ಎನ್‌ಡಿಎ ಮೈತ್ರಿಕೂಟದ ತಮಿಳುನಾಡು ನಾಯಕರುಗಳು
ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ (ಇಪಿಎಸ್) ಜೊತೆಗಿನ ತಮ್ಮ ಭಿನ್ನಾಭಿಪ್ರಾಯಗಳು ಬಗೆಹರಿದಿದ್ದು, ಮುಂಬರುವ ತಮಿಳುನಾಡು ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸಿ ರಾಜ್ಯದ ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತದೆ ಎಂದು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಹೇಳಿದ್ದಾರೆ.
ತಮಿಳುನಾಡಿನ ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಿನಕರನ್, ನಮ್ಮ ನಡುವಿನ ಸಮಸ್ಯೆಗಳು ಬಗೆಹರಿದಿವೆ, ನಾವು ಈಗ ಹಳೆಯದನ್ನೆಲ್ಲಾ ಮರೆತಿದ್ದೇವೆ. ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲ್ಲುತ್ತದೆ, ರಾಜ್ಯದ ಜನರು ಬಯಸುವ ಎಲ್ಲವನ್ನೂ ಪೂರೈಸಲು ನಾವು ಒಗ್ಗಟ್ಟಾಗಿದ್ದೇವೆ, ಜಯಲಲಿತಾ ಮಾದರಿಯ ಆಡಳಿತವನ್ನು ಮರಳಿ ತರಲು ಬಯಸುತ್ತೇವೆ ಎಂದು ಹೇಳಿದರು.
ಮಧುರಾಂತಕಂನಲ್ಲಿ ಪ್ರಧಾನಿ ಮೋದಿ
ಮಧುರಾಂತಕಂನ ಆಯೋಜಿಸಿದ್ದ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಡಿಎಂಕೆಯನ್ನು 'ಸಿಎಮ್‌ಸಿ' (Corruption, Mafia, Crime) ಸರ್ಕಾರ ಎಂದು ಕರೆದರು. ತಮಿಳುನಾಡಿನ ಜನರು ಅಂತಹ ಪಕ್ಷದ ಸರ್ಕಾರವನ್ನು ಬೇರುಸಹಿತ ಕಿತ್ತುಹಾಕಿ, ರಾಜ್ಯದಲ್ಲಿನ ಬದಲಾವಣೆಗೆ ಮತ ಚಲಾಯಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಈಗ ಪ್ರಜಾಪ್ರಭುತ್ವ ಮತ್ತು ಹೊಣೆಗಾರಿಕೆಗೆ ಸಂಬಂಧವಿಲ್ಲದ ಸರ್ಕಾರ ಆಡಳಿತ ನಡೆಸುತ್ತಿದೆ, ಡಿಎಂಕೆ ಸರ್ಕಾರ ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೇವೆ ಸಲ್ಲಿಸುತ್ತಿದೆ. ಪಕ್ಷದೊಳಗೆ ಯಾರಾದರೂ ಉದಯಿಸಬೇಕಾದರೆ, ಅವರು ವಂಶಪಾರಂಪರ್ಯ, ಭ್ರಷ್ಟಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಅಥವಾ ನಮ್ಮ ಸಂಸ್ಕೃತಿಯ ಮೇಲಿನ ದೌರ್ಜನ್ಯ ಮೂಲಕ ಮುನ್ನಲೆಗೆ ಬರಬೇಕು ಎಂದರು.
ತಮಿಳುನಾಡಿನ ಅಭಿವೃದ್ಧಿಗೆ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ, 2014 ಕ್ಕಿಂತ ಮೊದಲು ಕೇಂದ್ರದಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟ ಅಧಿಕಾರದಲ್ಲಿತ್ತು, ಯುಪಿಐ ಸರ್ಕಾರ ರಾಜ್ಯಕ್ಕೆ ನೀಡಿದ್ದಕ್ಕಿಂತ ಮೂರು ಪಟ್ಟು ಹಣವನ್ನು ಹೆಚ್ಚು ಹಣವನ್ನು ಎನ್‌ಡಿಎ ಸರ್ಕಾರ ನೀಡಿದೆ, ಆದರೆ ಸ್ಟಾಲಿನ್ ಸರ್ಕಾರ ಎಸ್ಸಿ/ಎಸ್ಟಿಗಳು ಮತ್ತು ಇತರ ಹಿಂದುಳಿದ ವರ್ಗಗಳ ಅಭಿವೃದ್ದಿ ಹೆಸರಿನಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಹೇಳಿದರು.
ಕಾರ್ತಿಕ ದೀಪ ಹಬ್ಬದ ಸಂದರ್ಭದಲ್ಲಿ ಪವಿತ್ರ ದೀಪ ಬೆಳಗಿಸುವ ವಿವಾದವಾದ ಉಲ್ಲೇಖಿಸಿದ ಪ್ರಧಾನಿ, ಬಿಜೆಪಿ ನಾಯಕರು ಭಕ್ತರನ್ನು ಬೆಂಬಲಿಸಿದರೆ, ಇತ್ತ ಡಿಎಂಕೆ ಮತಬ್ಯಾಂಕ್ ರಾಜಕೀಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ ಎಂದು ಆರೋಪಿಸಿದರು(ಏಜೆನ್ಸೀಸ್).