- ದೆಹಲಿಯಲ್ಲಿ ನವವಿವಾಹಿತೆ ಆಕೃತಿ ಸುತಾರ್ ಸಾವಿನ ಸುತ್ತ ಅನುಮಾನದ ಹುತ್ತ.
- ಮದುವೆಯಾದ 71ದಿನಕ್ಕೆ ದೆಹಲಿಯ ಅಪಾರ್ಟ್ಮೆಂಟ್ವೊಂದರ ಬಳಿ ಮೃತದೇಹ ಪತ್ತೆ.
- ವರದಕ್ಷಿಣೆ ಮತ್ತು ದೈಹಿಕ ಕಿರುಕುಳವೇ ಇಷ್ಟಕ್ಕೆಲ್ಲ ಕಾರಣ ಎಂದ ಪೋಷಕರು
Delhi Woman Death: ದೆಹಲಿಯ ಲೋಧಿ ಕಾಲೋನಿಯ ವಸತಿ ಸಂಕೀರ್ಣದಲ್ಲಿ 28 ವರ್ಷದ ಆಕೃತಿ ಸುತಾರ್ ಎನ್ನುವವರು ಮೃತಪಟ್ಟ ಘಟನೆ ಜುಲೈ 4ರಂದು ಬೆಳಕಿಗೆ ಬಂದಿದೆ. ಗಂಡ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ಕೊಟ್ಟಿದ್ದರಿಂದಲೇ ಮೃತಪಟ್ಟಿದ್ದಾಳೆ ಆಕೆಯ ಕುಟುಂಬಸ್ಥರು ದೂರು ನೀಡಿದ್ದಾರೆ.
ಛತ್ತರ್ಪುರದಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಆಕೃತಿ ತನ್ನ ಬಾಲ್ಯದ ಗೆಳತಿ ಆಗಸ್ಟಿಕಾಳ ಸಹೋದರ ಆರುಸ್ತು ಸಿಕ್ಕಾ ಎಂಬಾತನನ್ನು ಕಳೆದ ಎಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದಳು. ಏಪ್ರಿಲ್ 24ರಂದು ಇಬ್ಬರು ವೈಬಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ನಂತರ ಸುದೀರ್ಘ ರಜೆ ಪಡೆದುಕೊಂಡಿದ್ದ ಆಕೃತಿ ಶನಿವಾರವಷ್ಟೇ ಕೆಲಸಕ್ಕೆ ಹೋಗಿದ್ದರು. ಆದರೆ, ಜುಲೈ 5ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಆಕೃತಿ ಅವರು ದೆಹಲಿಯ ಲೋಧಿ ಕಾಲೋನಿ ಪ್ರದೇಶದಲ್ಲಿ ಕಟ್ಟಡದಿಂದ ಬಿದ್ದಿದ್ದರು. ತೀವ್ರ ಗಾಯ ಹಾಗೂ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಸೇರಿಸಲಾಗಿತ್ತು ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದರು.
ಶನಿವಾರ ಆಕೃತಿ ಕೆಲಸದ ಸ್ಥಳದಲ್ಲಿ ಸಣ್ಣ ಪಾರ್ಟಿ ಮಾಡಿದ್ದರು. ಖುಷಿಯಾಗಿಯೇ ಇದ್ದರು. ಸಂಜೆ ಅಲ್ಲಿಂದ ಮನೆಗೆ ಹೊರಡುವಾಗ ಆಕೆಯ ತಾಯಿಗೆ ಕರೆ ಮಾಡಿ, ಎಲ್ಲ ವಿಚಾರವನ್ನು ಮಾತನಾಡಿದ್ದಳು. ಆಗ ಅವಳ ಸ್ಥಿತಿ ಸಹಜವಾಗಿಯೇ ಇತ್ತು. ಆದರೆ ರಾತ್ರಿ 8 ಗಂಟೆಗೆ ಆರುಸ್ತು ಸಿಕ್ಕಾ ಕರೆ ಮಾಡಿ ಆಕೃತಿ ಮನೆಗೆ ಬಂದಿಲ್ಲ ನಾಪತ್ತೆಯಾಗಿದ್ದಾಳೆ ಎಂದು ಹೇಳಿಕೊಂಡ. ರಾತ್ರಿ 9:30 ಗಂಟೆಗೆ ಸುಮಾರಿಗೆ ಪೊಲೀಸರು ಕರೆ ಮಾಡಿ ದೆಹಲಿಯ ಲೋಧಿ ಕಾಲೋನಿಯ ವಸತಿ ಸಂಕೀರ್ಣದಲ್ಲಿ ಆಕೃತಿ ಮೃತದೇಹದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.
