ಸೋನಮ್ ವಾಂಗ್‌ಚುಕ್ ಹೋರಾಟಕ್ಕೆ ಅಣ್ಣಾ ಹಜಾರೆ ಬೆಂಬಲ
- ನೀಟ್ ಅಕ್ರಮ ಖಂಡಿಸಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್
- ಸೋನಮ್ ವಾಂಗ್‌ಚುಕ್ ಹೋರಾಟಕ್ಕೆ ಅಣ್ಣಾ ಹಜಾರೆ ಬೆಂಬಲ
- ಕೂಡಲೇ ವಾಂಗ್‌ಚುಕ್ ಜೊತೆ ಮಾತುಕತೆ ನಡೆಸಿ; ಸರ್ಕಾರಕ್ಕೆ ಖಡಕ್ ವಾರ್ನಿಂಗ್
ಮುಂಬೈ: ನೀಟ್ ಸೇರಿದಂತೆ ದೇಶದಲ್ಲಿ ನಡೆಯುವ ಪರೀಕ್ಷೆಗಳ ಅಕ್ರಮವನ್ನು ವಿರೋಧಿಸಿ, ಪರಿಸರವಾದಿ ಸೋನಮ್ ವಾಂಗ್‌ಚುಕ್ ಕಳೆದ 21 ದಿನಗಳಿಂದ ದೆಹಲಿಯ ಜಂತರ್-ಮಂತರ್ನಲ್ಲಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ. ನಿರಂತರ ಉಪವಾಸದಿಂ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಂಗ್‌ಚುಕ್ ಅವರನ್ನು ಶನಿವಾರ (ಜು.18) ದೆಹಲಿ ಪೊಲೀಸರು ಸಫ್ದರ್ಜಂಗ್ ಆಸ್ಪತ್ರೆಗೆ ನ್ಯಾಯಾಲಯದ ಆದೇಶದಂತೆ ದಾಖಲಿಸಿದ್ದಾರೆ.
ಈದೀಗ ಸೋನಮ್ ವಾಂಗ್‌ಚುಕ್ ಅವರ ಹೋರಾಟಕ್ಕೆ ದೇಶಾದ್ಯಂತ ಬೆಂಬಲ ಸಿಗುತ್ತಿರುವ ಹಿನ್ನಲೆ, ಈಗ ಹಿರಿಯ ಹೋರಾಟಗಾರ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಣ್ಣಾ ಹಜಾರೆ (Anna Hazare on Sonam Wangchuk) ಕೂಡ ಬೆಂಬಲವನ್ನು ನೀಡಿದ್ದಾರೆ.
ಸರ್ಕಾರ ವಾಂಗ್‌ಚುಕ್ ಜೊತೆ ಮಾತುಕತೆ ನಡೆಸಿ!
ಸೋನಮ್ ವಾಂಗ್‌ಚುಕ್ ಒಂದು ಉತ್ತಮ ಉದ್ದೇಶವನ್ನು ಇಟ್ಟುಕೊಂಡು ಸತ್ಯಾಗ್ರಹ ಮಾಡುತ್ತಿದ್ದಾರೆ. ಸರ್ಕಾರ ಅವರ ಬೇಡಿಕೆ ಏನಿದೆ ಎಂದು ಕೇಳಬೇಕು, ಇಲ್ಲವೇ ಕುಳಿತು ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ವಾಂಗ್‌ಚುಕ್ ಅವರ ತಾಳ್ಮೆ ಪರೀಕ್ಷೆ ಮಾಡುವುದು ಸರಿಯಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.
ಒಂದು ವೇಳೆ ಸರ್ಕಾರ ವಾಂಗ್‌ಚುಕ್ ಅವರ ಹೋರಾಟವನ್ನು ನಿರ್ಲಕ್ಷ ಮಾಡಿದರೆ, ಮುಂದೆ ದೇಶದಲ್ಲಿ ನಡೆಯುವ ಕೋಲಾಹಲಕ್ಕೆ ಈ ಸರ್ಕಾರವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮಗೆ ಇದರ ಅಗತ್ಯವಿಲ್ಲ!
ಇತ್ತ ದೆಹಲಿ ಪೊಲೀಸರು ಸೋನಮ್ ವಾಂಗ್ಚುಕ್ರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ್ದಕ್ಕೆ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ವಿರೋಧ ವ್ಯಕ್ತಪಡಿಸಿದ್ದಾರೆ. ಕಳೆದ 20 ದಿನಗಳಿಂದ ನನ್ನ ಪತಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದು, ಅವರ ಆರೋಗ್ಯ ಚೆನ್ನಾಗಿಯೇ ಇದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸುವ ಅಗತ್ಯವಿರಲಿಲ್ಲ. ಅವರ ಇಚ್ಚೆ ಇಲ್ಲದೆ ಆಸ್ಪತ್ರೆಗೆ ದಾಖಲಿಸಲು ಸಂವಿಧಾನಾತ್ಮಕವಾಗಿ ಸಾಧ್ಯವಿಲ್ಲ. ಇದನ್ನು ವಿರೋಧಿಸಲು ಆರ್ಟಿಕಲ್ 32 ನನಗೆ ಅನುಮತಿ ನೀಡುತ್ತದೆ. ಅವರ ಕುಟುಂಬದ ಹಾಗು ಅವರನ್ನು 20 ದಿನಗಳಿಂದ ಪರೀಕ್ಷಿಸುತ್ತಿರುವ ವೈದ್ಯರ ಅನುಮತಿ ಇಲ್ಲದೆ ಸಫ್ದರ್ಜಂಗ್ ಆಸ್ಪತ್ರೆ ಸಿಬ್ಬಂದಿ ಯಾವುದೇ ರೀತಿಯ ಚಿಕಿತ್ಸೆಯನ್ನು ನೀಡಬಾರದೆಂದು ಆಗ್ರಹಿಸಿದ್ದಾರೆ, (ಏಜನ್ಸೀಸ್).