Emphasis on community hall construction
ಹುಳಿಯಾರು: ಕ್ಷೇತ್ರಾದ್ಯಂತ ಸಮುದಾಯ ಭವನಗಳ ನಿಮಾರ್ಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು. ಹುಳಿಯಾರು ಪಟ್ಟಣದ ಬೀರದೇವರ ಕಟ್ಟೆ ಆವರಣದಲ್ಲಿ ಶ್ರೀ ಬೀರಲಿಂಗೇಶ್ವರ ಸ್ವಾಮಿ ಸೇವಾ ಚಾರಿಟಬಲ್ ಟ್ರಸ್ಟ್ನಿಂದ ನಿರ್ಮಿಸಲಾಗುತ್ತಿರುವ ಕನಕ ಸಮುದಾಯ ಭವನಕ್ಕೆ ಕಾಗಿನೆಲೆ ಕನಕ ಗುರುಪೀಠದ ಕೆಲ್ಲೋಡು ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಹಾಗೂ ಶಾಸಕ ಸಿ.ಬಿ. ಸುರೇಶ್ ಬಾಬು ಅವರೊಂದಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹುಳಿಯಾರಿನ ಬೀರಲಿಂಗೇಶ್ವರ ಸಮುದಾಯ ಭವನ ನಿಮಾರ್ಣಕ್ಕೆ ಅಗತ್ಯವಿರುವ ಅನುದಾನದ ಜತೆಗೆ ಮುಂದಿನ ದಿನಗಳಲ್ಲಿ ಇತರ ಸೌಲಭ್ಯ ಕಲ್ಪಿಸಲಾಗುವುದು. ಗುಣಮಟ್ಟದ ಕಟ್ಟಡ ನಿಮಾರ್ಣವಾಗುವಂತೆ ನೋಡಿಕೊಳ್ಳಬೇಕು ಎಂದರು. ಕಾಗಿನೆಲೆ ಕನಕ ಗುರುಪೀಠದ ಕೆಲ್ಲೋಡು ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಆಶೀರ್ವಚನ ನೀಡಿದ ಶ್ರೀಗಳು,
ಮನುಷ್ಯ ತನ್ನ ವ್ಯಕ್ತಿತ್ವವನ್ನು ಹೂವಿನಂತೆ ಮೃದುವಾಗಿ ಹಾಗೂ ನೀರಿನಂತೆ ನಿರ್ಮಲವಾಗಿ ಇಟ್ಟುಕೊಳ್ಳಬೇಕು. ಸಮಾಜದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ಅಹಂಕಾರ ಪಡದೆ, ಸರಳ ಸಜ್ಜನಿಕೆಯಿಂದ ಬದುಕುವುದೇ ನಿಜವಾದ ಧರ್ಮ ಎಂದರು. ಪಪಂ ಸದಸ್ಯ ಹೇಮಂತ್ ಕುಮಾರ್, ಎಸ್ಆರ್ಎಸ್ ದಯಾನಂದ್, ಪಪಂ ಮಾಜಿ ಸದಸ್ಯ ರಾಘವೇಂದ್ರ, ಮುಖಂಡ ಏಜಾಸ್ ಪಾಷ, ಕಲಾವಿದ ಗೌಡಿ, ಜೆಡಿಎಸ್ ಯುವ ಮುಖಂಡ ಗುರುಮೂರ್ತಿ ಇದ್ದರು.