ನವದೆಹಲಿ: ಪ್ರಸ್ತುತ ದೇಶದಲ್ಲಿರುವುದು ಶಿಕ್ಷಣ ವ್ಯವಸ್ಥೆಯಲ್ಲ, ಬದಲಾಗಿ ಲಕ್ಷಾಂತರ ಭಾರತೀಯ ಯುವಕರನ್ನು ಹೊರಗಿಡಲೆಂದೇ ರೂಪಿಸಲಾದ ಒಂದು ಬಹಿಷ್ಕರಿಸುವ ವ್ಯವಸ್ಥೆ ಎಂದು ಭಾನುವಾರ(ಅ. 18) ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ವಿದ್ಯಾರ್ಥಿಗಳೊಂದಿಗಿನ ತಮ್ಮ ಸಂವಾದದ ವಿಡಿಯೋವನ್ನು ಹಂಚಿಕೊಂಡಿರುವ ಅವರು, ಅದರಲ್ಲಿ ನಿಮ್ಮ ಬಳಿ ಹಣ ಅಥವಾ ಅಧಿಕಾರ ಇಲ್ಲದಿದ್ದರೆ, ಅಥವಾ ನಿಮಗೆ ಇಂಗ್ಲಿಷ್ ಮಾತನಾಡಲು ಬರದಿದ್ದರೆ, ಈ ವ್ಯವಸ್ಥೆಯು ಕಿಂಚಿತ್ತೂ ಯೋಚಿಸದೆ ನಿಮ್ಮನ್ನು ಹೊರಗೆ ತಳ್ಳುತ್ತದೆ ಎಂದು ಹೇಳಿದ್ದಾರೆ.
ಇದನ್ನು ಶಿಕ್ಷಣ ವ್ಯವಸ್ಥೆ ಎಂದು ಕರೆಯಲು ಸಾಧ್ಯವಿಲ್ಲ. ಇದೊಂದು ಹೊರಗಿಡುವ ವ್ಯವಸ್ಥೆ, ಲಕ್ಷಾಂತರ ಭಾರತೀಯ ಯುವಕರನ್ನು ಹೊರಗಿಡಲೆಂದೇ ಇದನ್ನು ರೂಪಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ರಾಹುಲ್ ಗಾಂಧಿಯವರು ತಮ್ಮ ಛತ್ರೋನ್ ಕಿ ಗೂಂಜ್ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳೊಂದಿಗೆ ದೊಡ್ಡ ಮಟ್ಟದಲ್ಲಿ ಸಂವಾದದಲ್ಲಿ ತೊಡಗಿಸಿಕೊಂಡಿದ್ದು, ದೇಶದ ಪ್ರತಿ ನಗರಗಳಲ್ಲಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ.
ಇಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವುದರ ಜೊತೆಗೆ, ಗಾಂಧಿಯವರು ತಮ್ಮ 'ಛತ್ರೋನ್ ಕಿ ಗೂಂಜ್' ಉಪಕ್ರಮದ ಮೂಲಕ ವಿದ್ಯಾರ್ಥಿಗಳೊಂದಿಗೆ ದೊಡ್ಡ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಚೆನ್ನೈನಲ್ಲಿ ಆರನೇ ಕಾರ್ಯಕ್ರಮ ನಡೆಸಿದ್ದರು. ಅದಕ್ಕೂ ಕೋಟಾ, ಡೆಹ್ರಾಡೂನ್, ಪ್ರಯಾಗರಾಜ್, ಪುಣೆ ಮತ್ತು ಇಂದೋರ್ನಲ್ಲಿ ನಡೆಸಿದ್ದರು (ಏಜೆನ್ಸೀಸ್).