾವಿಸಿ ಕಾರ್ಯನಿರ್ವಹಿಸಿಲ್ಲ, ಸಂಘ ಸಂಪೂರ್ಣ ರಾಷ್ಟ್ರ ಕೇಂದ್ರಿತ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಸಂಘದ ಬಗ್ಗೆ ನಿಮಗೆ ತಿಳುವಳಿಕೆ ಬೇಕಿದ್ದರೆ ಸಂಘದ ಶಾಖೆಗಳಿಗೆ ಬೇಟಿನೀಡಿ ಎಂದು ಹೇಳಿದರು.
ಸಂತರನ್ನು ಗೌರವಿಸುವುದು ರಾಷ್ಟ್ರೀಯ ಕರ್ತವ್ಯ
ಸಂತರು ಸತ್ಯನಿಷ್ಠರಾಗಿದ್ದು, ಸಾರ್ವತ್ರಿಕ ಗೌರವ ಮತ್ತು ರಕ್ಷಣೆಗೆ ಅರ್ಹರಾಗಿರುತ್ತಾರೆ. ಅದ್ದರಿಂದ ಸಂತರ ಗೌರವ ಮತ್ತು ರಕ್ಷಣೆ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ಸಂತರ ಮಾತಿಗೆ ನಾನು ಇಲ್ಲ ಎಂದು ಹೇಳಲು ಹಿಂಜರಿಯುತ್ತೇನೆ ಎಂದ ಪ್ರಧಾನಿ ನರೇಂದ್ರ ಮೋದಿಯವರ ಮಾತನ್ನು ಉಲ್ಲೇಖಿಸುತ್ತಾ, ಈ ದೇಶದ ಪ್ರಧಾನ ಮಂತ್ರಿ ಸಹ ಸಂತರ ಮಾತಿಗೆ ಇಲ್ಲ ಎನ್ನಲು ವಿಚಾರ ಮಾಡುತ್ತಾರೆ ಎಂದರು. ಆರ್‌ಎಸ್‌ಎಸ್ ಮೌಲ್ಯಗಳನ್ನು ಸಾಂಸ್ಕೃತಿಕ ಗೌರವದೊಂದಿಗೆ ಜೋಡಿಸಿ, ಆಧ್ಯಾತ್ಮಿಕ ನಾಯಕರ ಏಕೀಕೃತ ರಕ್ಷಣೆಯನ್ನು ಒತ್ತಾಯಿಸುತ್ತದೆ ಎಂದು ಹೇಳಿದರು.
ಧರ್ಮವೊಂದು ಸಾರ್ವತ್ರಿಕ ಶಕ್ತಿ
ನರೇಂದ್ರ ಭಾಯಿ, ನಾನು, ನೀವು ಅಥವಾ ಬೇರೆ ಯಾರಾದರೂ ಆಗಿರಲಿ, ನಮ್ಮೆಲ್ಲರನ್ನೂ ಓಡಿಸುವ ಒಂದು ಶಕ್ತಿ ಇದೆ. ಆ ಶಕ್ತಿಯಿಂದ ವಾಹನವನ್ನು ಓಡಿಸಿದರೆ, ಎಂದಿಗೂ ಅಪಘಾತ ಸಂಭವಿಸುವುದಿಲ್ಲ. ಆ ಶಕ್ತಿಯೇ ಧರ್ಮ ಎಂದರು. ಧರ್ಮವು ಇಡೀ ವಿಶ್ವದ ಚಾಲಕನಾಗಿದ್ದು, ಭೂಮಿ ಮೇಲಿನ ಎಲ್ಲವೂ ಈ ತತ್ವದ ಮೇಲೆ ನಡೆಯುತ್ತದೆ ಎಂದರು.
ಧರ್ಮ: ನೀರಿನಿಂದ ಆಡಳಿತಗಾರರವರೆಗೆ
ಧರ್ಮವು ಪ್ರತಿಯೊಂದು ಜೀವಿಯನ್ನು ವ್ಯಾಪಿಸುತ್ತದೆ ಎಂದ ಭಾಗವತ್ ನೀರು ಹರಿಯಲು ತನ್ನದೇ ಆದ ಧರ್ಮವನ್ನು ಹೊಂದಿದೆ, ಬೆಂಕಿ ಸುಡಲು ತನ್ನದೇ ಆದ ಧರ್ಮವನ್ನು ಹೊಂದಿದೆ. ಹಾಗೆಯೇ ಆಡಳಿತಗಾರನಿಗೆ ಸಹ ತನ್ನದೇ ಆದ ಕರ್ತವ್ಯ ಮತ್ತು ನಡವಳಿಕೆಯ ನಿಯಮಗಳಿವೆ. ಈ ಎಲ್ಲಾ ನೀತಿ, ನಿಯಮಗಳ ಪಾಲನೆ ಸರಿಯಾಗಿ ನಡೆದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ ಎಂದು ಹೇಳಿದರು,(ಏಜನ್ಸೀಸ್).