ಅಭಿಜಿತ್ ದೀಪ್ಕೆ ಮತ್ತು ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ
- ಅಭಿಜಿತ್ ದೀಪ್ಕೆ ಮತ್ತು ಪೊಲೀಸ್ ಅಧಿಕಾರಿ ನಡುವೆ ವಾಗ್ವಾದ
- ಪೊಲೀಸ್ ಅಧಿಕಾರಿ ಮೇಲೆ ಏಕವಚನದಲ್ಲಿ ರೇಗಿದ ದೀಪ್ಕೆ
- ನನ್ನ ಮನೆಗೆ ಯಾರು ಬರಬೇಕೆಂದು ನೀನು ಹೇಳಬೇಡ
ಮುಂಬೈ: ಕಾಕ್ರೋಚ್ ಜನತಾ ಪಾರ್ಟಿ
(CJP) ಸಂಸ್ಥಾಪಕ ಅಭಿಜಿತ್ ದೀಪ್ಕೆ ಹಾಗೂ ಪೊಲೀಸ್ ಸಬ್-ಇನ್ಸ್‌ಪೆಕ್ಟರ್
(Abhijit Dipke on Police) ನಡುವೆ ನಡೆದ ಮಾತಿನ ಚಕಮಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ತಮ್ಮ ಮನೆಗೆ ಬಂದಿದ್ದ ಅತಿಥಿಗಳನ್ನು ಭೇಟಿಯಾಗಲು ಪೊಲೀಸ್ ಅಧಿಕಾರಿ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿರುವ ದೀಪ್ಕೆ, ಅಧಿಕಾರಿಯ ವಿರುದ್ಧ ಗರಂ ಆಗಿದ್ದಾರೆ.
ಅತಿಥಿಗಳನ್ನು ಭೇಟಿಯಾಗಲು ತಡೆದಿದ್ದೇಕೆ?
ಮೂಲಗಳ ಪ್ರಕಾರ, ಅಭಿಜಿತ್ ದೀಪ್ಕೆ ಅವರ ನಿವಾಸಕ್ಕೆ ಅವರನ್ನು ಭೇಟಿ ಮಾಡಲು ಸಾಕಷ್ಟು ಜನರು ಹಾಗೂ ಅತಿಥಿಗಳು ಬಂದಿದ್ದರು. ಆದರೆ, ಭದ್ರತೆ ಕಾರಣಗಳೊಡ್ಡಿದ ಪೊಲೀಸ್ ಅಧಿಕಾರಿಯೊಬ್ಬರು ಅತಿಥಿಗಳು ಒಟ್ಟಾಗಿ ಒಳಗೆ ಹೋಗುವುದನ್ನು ತಡೆಯಲು ಯತ್ನಿಸಿದ್ದಾರೆ ಎನ್ನಲಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಾನು ಯಾರನ್ನು ಭೇಟಿಯಾಗಬೇಕು, ಯಾರನ್ನು ಬಿಡಬೇಕು ಎಂದು ನಿರ್ಧರಿಸಲು ನೀನು ಯಾರು? ಎಂದು ದೀಪ್ಕೆ ಪೊಲೀಸ್ ಅಧಿಕಾರಿಯನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಎಲ್ಲರಿಗೂ ಒಂದೇ ಬಾರಿಗೆ ಮನೆಯೊಳಗೆ ಪ್ರವೇಶ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದಾಗ ಸಿಟ್ಟಿಗೆದ್ದ ದೀಪ್ಕೆ, ಪೊಲೀಸರ ಈ ಅತಿಯಾದ ಹಸ್ತಕ್ಷೇಪವನ್ನು ತೀವ್ರವಾಗಿ ಖಂಡಿಸಿದ್ದಾರೆ. ಜನರು ನನ್ನನ್ನು ನೋಡಲು ಬರುತ್ತಾರೆ, ನಾನು ಅವರನ್ನು ಭೇಟಿ ಮಾಡುತ್ತೇನೆ. ಯಾರನ್ನು ಭೇಟಿಯಾಗಬೇಕು ಎಂದು ಪೊಲೀಸರು ನನೆಗೆ ಹೇಳಿಕೊಡಬೇಡಿ ಎಂದು ನುಡಿದಿದ್ದಾರೆ.
ಎಸ್‌ಐ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು
ಅಷ್ಟೇ ಅಲ್ಲದೆ, ವಾಗ್ವಾದದ ಭರದಲ್ಲಿ ದೀಪ್ಕೆ ಆ ಪೊಲೀಸ್ ಅಧಿಕಾರಿಯನ್ನು ಯಾವ ಠಾಣೆ ಹಾಗೂ ಇಲಾಖೆಗೆ ಸೇರಿದವರು ಎಂದು ಪ್ರಶ್ನಿಸಿದ್ದು ಮಾತ್ರವಲ್ಲದೆ, ತಕ್ಷಣ ತಮ್ಮ ಮನೆಯ ಆವರಣದಿಂದ ಹೊರಹೋಗುವಂತೆ ಆದೇಶಿಸಿದ್ದಾರೆ. ಈ ಘಟನೆಯ ಬಳಿಕ ದೀಪ್ಕೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಯ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ, (ಏಜನ್ಸೀಸ್).