ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಕಡಿಮೆಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದ ಕಾರಣ ಬುಧವಾರ(ಜು. 01) ಇಂಧನ ಕಂಪನಿ ನಯಾರಾ ಎನರ್ಜಿಸ್(Nayara Energy), ತನ್ನ ರಾಷ್ಟ್ರವ್ಯಾಪಿ ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 5 ರೂ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3 ರೂ. ಕಡಿಮೆ ಮಾಡಿದೆ.
ನಯಾರಾ ಮೂಲಗಳ ಪ್ರಕಾರ, ಇಂದು ಪರಿಷ್ಕಕೃತಗೊಂಡ ದರವು ದೇಶಾದ್ಯಂತ ತನ್ನ 7, 000ಕ್ಕೂ ಹೆಚ್ಚು ಪೆಟ್ರೋಲ್ ಬಂಕ್ಗಳನ್ನು ಜಾರಿಗೆ ಬಂದಿದೆ ಎಂದು ತಿಳಿಸಿದೆ. ಜೊತೆಗೆ ವ್ಯಾಟ್ ಮತ್ತು ಇತರ ಸ್ಥಳೀಯ ಸುಂಕಗಳಲ್ಲಿನ ವ್ಯತ್ಯಾಸಗಳಿಂದಾಗಿ ಪಂಪ್ ಬೆಲೆಗಳು ರಾಜ್ಯಗಳಲ್ಲಿ ಬದಲಾಗುತ್ತಲೇ ಇವೆ ಎಂದು ಹೇಳಿದೆ.
ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್(ಎಚ್‌ಪಿಸಿಎಲ್) ಕಂಪನಿಗಳು ಇನ್ನೂ ತಮ್ಮ ಚಿಲ್ಲರೆ ಇಂಧನ ಬೆಲೆಗಳನ್ನು ಪರಿಷ್ಕರಿಸಿಲ್ಲ.
ಇರಾನ್ ಸಂಘರ್ಷ ಮತ್ತು ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾದ ಬಳಿಕ ಮಾರ್ಚ್ 26 ರಂದು ನಯಾರಾ ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 5 ರೂ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3 ರೂ ಹೆಚ್ಚಿಸಿತ್ತು. ಇಂದು ಅಂತಾರಾಷ್ಟ್ರೀಯ ಮಟ್ಟದ ಕಚ್ಚಾತೈಲ ಬೆಲೆ ಇಳಿಕೆಯಾಗಿರುವ ಕಾರಣ ತನ್ನ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಬೆಲೆಯನ್ನು ಇಳಿಕೆ ಮಾಡಿದೆ.
ಈ ಮೂಲಕ ಕಳೆದ ಎರಡು ವರ್ಷಗಳಲ್ಲಿ ಬೆಲೆಗಳನ್ನು ಕಡಿಮೆ ಮಾಡಿದ ಮೊದಲ ಇಂಧನ ಚಿಲ್ಲರೆ ವ್ಯಾಪಾರಿ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಗುಜರಾತ್ ಮೂಲದ ಕಂಪನಿಯಾ ನಯಾರಾ ಎನರ್ಜಿ ವರ್ಷಕ್ಕೆ 20 ಮಿಲಿಯನ್ ಟನ್‌ಗಳಷ್ಟು ತೈಲವನ್ನು ಸಂಸ್ಕರಿಸುತ್ತದೆ (ಏಜೆನ್ಸೀಸ್).