Kanpur-Lucknow Expressway
Kanpur-Lucknow Expressway:
ಜುಲೈನಲ್ಲಿ ಲೋಕಾರ್ಪಣೆಗೊಂಡಿದ್ದ ಉತ್ತರ ಪ್ರದೇಶದ ಲಖನೌ ಮತ್ತು ಕಾನ್ಪುರ್ ನಡುವಿನ ಹೆದ್ದಾರಿಯ ಮೇಲ್ಮೈ ಮಳೆಯಿಂದಾಗಿ ಕಿತ್ತುಬಂದಿತ್ತು. ರಸ್ತೆಯಲ್ಲಿ ನಿಂತಿದ್ದ ನೀರು ಒಣಗಿಸಿ, ದುರಸ್ತಿ ಕಾರ್ಯ ಮಾಡಲು ಟೇಬಲ್ ಫ್ಯಾನ್ ಬಳಸಿದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ದೃಶ್ಯದಲ್ಲಿ ಏನಿದೆ?
ಹೆದ್ದಾರಿಯ ಒಂದು ಭಾಗದಲ್ಲಿ ರಸ್ತೆಯ ಮೇಲ್ಮೈ ಸಂಪೂರ್ಣ ಕಿತ್ತುಬಂದಿದೆ. ಇನ್ನು ಮಣ್ಣು, ಕಲ್ಲಿನಿಂದ ಕೂಡಿರುವ ಭಾಗದಲ್ಲಿ ಯಥೇಚ್ಛವಾಗಿ ನೀರು ತುಂಬಿದ್ದ ಕಾರಣ ಒಣಗಿಸಿ, ದುರಸ್ತಿ ಮಾಡಲು ಆಡಳಿತ ಮಂಡಲಿ ಟೇಬಲ್ ಫ್ಯಾನ್ಗಳನ್ನು ಬಳಕೆ ಮಾಡಿರುವುದು ದೃಶ್ಯದಲ್ಲಿ ಇದೆ.
4,700 ಕೋಟಿ ವೆಚ್ಚ ಮಾಡಿ ಈ ಲಕ್ನೋ ಮತ್ತು ಕಾನ್ಪುರ ಎಕ್ಸ್ಪ್ರೆಸ್ ವೇ ನಿರ್ಮಾಣ ಮಾಡಲಾಗಿದೆ. ಇದನ್ನು ಉದ್ಘಾಟಿಸಿ ಇನ್ನೂ 47 ದಿನವೂ ಕಳೆದಿಲ್ಲ. ಸುಮಾರು 40 ಸ್ಥಳದಲ್ಲಿ ಬಿರುಕು ಕಾಣಿಸಿಕೊಂಡಿದೆ. ಒಂದು ಹಾನಿಗೊಂಡ ಭಾಗದಲ್ಲಿ, ದುರಸ್ತಿ ಕೆಲಸದ ವೇಳೆ ಮಳೆನೀರನ್ನು ಒಣಗಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧೀಕಾರ (NHAI) ಯಿಂದ ಫ್ಯಾನ್ ಅಳವಡಿಸಿದ್ದಾರೆ. ನಿತಿನ್ ಗಡ್ಕರಿ ಅವರು ಈ “ತಂತ್ರಜ್ಞಾನ”ಕ್ಕೆ ತಕ್ಷಣವೇ ಪೇಟೆಂಟ್ ಅರ್ಜಿ ಸಲ್ಲಿಸಬೇಕು.ಇಂತಹ ಆವಿಷ್ಕಾರವನ್ನು ಭಾರತದಿಂದ ಹೊರಗೆ ಹೋಗಲು ಎಂದಿಗೂ ಅನುಮತಿಸಬಾರದು ಎಂದು ಲೇವಡಿ ಮಾಡಿದ್ದಾರೆ.
ರಸ್ತೆ ನಿರ್ಮಾಣದಲ್ಲಿ ಉಂಟಾದ ಲೋಪದೋಷದಿಂದಾಗಿ ಸದ್ಯ ನಿರ್ಮಾಣ ಸಂಸ್ಥೆ ಪಿಎನ್‌ಸಿ ಇನ್ಫ್ರಾಟೆಕ್‌ಗೆ ನೋಟಿಸ್ ಜಾರಿ ಮಾಡಲಾಗಿದೆ. ಮೂರು ಕೋಟಿ ದುರಸ್ತಿ ವೆಚ್ಚವನ್ನು ಕಂಪನಿ ಭರಿಸಲಿದೆ ಎಂದು ಹೇಳಲಾಗಿದ್ದು, ಯೋಜನೆಯ ಮೇಲ್ವಿಚಾರಣೆಗೆ ನಿಗದಿ ಪಡಿಸಲಾಗಿದ್ದ ಅಧಿಕಾರಿಗಳನ್ನು 2 ವರ್ಷಗಳ ಕಾಲ NHAI ಮತ್ತು ಸಂಬಂಧಿತ ಸಚಿವಾಲಯದ ಯೋಜನೆಗಳಲ್ಲಿ ಭಾಗವಹಿಸದಂತೆ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ. ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.
ದುರಸ್ತಿಗೆ ಕಾರಣ ಏನು ಎಂದು ಐಐಟಿ ಖರಗ್ಪುರ ಪ್ರಧ್ಯಾಪಕ ಕೆಎಸ್ ರೆಡ್ಡಿ ನೇತೃತ್ವದ ತಜ್ಞರ ತಂಡವನ್ನು ತನಿಖೆ ನಡೆಸಲು ನೇಮಕ ಮಾಡಲಾಗಿದೆ ಎಂದು
NHAI ತಿಳಿಸಿದೆ.
(ಏಜೆನ್ಸೀಸ್).