ಎಲ್ಲ ವಿಚಾರಕ್ಕೂ ಒಡೆದಾಡುತ್ತಿದ್ದ
ಜೂನ್ 17ರಂದು ಆಕೃತಿ ಕರೆ ಮಾಡಿ ಗಂಡ ಬೆಲ್ಟ್ನಿಂದ ಹೊಡೆದಿದ್ದಾಗಿ ಹೇಳಿಕೊಂಡಿದ್ದಳು. ಜೂನ್ 29ರಂದು ನಾನು ಆಕೆಯನ್ನು ಭೇಟಿಯಾಗಿ ಹೊರಡುವಾಗ ತೀರ ಹೆದರಿದ್ದಳು ನೀನಿಗ ಹೊರಟರೆ ನನ್ನನ್ನು ಆತ ಕೊಲ್ಲಬಹುದು ಎಂದಿದ್ದಳು. ಒಮ್ಮೆ ಆಕೆ ಆಹಾರವನ್ನು ಬಿಸಿ ಮಾಡದ ಕಾರಣ ಗಂಡನಿಂದ ಹೊಡೆಸಿಕೊಂಡಿದ್ದಳು. ಈ ಬಗ್ಗೆ ಆಕೆ ಸ್ನೇಹಿತೆ ಅಗಸ್ಟಿಕಾಗೆ ಹೇಳಿಕೊಂಡಿದ್ದಳು. ಆ ದಿನವೂ ಹಲ್ಲೆ ಮಾಡಿದ್ದ. ಆಗ ಅಗಸ್ಟಿಕಾ ಮತ್ತು ಆಕೆ ಗಂಡ ಸಮಾಧಾನ ಪಡಿಸಿದ್ದರು ಎಂದು ಹೇಳಿದ್ದಾರೆ.
ಪ್ರತಿ ವಿಚಾರಕ್ಕೂ ಅನುಮಾನ
ಆಕೃತಿ ಕಾಣೆಯಾದ ದಿನ ನನಗೆ ಅಗಸ್ಟಿಕಾ ಮತ್ತು ಅರಸ್ತು ಕರೆ ಮಾಡಿ ಬೆದರಿಕೆ ಹಾಕಿದ್ದರು. ನೀವೆ ಬಚ್ಚಿಟ್ಟಿದ್ದೀರಾ ಅಥವಾ ಆಕೆ ಬೇರೆಯವನೊಂದಿಗೆ ಪರಾರಿಯಾಗಿದ್ದಾಳೆ ಎಂದು ನಿಂದಿಸಿದ್ದರು. ಅಷ್ಟರಲ್ಲಿ ಪೊಲೀಸರಿಂದ ಕರೆ ಬಂದಿತ್ತು ಆಕೆ ಮೃತಪಟ್ಟಿದ್ದಾಳೆ ಎಂದು ಈ ಬಗ್ಗೆ ಆಕೃತಿ ಅಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆ ನಡೆಯುವ ಎರಡು ದಿನದ ಹಿಂದೆ ದಂಪತಿ ಜೋರಾಗಿ ಜಗಳವಾಡಿದ್ದರು ಎಂದು ಪೊಲೀಸರಿಗೆ ಆಕೆಯ ತಾಯಿ ಮಾಹಿತಿ ನೀಡಿದ್ದಾರೆ. ಸದ್ಯ ಪೊಲೀಸರು ಅರಾಸ್ತು ಸಿಕ್ಕಾನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ, (ಏಜೆನ್ಸೀಸ್).