ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಜುಪಿಟರ್ ಆಸ್ಪತ್ರೆಗೆ ದಾಖಲು 
ದೇಶ

ಆಪರೇಷನ್​ ಟೈಗರ್​ ಬೆನ್ನಲ್ಲೆ ಆಸ್ಪತ್ರೆ ಸೇರಿದ ಏಕನಾಥ ಶಿಂಧೆ: ಡಿಸಿಎಂ ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು? Eknath Shinde Admitted

ಪ್ರಮುಖ ಮುಖ್ಯಾಂಶಗಳು

  • ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಜುಪಿಟರ್ ಆಸ್ಪತ್ರೆಗೆ ದಾಖಲು
  • ಜ್ವರ ಮತ್ತು ತೀವ್ರ ಆಲಸ್ಯದ ಹಿನ್ನೆಲೆ ಥಾಣೆಯ ಆಸ್ಪತ್ರೆ ಸೇರಿದ ಮಹಾರಾಷ್ಟ್ರ ಡಿಸಿಎಂ
  • ಮಹಾರಾಷ್ಟ್ರ ರಾಜಕೀಯದಲ್ಲಿ ಆಪರೇಷನ್ ಟೈಗರ್ ಸದ್ದು
ಥಾಣೆ: ಆರೋಗ್ಯದಲ್ಲಿ ವ್ಯತ್ಯಯವಾದ ಹಿನ್ನಲೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ್​ ಶಿಂಧೆ (Eknath Shinde Admitted) ಅವರನ್ನು ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ಕಳೆದ ಕೆಲ ದಿನಗಳಿಂದ ಶಿಂಧೆ ಜ್ವರ, ಮೈಕೈ ನೋವು ಹಾಗೂ ಆಲಸ್ಯದಿಂದ ಬಳಲುತ್ತಿದ್ದ ಕಾರಣ ಇಂದು (ಶನಿವಾರ, ಜು.4) ಆಸ್ಪತ್ರೆಗೆ ದಾಖಲಾಗಿದ್ದಾರೆ.

ವೈದ್ಯರು ಹೇಳಿದ್ದೇನು?

ಏಕನಾಥ್​ ಶಿಂಧೆ ಅವರನ್ನು ಪರೀಕ್ಷಿಸಿದ ಜುಪಿಟರ್​ ಆಸ್ಪತ್ರೆ ವೈದ್ಯರು, ಶಿಂಧೆ ಅವರ ಆರೋಗ್ಯ ಸ್ಥಿತಿಯಲ್ಲಿ ಏನು ತೊಂದರೆಯಿಲ್ಲ. ಅವರ ಆರೋಗ್ಯವಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಓಡಾಟ ಅಧಿಕವಾದ ಕಾರಣ ಹೀಗಾಗಿದೆ. ನಮ್ಮ ತಜ್ಞ ವೈದ್ಯರ ತಂಡ ಅವರ ಮೇಲೆ ತೀವ್ರ ನಿಗಾ ವಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಆಪರೇಷನ್​ ಟೈಗರ್​!
ಕೆಲ ದಿನಗಳಿಂದ ಮಹಾರಾಷ್ಟ್ರ ರಾಜಕಾರಣದಲ್ಲಿ ಆಪರೇಷನ್​ ಟೈಗರ್​ ಸದ್ದು ಜೋರಾಗಿದೆ. ಶಿವಸೇನಾ ಇಬ್ಭಾಗವಾದ ನಂತರ, ಈಗ ಮತ್ತೆ ಉದ್ಧವ್​ ಬಣದ ಆರು ಸಂಸದರು ಶಿಂಧೆ ಬಣವನ್ನು ಸೇರಿಕೊಂಡಿದ್ದಾರೆ. ಆದರೆ ಮಾಹಿತಿ ಪ್ರಕಾರ 20 ಕ್ಕೂ ಅಧಿಕ ಉದ್ಧವ್​ ಬಣದ ನಾಯಕರು ಶಿಂಧೆ ಬಣದವರ ಜೊತೆ ಸಂಪರ್ಕದಲ್ಲಿದ್ದು, ಅವರೆಲ್ಲರು ಸರಿಯಾದ ಸಮಯ ನೋಡಿ ಪಕ್ಷಾಂತರವಾಗಲಿದ್ದಾರೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).