ಸಾಂದರ್ಭಿಕ ಚಿತ್ರ 
ದೇಶ

ಕರ್ನಾಟಕ ಸೇರಿ 16 ರಾಜ್ಯ, ಮೂರು ಕೇಂದ್ರಾಡಳಿತ ಪ್ರದೇಶದಲ್ಲಿ ಎಸ್​ಐಆರ್​ಗೆ ಚುನಾವಣೆ ಆಯೋಗ ಘೋಷಣೆ | SIR

ನವದೆಹಲಿ: ಭಾರತೀಯ ಚುನಾವಣೆ ಆಯೋಗ ಗುರುವಾರ(ಮೇ 14) ಮೂರನೇ ಹಂತದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆನ್ನು(SIR) ಘೋಷಿಸಿದ್ದು, ಕರ್ನಾಟಕ ಸೇರಿ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಸಲಾಗುವುದು ಎಂದು ಹೇಳಿದೆ.
ಮೂರನೇ ಹಂತದ ಎಸ್​ಐಆರ್​ನಲ್ಲಿ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಹೊರತು ಪಡಿಸಿ ಎಲ್ಲಾ ರಾಜ್ಯಗಳಲ್ಲಿ ನಿಗದಿ ಪಡಿಸಿದ ದಿನಾಂಕದಿಂದ ಶುರುವಾಗಲಿದೆ. ಈ ಮೂರು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನಗಣತಿಯ ಎರಡನೇ ಹಂತ ಪೂರ್ಣಗೊಂಡ ಬಳಿಕ ಮತ್ತು ಹಿಮಪಾತ ಪ್ರದೇಶಗಳಲ್ಲಿನ ಹವಾಮಾನವನ್ನು ಪರಿಗಣಿಸಿದ ನಂತರ SIR ವೇಳಾಪಟ್ಟಿಯನ್ನು ನಂತರ ಘೋಷಿಸಲಾಗುವುದು ಎಂದು ಹೇಳಿದೆ.
ಎಸ್‌ಐಆರ್‌ನ ಮೂರನೇ ಹಂತದ ಅವಧಿಯಲ್ಲಿ, 3.94 ಲಕ್ಷಕ್ಕೂ ಹೆಚ್ಚು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒಗಳು) ಗಣತಿ ಹಂತದಲ್ಲಿ 36.73 ಕೋಟಿ ಮತದಾರರನ್ನು ತಲುಪಲು ಮನೆ ಮನೆಗೆ ಭೇಟಿ ನೀಡಲಿದ್ದಾರೆ. ರಾಜಕೀಯ ಪಕ್ಷಗಳು ನಾಮನಿರ್ದೇಶನ ಮಾಡಿದ 3.42 ಲಕ್ಷ ಬೂತ್ ಮಟ್ಟದ ಏಜೆಂಟ್‌ಗಳ ಬೆಂಬಲದೊಂದಿಗೆ ಈ ಕಾರ್ಯ ನಡೆಯಲಿದೆ ಎಂದು ಆಯೋಗ ತಿಳಿಸಿದೆ (ಏಜೆನ್ಸೀಸ್).