Winter Session: ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು (ಶುಕ್ರವಾರ ಡಿ.19) ಕೊನೆಗೊಂಡಿದ್ದು, ದೆಹಲಿಯಲ್ಲಿ ಹದಗೆಡುತ್ತಲೇ ಇರುವ ವಾಯು ಮಾಲಿನ್ಯದ ಕುರಿತು ಸದನದಲ್ಲಿ ನಿರೀಕ್ಷಿತ ಚರ್ಚೆ ನಡೆಯಲಿಲ್ಲ ಎನ್ನುವುದು ಅನೇಕ ಸಂಸದರ ಅಸಮಧಾನವಾಗಿದೆ.
ಡಿಸೆಂಬರ್ 1 ರಂದು ಅಧಿವೇಶನ ಪ್ರಾರಂಭವಾಗಿದ್ದು, ಅವಾಗಿನಿಂದ ಪರಮಾಣು ಶಕ್ತಿ ಮತ್ತು ಗ್ರಾಮೀಣ ಉದ್ಯೋಗದ ಕುರಿತಾದ ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. ಎರಡನೆಯದು ಯುಪಿಎ ಕಾಲದಲ್ಲಿನ ಮನರೇಗಾ ಯೋಜನೆಯನ್ನು ಬದಲಿಸಿ, ಜಿ ರಾಮ್ ಜಿ ಮಸೂದೆಗೆ ಅಂಗೀಕಾರ ಪಡೆದುಕೊಂಡರು. ಇದಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸುವುದರೊಂದಿಗೆ, ಅನೇಕ ಪ್ರತಿಭಟನೆಗಳು ಕೂಡ ನಡೆದವು.
ಮಾಲಿನ್ಯದ ಕುರಿತಾದ ಹೆಚ್ಚಿನ ಚರ್ಚೆಗೆ ಸದನದಲ್ಲಿನ ಉತ್ತಮ ವಾತಾವರಣ ಇರಲಿಲ್ಲ ಎನ್ನುವುದನ್ನು ಎಲ್ಲಾ ಪಕ್ಷಗಳು ಒಪ್ಪಿಕೊಂಡಿವೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕಚೇರಿಯ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ವಾಯು ಮಾಲಿನ್ಯದ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ನಿರೀಕ್ಷೆ ಇತ್ತು, ಕಳೆದ ವಾರ ರಾಹುಲ್ ಗಾಂಧಿಯವರ ಕೆಲ ಉತ್ಸಾಹಭರಿತ ಹೇಳಿಕೆಗೆ ಕೇಂದ್ರದ ಒಪ್ಪಿಗೆಯೂ ದೊರೆಯಿತು. ಆದರೆ, ರಾಜಧಾನಿ ಮತ್ತು ಅದರ ಪಕ್ಕದ ಪ್ರದೇಶಗಳ ನಿವಾಸಿಗಳು ತೀವ್ರ ವಾಯು ಗುಣಮಟ್ಟದಿಂದ ಉಸಿರುಗಟ್ಟಿಸುವುದನ್ನು ಮುಂದುವರಿಸಿದ್ದರೂ ಸಹ, ಅದರ ಕುರಿತಾದ ಚರ್ಚೆಯು ಆರಂಭವಾದಲ್ಲೇ ಅಂತ್ಯವಾಯಿತು.
ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಲೋಕಸಭೆಯಲ್ಲಿ ಮಾಲಿನ್ಯ ವಿಷಯದ ಕುರಿತು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಉತ್ತರಿಸಬೇಕಿತ್ತು, ಆದರೆ, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಜಿ ರಾಮ್ ಜಿ ಮಸೂದೆಯ ಬಗ್ಗೆ ಮಾತನಾಡುತ್ತಿದ್ದಂತೆ ವಿರೋಧ ಪಕ್ಷದ ಸಂಸದರ ತೀವ್ರ ಘೋಷಣೆಗಳ ನಡುವೆ ಸದನ ಪುನರಾರಂಭವಾದ ಕೇವಲ ಒಂದು ಗಂಟೆಯಲ್ಲಿಯೇ ಕಲಾಪವನ್ನು ಮುಂದೂಡಲಾಯಿತು. ಮಧ್ಯರಾತ್ರಿ ನಡೆದ ಬೆಳವಣಿಗೆಯಲ್ಲಿ ರಾಜ್ಯಸಭೆಯಲ್ಲಿಯೂ ನೂತನ ಕಾನೂನನ್ನು ಅಂಗೀಕರಿಸಲಾಯಿತು.
ಕನ್ಯಾಕುಮಾರಿಯ ಸಂಸದ ವಿಜಯ್ ವಸಂತ್, ದೆಹಲಿ-ಎನ್‌ಸಿಆರ್‌ನಲ್ಲಿ ನಗರವನ್ನು ಆವರಿಸಿರುವ ಹೊಗೆಯಿಂದಾಗಿ ರಾಷ್ಟ್ರೀಯ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಡಿಸೆಂಬರ್ 13 ಮತ್ತು 15 ರ ನಡುವೆ ಮೂರು ದಿನಗಳ ಕಾಲ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ ಮತ್ತು ನಂತರ ತೀವ್ರ ಪ್ಲಸ್ ಎಕ್ಯೂಐದಷ್ಟಿತ್ತು. ರಾಜಧಾನಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕವು ಪ್ರಸ್ತುತ ತೀವ್ರ ಅಂಚಿನಲ್ಲಿದೆ, ಬಹು ಮೇಲ್ವಿಚಾರಣಾ ಕೇಂದ್ರಗಳು ಈಗಾಗಲೇ 400 ಕ್ಕೂ ಹೆಚ್ಚು ರೆಕಾರ್ಡಿಂಗ್‌ಗಳನ್ನು ತೋರಿಸುತ್ತಿವೆ. ಇದರ ಜೊತೆಗೆ, ದಟ್ಟವಾದ ಮಂಜು ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ.
ಶುಕ್ರವಾರ ಸಂಸತ್ತಿನ ಕಲಾಪ ಮುಂದೂಡಲ್ಪಟ್ಟ ಬಳಿಕ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಎರಡೂ ಕಡೆಯ ಸಂಸದರೊಂದಿಗೆ ಸಭೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಮತ್ತು ಇತರರು ಚಹಾ ಸೇವಿಸುತ್ತಾ ಮಾತನಾಡುತ್ತಿರುವ ವಿಡಿಯೋಗಳು ಕಂಡುಬಂದವು. ಈ ಚಳಿಗಾಲದ ಅಧಿವೇಶನದಲ್ಲಿ ಪ್ರಮುಖ ವಿರೋಧ ಪಕ್ಷದ ಧ್ವನಿಯಾಗಿರುವ ಪ್ರಿಯಾಂಕಾ ಗಾಂಧಿ, ಮಾಲಿನ್ಯದ ಚರ್ಚೆಯನ್ನು ಅವರ ಕಡೆಯಿಂದ ಪ್ರಾರಂಭಿಸಬೇಕಿತ್ತು(ಏಜೆನ್ಸೀಸ್).