ಸಾಂದರ್ಭಿಕ ಚಿತ್ರ 
ದೇಶ

ಡ್ರಿಂಕ್ ಅಂಡ್ ಡ್ರೈವ್ ಕೇಸ್​ನಿಂದ ತಪ್ಪಿಸಿಕೊಳ್ಳಲು ಪೊಲೀಸ್ ಅಂಕಲ್ಸ್ ವಾಟ್ಸಾಪ್ ಗ್ರೂಪ್ ರಚಿಸಿದ ಕುಡಕರು; ಗ್ರೂಪ್​ಗೆ ಸೇರಿದ ಎಸ್​ಐ | WhatsApp group

ಹೈದರಾಬಾದ್: ನಗರ & ಪಟ್ಟಣದಲ್ಲಿ ಕುಡಿದು ವಾಹನ ಚಲಾಯಿಸುವಾಗ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಮತ್ತು ಡ್ರಿಂಕ್ ಅಂಡ್ ಡ್ರೈವ್ ಕೇಸ್​ನಿಂದ ಪಾರಾಗಲು ಪೊಲೀಸ್ ಅಂಕಲ್ಸ್ ಎಂಬ ವಾಟ್ಸಾಪ್ ಗ್ರೂಪ್(WhatsApp group) ರಚಿಸಿದ್ದ ಕುಡಕರು, ಸಿಕ್ಕಿ ಬಿದ್ದ ವ್ಯಕ್ತಿಯ ಪೋನ್ ಪರಿಶೀಲನೆ ಬಳಿಕ ಗ್ರೂಪ್ ಬಹಿರಂಗಗೊಂಡಿದೆ.
ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಗೋದಾವರಿಖನಿಯಲ್ಲಿ ಈ ಘಟನೆ ನಡೆದಿದ್ದು, ಪಟ್ಟಣದಲ್ಲಿ ಡ್ರಿಂಕ್ ಅಂಡ್ ಡ್ರೈವ್ ಪರೀಕ್ಷೆಗಳನ್ನು ಎಲ್ಲಿ ನಡೆಸಲಾಗುತ್ತದೆ? ವಾಹನಗಳನ್ನು ಎಲ್ಲಿ ನಿಲ್ಲಿಸಿ ಪರಿಶೀಲಿಸುತ್ತಾರೆ ಎಂಬುದರ ಕುರಿತು ಮಾಹಿತಿಯನ್ನು ಗುಂಪಿನ ಸದಸ್ಯರು ಗ್ರೂಪ್​ನಲ್ಲಿ ಹಂಚಿಕೊಳ್ತಿದ್ದರು ಮತ್ತು ತಪಾಸಣೆಯಿಂದ ತಪ್ಪಿಸಿಕೊಳ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಕುಡಿದ ವ್ಯಕ್ತಿಯ ತಪಾಸಣೆ ವೇಳೆ ಪೊಲೀಸರು ಈ ವಾಟ್ಸಾಪ್ ಗ್ರೂಪ್​ ಅನ್ನು ಪತ್ತೆ ಹಚ್ಚಿದ್ದಾರೆ. ಗ್ರೂಪ್​ನಲ್ಲಿ 1024 ಮಂದಿಯಿದ್ದು, ಗ್ರೂಪ್​​ನ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಎಸ್​ಐ ಸ್ವತಃ ಆ ವಾಟ್ಸಾಪ್ ಗ್ರೂಪ್​ಗೆ ಸೇರಿದ್ದಾರೆ. ಎಸ್ಐ ಗ್ರೂಪ್​ಗೆ ಸೇರಿದ್ದಾರೆ ಎಂದು ತಿಳಿದ ಬಳಿಕ ಆ ಗುಂಪಿನ ಸದಸ್ಯರು ಒಬ್ಬೊಬ್ಬರಾಗಿ ಗ್ರೂಪ್‌ನಿಂದ ಹೊರಹೋಗಲು ಆರಂಭಿಸಿದ್ದಾರೆ.
ಈ ಕುರಿತು ವಿಡಿಯೋ ಮಾಡಿ ಗ್ರೂಪ್​ನಲ್ಲಿ ಬಿಟ್ಟಿರುವ ಎಸ್​ಐ, ಗ್ರೂಪ್‌ನಲ್ಲಿನ ನಿಮ್ಮೆಲ್ಲರ ಫೋನ್ ಸಂಖ್ಯೆಗಳನ್ನು ನಾನು ಸೇವ್ ಮಾಡಿದ್ದೇನೆ. ಶೀಘ್ರದಲ್ಲೇ ನಿಮ್ಮೆಲ್ಲರಿಗೂ ಕೌನ್ಸೆಲಿಂಗ್ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ (ಏಜೆನ್ಸೀಸ್).