ಕೇಂದ್ರ ಬಜೆಟ್​ 2026  
ದೇಶ

ಮದ್ಯಪ್ರಿಯರಿಗೆ ತಲೆಸುತ್ತು, ಧಮ್​ ಹೊಡೆಯುವವರ ತುಟಿ ಸುಟ್ಟಿದ ಕೇಂದ್ರ ಬಜೆಟ್​! ದರದಲ್ಲಿ ಇನ್ನಷ್ಟು ಏರಿಕೆ...

ಪ್ರಮುಖ ಮುಖ್ಯಾಂಶಗಳು

  • 9ನೇ ಬಾರಿಗೆ ದಾಖಲೆಯ ಬಜೆಟ್​ ಮಂಡಿಸಿದ ವಿತ್ತ ಸಚಿವೆ
  • 85 ನಿಮಿಷಗಳ ಕಾಲ ಬಜೆಟ್​ ಮಂಡನೆ
  • ಸಿಗರೇಟ್​, ಮದ್ಯಪ್ರಿಯರಿಗೆ ಶಾಕ್​ ನೀಡಿದ ಕೇಂದ್ರ ಬಜೆಟ್​
Union Budget 2026: ಸತತ 9ನೇ ಬಾರಿಗೆ 2026-27ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ಮಂಡಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​, ಪ್ರಥಮ ಬಾರಿಗೆ ಕರ್ತವ್ಯ ಭವನದಲ್ಲಿ ಬಜೆಟ್​ ಮಂಡನೆ ಮಾಡಿದ್ದು ವಿಶೇಷ. 85 ನಿಮಿಷಗಳಲ್ಲಿ ಬಜೆಟ್​ ಭಾಷಣ ಮುಕ್ತಾಯಗೊಳಿಸಿದ ವಿತ್ತ ಸಚಿವೆ, ತಂಬಾಕು ಮತ್ತು ಮದ್ಯಪ್ರಿಯರಿಗೆ ಶಾಕ್​ ನೀಡಿದ್ದಾರೆ.
7 ಹೈಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ, ಏ.01ರಿಂದ ಹೊಸ ಐಟಿ ಕಾಯ್ದೆ ಜಾರಿ ಸೇರಿ ಕೆಲವು ಇಲಾಖೆಗಳಿಗೆ ಬಂಪರ್ ಕೊಡುಗೆಗಳನ್ನು ನೀಡಿದ ಬಜೆಟ್​ನಲ್ಲಿ,​ ಮದ್ಯಪ್ರಿಯರು ಮತ್ತು ಧೂಮಪಾನ ಮಾಡುವವರ ಜೇಬಿಗೆ ಕತ್ತರಿ ಹಾಕಲಾಗಿದೆ. ಸಿಗರೇಟ್​ ಮತ್ತು ಮದ್ಯದ ದರವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಆದ್ರೆ, ಬೀಡಿ ಸೇದುವವರಿಗೆ ಇಲ್ಲಿ ರಿಲೀಫ್ ಸಿಕ್ಕಿದೆ.
ಅಬಕಾರಿ ಸುಂಕ ಮತ್ತು ಆರೋಗ್ಯ ಸೆಸ್ ಹೆಚ್ಚಳದಿಂದಾಗಿ ಸಿಗರೇಟ್, ಪಾನ್ ಮಸಾಲಾ ಮತ್ತು ಇತರ ತಂಬಾಕು ಉತ್ಪನ್ನಗಳು ಹೆಚ್ಚು ದುಬಾರಿಯಾಗಲಿವೆ. ಬಜೆಟ್​ ಮಂಡನೆಗೂ ಮೊದಲೇ ಈ ವಿಷಯ ಮಾರಾಟಗಾರರಿಗೆ ಹಾಗೂ ಖರೀದಿಗಾರರಿಗೆ ಗೊತ್ತಿತ್ತು. ಆದರೆ, ದರದಲ್ಲಿ ಕೊಂಚ ಏರಿಕೆ ಕಾಣಬಹುದು ಎಂದು ನಿರೀಕ್ಷಿಸಿದ್ದರು. ಆದರೆ, ಬಜೆಟ್​ ನಂತರ ಬೆಲೆ ಹಿಂದಿನಕ್ಕಿಂತ ಹೆಚ್ಚು ದುಬಾರಿ ಆಗಲಿದೆ ಎಂಬ ವಿಷಯ ಸದ್ಯ ದೊಡ್ಡ ತಲೆನೋವು ತಂದಿಟ್ಟಿದೆ.