ರಾಜಾ ಭೈಯಾ ಅವರ 500ಕ್ಕೂ ಹೆಚ್ಚು ಬಂದೂಕುಗಳ ಆಯುಧ ಪೂಜೆ. 
ದೇಶ

500 ಕ್ಕೂ ಹೆಚ್ಚು ಬಂದೂಕುಗಳಿಗೆ ಅದ್ಧೂರಿ ಪೂಜೆ: ಯುಪಿ ಶಾಸಕ "ರಾಜಾ ಭೈಯಾ" ಆಯುಧ ಪೂಜೆ ವಿಡಿಯೋ ವೈರಲ್! Raghuraj Pratap Singh

ಯುಪಿ ಶಾಸಕ ರಾಜಾ ಭೈಯಾ ಅವರ 500ಕ್ಕೂ ಅಧಿಕ ಬಂದೂಕುಗಳ ಭರ್ಜರಿ ಆಯುಧ ಪೂಜೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಂಪೂರ್ಣ ವಿವರ ಮತ್ತು ವಿಡಿಯೋ ಇಲ್ಲಿದೆ ನೋಡಿ.

ಕುಂಡಾ: ಇಂದು ದೇಶದೆಲ್ಲಡೆ ವಿಜಯದಶಮಿ ನಿಮಿತ್ತ ಮನೆMLA ಯಲ್ಲಿ ಕಚೇರಿಗಳಲ್ಲಿರುವ ಆಯುಧಗಳಿಗೆ ಪೂಜೆ ಸಲ್ಲಿಸಿ ಮಾಡುವ ಕೆಲಸಗಳಲ್ಲಿ ಶಕ್ತಿ ನೀಡುವಂತೆ ಕೇಳಿಕೊಳ್ಳಲಾಗುತ್ತದೆ. ಆಯುಧ ಪೂಜೆಯಲ್ಲಿ ಸಾಮಾನ್ಯವಾಗಿ ಅಡುಗೆ ಮನೆಯಲ್ಲಿರುವ ಚಾಕು, ಕತ್ತಿ, ಇಳಿಗೆಮಣೆ. ಹೊಲಗಳಲ್ಲಿ ಬಳಸುವ ಪಿಕಾಸಿ, ನೇಗಿಲು, ಹಾರೆ, ಕೊಡಲಿ ಹಾಗೆಯೇ ಮನೆಯಲ್ಲಿರುವ ಕಾರು, ಬೈಕ್​ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ಆದರೆ, ಉತ್ತರ ಪ್ರದೇಶದ ಕುಂಡಾ ವಿಧಾನಸಭಾ ಕ್ಷೇತ್ರದ ಶಾಸಕ ರಾಜಾ ಭೈಯಾ ಎಂದೇ ಖ್ಯಾತಿಗಳಿಸಿರುವ ರಘುರಾಜ್​ ಪ್ರತಾಪ್​ ಸಿಂಗ್​ ಭರ್ತಿ 500 ಕ್ಕೂ ಹೆಚ್ಚಿನ ಬಂದೂಕುಗಳಿಗೆ ಪೂಜೆ ಮಾಡುವ ಮೂಲಕ ಸೋಷಿಯಲ್​ ಮೀಡಿಯಾನಲ್ಲಿ ಸಖತ್​ ಕ್ರೇಜ್​ ಸೃಷ್ಟಿಸಿದ್ದಾರೆ.

ವಿಡಿಯೋನಲ್ಲೇನಿದೆ?

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋನಲ್ಲಿ, ಶಾಸಕ ರಘುರಾಜ್ ಪ್ರತಾಪ್​ ಸಿಂಗ್​ ತಮ್ಮ ಬಂಗಲೆಯ ಮುಂಭಾಗದಲ್ಲಿ ಸುಮಾರು 500 ಕ್ಕೂ ಹೆಚ್ಚಿನ ಪಿಸ್ತೂಲ್​, ಡಬಲ್​ ಬೊರ್​, ಸಿಂಗಲ್​ ಬೊರ್, ಬೋಲ್ಟ್​ ಆಕ್ಷನ್​ ಮೊದಲಾದ ಬಂದೂಕುಗಳಿಗೆ ಪೂಜೆ ಮಾಡುವ ಮೂಲಕ ವಿಜಯದಶಮಿ ನಿಮಿತ್ತ ನಡೆದ ಆಯುಧ ಪೂಜೆಯನ್ನು ನಡೆಸಿದ್ದಾರೆ.

ಮನೆಯ ಎದುಗಿರುವ ಆಂಜನೇಯನ ದೇವಸ್ಥಾನದ ಎದುರಿಗೆ ಆಯುಧಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ, ಇಲ್ಲಿ ನೆರೆದಿರುವವರೆಲ್ಲಾ ನನ್ನ ಪರಿವಾರದವರು, ಇಲ್ಲಿರುವ ಶಸ್ತ್ರಾಸ್ತ್ರಗಳಲ್ಲಾ ನಮ್ಮ ರಕ್ಷಣೆಗಿರುವ ಸಾಧನಗಳಾಗಿವೆ ಎಂದು ಹೇಳಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾನಲ್ಲಿ ರಾಜಾ ಭೈಯಾ ಅವರ ಮನೆಯಲ್ಲಿ ನಡೆದ ಆಯುಧ ಪೂಜೆಯೇ ಸಖತ್​ ಟ್ರೇಂಡಿಂಗ್​ನಲ್ಲಿದೆ.

ನೆಟ್ಟಿಗರ ರಿಯಾಕ್ಷನ್ ಹೇಗಿದೆ?

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದಂತೆ, ನೆಟ್ಟಿಗರು ಕಮೆಂಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಇಷ್ಟೊಂದು ಬಂದೂಕುಗಳಿಗೆ ಸರ್ಕಾರ ನಿಜವಾಗಿಯೂ ಪರವಾನಗಿ ನಿಡಿದೆಯೇ? ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.

ರಾಜ ಮಹಾರಾಜರ ಕಾಲದಲ್ಲಿ ಇದೇ ರೀತಿ ಆಯುಧ ಪೂಜೆ ನಡೆಯುತ್ತಿತ್ತೆಂದು ಕೇಳಿದ್ದೇವು. ಈಗ ನೋಡುವ ಅವಕಾಶ ದೊರಕಿತು ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ. ಈ ರೀತಿ ಆಯುಧ ಪೂಜೆ ಮಾಡುವುದು ಒಂದು ರೀತಿಯ ಶೋ ಆಫ್​ ಆಗಿದೆ, ಸರ್ಕಾರ ಅವರು ಹೊಂದಿರುವ ಗನ್​ ಲೈಸೆನ್ಸ್​ ಅನ್ನು ಪರಿಶೀಲಿಸಿ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, (ಏಜೆನ್ಸೀಸ್​).