Islamic preacher  
ದೇಶ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಇಸ್ಲಾಮಿಕ್ ಧರ್ಮಗುರು ವಿರುದ್ಧ ಪ್ರಕರಣ ದಾಖಲಿಸಿದ ಇಡಿ | Islamic preacher

ನವದೆಹಲಿ: ಪಾಕಿಸ್ತಾನಿ ಸಂಘಟನೆ ಸೇರಿದಂತೆ ಧಾರ್ಮಿಕ ತೀವ್ರಗಾಮಿಗಳವ ಜತೆ ಸಂಬಂಧದ ಆರೋಪದ ಮೇಲೆ ಉತ್ತರ ಪ್ರದೇಶದ ಮೂಲದ ಇಸ್ಲಾಮಿಕ್ ಧರ್ಮಪ್ರಚಾರ (Islamic preacher)ಕರೊಬ್ಬರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಮೌಲಾನಾ ಶಂಸುಲ್ ಹುದಾ ಖಾನ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಯಾರು ಈ ಶಂಸುಲ್ ಹುದಾ ಖಾನ್ ?
ಪ್ರಸ್ತುತ ಲಂಡನ್​ನಲ್ಲಿ ನೆಲೆಸಿರುವ ಖಾನ್,​ 1984 ರಲ್ಲಿ ಉತ್ತರ ಪ್ರದೇಶ ಸರ್ಕಾರಿ ಅನುದಾನಿತ ಮದರಸಾದಲ್ಲಿ ಸಹಾಯಕ ಶಿಕ್ಷಕರಾಗಿ ನೇಮಿಸಲಾಯಿತು. ನಂತರ 2013 ರಲ್ಲಿ ಬ್ರಿಟಿಷ್ ಪೌರತ್ವವನ್ನು ಪಡೆದಿದ್ದಾರೆಂದು ಆರೋಪಿಸಲಾಗಿದೆ ಆದರೆ ಭಾರತೀಯ ಪ್ರಜೆಯಾಗಿಲ್ಲದಿದ್ದರೂ ಅಥವಾ ಬೋಧನಾ ಕರ್ತವ್ಯಗಳನ್ನು ನಿರ್ವಹಿಸದಿದ್ದರೂ ವಿದೇಶದಲ್ಲಿ ವಾಸಿಸುತ್ತಿದ್ದರೂ 2013-2017 ರವರೆಗೆ ಸಂಬಳ ಪಡೆಯುತ್ತಲೇ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧಾರ್ಮಿಕ ತೀವ್ರಗಾಮಿಗಳ ಜತೆ ಸಂಪರ್ಕ
ವರದಿಗಳ ಪ್ರಕಾರ, ಖಾನ್ ಕಳೆದ 20 ವರ್ಷಗಳಲ್ಲಿ ಹಲವಾರು ವಿದೇಶಗಳಿಗೆ ಪ್ರಯಾಣಿಸಿದ್ದಾರೆ ಮತ್ತು ಭಾರತದಲ್ಲಿ ನಿರ್ವಹಿಸಲಾದ ಏಳರಿಂದ ಎಂಟು ಬ್ಯಾಂಕ್ ಖಾತೆಗಳ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ. ಧಾರ್ಮಿಕ ಶಿಕ್ಷಣದ ಸೋಗಿನಲ್ಲಿ ಉಗ್ರಗಾಮಿ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿರುವ ಮತ್ತು ಅಕ್ರಮ ಹಣಕಾಸು ಚಟುವಟಿಕೆಗಳಲ್ಲಿ ತೊಡಗಿರುವ ಆರೋಪ ಹೊತ್ತಿರುವ ಈ ವ್ಯಕ್ತಿ ಸುಮಾರು 30 ಕೋಟಿ ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಜಮ್‌ಗಢ ಜಿಲ್ಲೆಯ ಮೂಲದ ಖಾನ್, ರಾಜಾ ಫೌಂಡೇಶನ್ ಹೆಸರಿನ ತನ್ನ ಎನ್‌ಜಿಒ ಮೂಲಕ ಹಾಗೂ ತನ್ನ ವೈಯಕ್ತಿಕ ಬ್ಯಾಂಕ್ ಖಾತೆಗಳ ಮೂಲಕ ವಿವಿಧ ಮದರಸಾಗಳಿಗೆ ಹಣವನ್ನು ವರ್ಗಾಯಿಸಿದ್ದಾರೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ. ಅವರು ಆಜಮ್‌ಗಢ ಮತ್ತು ಸಂತ ಕಬೀರ್ ನಗರದಲ್ಲಿ ಎರಡು ಮದರಸಾಗಳನ್ನು ಸ್ಥಾಪಿಸಿದ್ದಾರೆ ಎಂದು ಆರೋಪಿಸಲಾಗಿದೆ, ನಂತರ ಅವುಗಳ ನೋಂದಣಿಗಳನ್ನು ರದ್ದುಗೊಳಿಸಲಾಗಿದೆ.
ಖಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ ಮತ್ತು ಪಾಕಿಸ್ತಾನದ ಮತೀಯ ಸಂಘಟನೆ 'ದಾವತ್ ಇ ಇಸ್ಲಾಮಿ' ಸದಸ್ಯರೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ತನಿಖೆಯ ಭಾಗವಾಗಿ ಆರೋಪಿಗಳಿಗೆ ಸಂಬಂಧಿಸಿದ ಹಣಕಾಸಿನ ಜಾಲ, ವಿದೇಶಿ ಸಂಪರ್ಕಗಳು ಮತ್ತು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದ್ದಾರೆ,(ಏಜನ್ಸೀಸ್).