ಎಸ್​ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ 
ದೇಶ

ಬಿಹಾರದಲ್ಲಿ ಎನ್​ಡಿಎ ಗೆಲುವಿಗೆ ಚುನಾವಣೆ ಆಯೋಗದ SIR ಆಟ ಕಾರಣ; ನಮ್ಮಲ್ಲಿ ಆಡಲು ಬಿಡಲ್ಲ; ಅಖಿಲೇಶ್ ಯಾದವ್

ಪ್ರಮುಖ ಮುಖ್ಯಾಂಶಗಳು

  • ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಗೆಲುವು
  • ವಿಪಕ್ಷಗಳು ಸೋಲಲು ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರಣ-ಅಖಿಲೇಶ್
ಲಖನೌ: ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಗೆಲುವಿಗೆ ಭಾರತೀಯ ಚುನಾವಣೆ ಆಯೋಗ ನಡೆಸಿದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ(SIR) ಪ್ರಕ್ರಿಯೆ ಆಟವೇ ಕಾರಣ ಎಂದು ಉತ್ತರ ಪ್ರದೇಶದ ಎಸ್​ಪಿ ಮುಖ್ಯಸ್ಥ ಮತ್ತು ಮಾಜಿ ಸಿಎಂ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಿಹಾರದ ಫಲಿತಾಂಶ ಮತ್ತು ಮಹಾಘಟಬಂಧನ್‌ನ ಸೋಲಿಗೆ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸಲು ನಡೆಸಿದ ಚುನಾವಣಾ ಪೂರ್ವ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರಣ ಎಂದಿದ್ದು, ಬಿಹಾರದಲ್ಲಿ ಎಸ್‌ಐಆರ್ ಆಡಿದ ಆಟ ಇನ್ನು ಮುಂದೆ ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ ಅಥವಾ ಬೇರೆಡೆ ಸಾಧ್ಯವಾಗುವುದಿಲ್ಲ. ಯಾಕಂದರೆ ಈಗ ಪಿತೂರಿ ಬಹಿರಂಗಗೊಂಡಿದೆ. 
ಈ ಆಟವನ್ನು ಇನ್ನು ಮುಂದೆ ಆಡಲು ಬಿಡುವುದಿಲ್ಲ. ಜಾಗರೂಕರಾಗಿ ಬಿಜೆಪಿಯ ಯೋಜನೆಗಳನ್ನು ವಿಫಲಗೊಳಿಸುತ್ತೇವೆ. ಬಿಜೆಪಿ ಎನ್ನುವುದು ಒಂದು ಪಕ್ಷವಲ್ಲ, ಬದಲಿಗೆ ಅದೊಂದು ವಂಚನೆ ಕೂಟ ಎಂದು ಹೇಳಿದ್ದಾರೆ.