Withdraw PF money via ATM UPI
- ಉದ್ಯೋಗಿಗಳು ಇನ್ಮುಂದೆ UPI ಮತ್ತು ATM ಮೂಲಕವೇ ಪಿಎಫ್ ಹಣ ವಿತ್‌ಡ್ರಾ ಮಾಡಬಹುದು
- ಜೂನ್ ಅಂತ್ಯದ ವೇಳೆಗೆ 'EPFO 3.0' ಡಿಜಿಟಲ್ ಪ್ಲಾಟ್ಫಾರ್ಮ್ ಜಾರಿ ಭರವಸೆ
- = ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯರಿಂದ ಅಧಿಕೃತ ಚಾಲನೆ ಸಾಧ್ಯತೆ
Withdraw PF money via ATM UPI : ದೇಶದ ಉದ್ಯೋಗಿಗಳು ಸುಲಭವಾಗಿ ಪಿಎಫ್ ಹಣ ಡ್ರಾ ಮಾಡುವಂತೆ ನೌಕರರ ಭವಿಷ್ಯ ನಿಧಿ ಸಂಸ್ಥೆ ನಾನಾ ಅಭಿವೃದ್ಧಿಗಳನ್ನು ಪ್ರಯೋಗ ಮಾಡುತ್ತಲೇ ಇರುತ್ತದೆ. ಸದ್ಯ ಅದರ ಭಾಗವಾಗಿ ಮತ್ತೊಂದು ಸಿಹಿಸುದ್ದಿಯನ್ನು ನೀಡಲು ಮುಂದಾಗಿದೆ.
'EPFO 3.0' ಜಾರಿ ಎಂದು?
ಹೌದು ನೌಕರರ ಭವಿಷ್ಯ ನಿಧಿ ಸಂಸ್ಥೆ 'EPFO 3.0' ಡಿಜಿಟಲ್ ಪ್ಲಾಟ್ಫಾರ್ಮ್ನಡಿ ಪಿಎಫ್ ಚಂದದಾರರು ಇನ್ಮುಂದೆ ಆನ್ಲೈನ್ನಲ್ಲೇ ಯುಪಿಐ ಅಪ್ಲಿಕೇಶನ್ ಮೂಲಕ ಇಪಿಎಫ್-ಸಂಯೋಜಿತ ಎಟಿಎಂಗಳನ್ನು ಬಳಸಿಕೊಂಡು ತುರ್ತು ಸಂದರ್ಭದಲ್ಲಿ ಪಿಎಫ್ ಹಣವನ್ನು ಪಡೆದುಕೊಳ್ಳಬಹುದು ಎಂದು ಹೇಳಿದೆ.
ಖಾಸಗಿ ಮಾಧ್ಯಮದ ವರದಿ ಪ್ರಕಾರ, ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಅಭಿವೃದ್ಧಿ ಪಡಿಸಿರುವ ಹೊಸ ಸೌಲಭ್ಯವನ್ನು ತಾಂತ್ರಿಕ ಪರೀಕ್ಷೆಗೆ ಒಡ್ಡಲಾಗಿತ್ತು. ಸದ್ಯ ಇದು ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಜೂನ್ ಅಂತ್ಯದಲ್ಲಿ ದೇಶಾದ್ಯಂತ ಬಳಕೆಗೆ ಸಿಗುತ್ತದೆ ಎನ್ನಲಾಗಿದೆ. ಇದಕ್ಕೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವೀಯ ಅಧಿಕೃತ ಚಾಲನೆ ನೀಡಲಿದ್ದಾರೆ ಎನ್ನುವ ಮಾಹಿತಿಯೂ ಹೊರಬಿದ್ದಿದೆ.
ಹೊಸ ನಿಯಮಗಳೇನು?
ಮೊದಲೆಲ್ಲ ಪಿಎಫ್ ಕ್ಲೈಮ್ ಮಾಡಿ ಹಣ ಹಿಂಪಡೆದುಕೊಳ್ಳಲು ಮೂರರಿಂದ ನಾಲ್ಕರು ದಿನ ಕಾಯಬೇಕಿತ್ತು. ಆದರೆ, ಹೊಸ ನಿಯಮ ಹಾಗಿರೋದಿಲ್ಲ.ಉದ್ಯೋಗಿಗಳು ತಮ್ಮ ತುರ್ತು ಸಂದರ್ಭದಲ್ಲಿ ತಮ್ಮ ಇಪಿಎಫ್ ಬ್ಯಾಲೆನ್ಸ್ನ ಶೇ.75ರಷ್ಟು ಮೊತ್ತವನ್ನು ಯುಪಿಐ ಅಥವಾ ಯುಪಿಐ ವ್ಯವಸ್ಥೆಯಿರುವ ಎಟಿಎಂ ಬಳಕೆ ಮಾಡಿಕೊಂಡು ನೇರವಾಗಿ ಬ್ಯಾಂಕ್ನ ಖಾತೆಯಿಂದ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲಿದೆ ಎಂದು ಹೇಳಲಲಾಗಿದೆ.
ಈ ಹಿಂದೆ ಪಿಎಫ್ ಕ್ಲೈಮ್ಗಳು ದುರುಪಯೋಗವಾಗವದಂತೆ ಭದ್ರತಾ ಕವಚ ಕೆಲಸ ಮಾಡುತ್ತಿತ್ತು. ಈಗ ಜನರಿಗೆ ತಮ್ಮ ಹಣ ಸುಲಭವಾಗಿ ಸಿಗುವುದು ನಿಜ ಆದರೆ, ಇದು ಯುಪಿಐ ಆದ ಕಾರಣ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚೇ ಕಾಡುತ್ತದೆ. ಈ ನಿಟ್ಟಿನಲ್ಲಿ ನಿವೃತ್ತಿ ಉಳಿತಾಯದ ಭದ್ರತೆಗೆ ಯಾವುದೇ ಧಕ್ಕೆ ಬಾರದಂತೆ ವಂಚನೆ ತಡೆಗಟ್ಟುವ ಕ್ರಮ ಜಾರಿ ಮಾಡಲಾಗುತ್ತದೆ ಎಂದು ಬಾಂಬೆ ಲಾ ಚೇಂಬರ್ಸ್‌ನ ಪಾಲುದಾರರಾದ ಸೌಮ್ಯ ರಾಮಕೃಷ್ಣನ್ ಹೇಳಿದ್ದಾರೆ, (ಏಜೆನ್ಸೀಸ್).