Online Gaming Loss Student Suicide Jalgaon Maharashtra
- ರಕ್ಷಾ ಬಂಧನದ ದಿನವೇ ರಾಖಿ ಕಟ್ಟಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ಯುವಕ.
- ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ನಡೆದ ಮನಕಲುಕುವ ದುರ್ಘಟನೆ.
- ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡಿದ್ದೇ ಈ ನಿರ್ಧಾರಕ್ಕೆ ಕಾರಣ ಎಂದು ಶಂಕೆ.
ಮುಂಬೈ: ರಕ್ಷಾ ಬಂಧನದ(
Raksha Bandhan
) ದಿನ ಅಕ್ಕನಿಂದ ರಾಖಿ ಕಟ್ಟಿಸಿಕೊಂಡ ನಂತರ, 17 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಬೆಳಕಿಗೆ ಬಂದಿದೆ. ಅವರ ಈ ನಿರ್ಧಾರಕ್ಕೆ ಆನ್‌ಲೈನ್ ಗೇಮಿಂಗ್ನಲ್ಲಾದ ನಷ್ಟವೇ ಕಾರಣ ಎನ್ನಲಾಗಿದೆ.
ರೋಹಿತ್ ಸಾಹೇಬ್ರಾವ್ ಧಂಗರ್ ಎಂಬ 11ನೇ ತರಗತಿಯ ಯುವಕನೇ ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಆತ ಮೃತ ಒಡುವ ಮುನ್ನ ಅಕ್ಕನೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡು ಎಲ್ಲರನ್ನೂ ಚೆನ್ನಾಗಿ ನೋಡಿಕೋ, ಯಾರನ್ನೂ ಒಂಟಿಯಾಗಿ ಬಿಡಬೇಡ ಎಂದು ಪೋಸ್ಟ್ ಮಾಡಿದ್ದನು ಎನ್ನಲಾಗಿದೆ.
ಪೋಸ್ಟ್ನಲ್ಲಿ ಏನಿತ್ತು?
ರೋಹಿತ್ ತನ್ನ ತಂದೆಯೊಂದಿಗೆ ಹೋಗಿ ತನ್ನ ಅಕ್ಕನ ಬಳಿ ರಕ್ಷಾ ಬಂಧನದ ರಾಖಿ ಕಟ್ಟಿಸಿಕೊಂಡು ಮನೆಗೆ ವಾಪಸಾಗಿದ್ದನು. ಆದರೆ ಮನೆಗೆ ಬಂದ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಅಕ್ಕನೊಂದಿಗೆ ತೆಗೆಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡು ಭಾವುಕ ಸಂದೇಶ ಬರೆದುಕೊಂಡಿದ್ದನು.
`ಎಲ್ಲರನ್ನೂ ನೋಡಿಕೊಳ್ಳಿ ಅಕ್ಕ, ಅಮ್ಮ ಮತ್ತು ಅಪ್ಪನನ್ನು ಒಂಟಿಯಾಗಿ ಬಿಡಬೇಡ. ನಾನು ಹೊರಟಿದ್ದೇನೆ.ಮುಂದಿನ ಬಾರಿ ನಾನು ವಾಪಸ್ ಬಂದಾಗ ಎಲ್ಲರ ನೆಚ್ಚಿನವನಾಗುತ್ತೇನೆ. ಎಂದೂ ಮತ್ತೊಂದು ಸ್ಟೇಟಸ್ ಹಾಕಿದ್ದನು ಎನ್ನಲಾಗಿದೆ.
ಮನೆಗೆ ಧಾವಿಸಿದ ಸ್ನೇಹಿತರು
ಮನೆಯಲ್ಲಿ ಯಾರೂ ಇಲ್ಲದ ವೇಳೆ ರೋಹಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ನಡುವೆ, ಆತ ತನ್ನ ಸ್ನೇಹಿತನಿಗೆ ವೀಡಿಯೊ ಸಂದೇಶವೊಂದನ್ನು ಕಳುಹಿಸಿದ್ದು, ತಾನು ಆನ್‌ಲೈನ್ ಗೇಮಿಂಗ್‌ನಲ್ಲಿ ಹಣ ಕಳೆದುಕೊಂಡಿರುವುದಾಗಿ ತಿಳಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಸಂದೇಶ ಕಂಡು ಆತಂಕಗೊಂಡ ಸ್ನೇಹಿತ ಹಾಗೂ ಇತರರು ಆತನ ಮನೆಗೆ ಧಾವಿಸಿ ಬರುವಷ್ಟರಲ್ಲಿ ರೋಹಿತ್ ಪ್ರಾಣ ಕಳೆದುಕೊಂಡಿದ್ದನು ಎನ್ನಲಾಗಿದೆ.
ಕೂಡಲೇ ಮಾಹಿತಿ ತಿಳಿದ ಕುಟುಂಬಸ್ಥರು ಹಾಗೂ ಆತನ ಸ್ನೇಹಿತರು ಸರ್ಕಾರಿ ಆಸ್ಪತ್ರೆಗೆ
ದಾಖಲಿಸುವ ಮಾರ್ಗ ಮಧ್ಯದಲ್ಲೇ
ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ, (
ಏಜೆನ್ಸೀಸ್).