ಭಗವಂತ್ ಮಾನ್ ವಿರುದ್ಧ ‘ಹಗಲುಕುಡುಕ’ ಎಂದ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿದ ಆಮ್ ಆದ್ಮಿ ಪಾರ್ಟಿ. 
ದೇಶ

'ನಿಮ್ಮ ಮೇಲೂ ಡ್ರಗ್ಸ್ ಆರೋಪಗಳಿವೆ ಮರೆಯಬೇಡಿ!': ರಾಹುಲ್ 'ಕುಡುಕ' ಹೇಳಿಕೆಗೆ ಆಮ್​ ಆದ್ಮಿ ಖಡಕ್ ಕೌಂಟರ್! Rahul Gandhi

ಪಂಜಾಬ್: ಇನ್ನೇನು ಕೆಲ ತಿಂಗಳುಗಳ ನಂತರ ಪಂಜಾಬ್​ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಬಾರಿ ಬಿಜೆಪಿ, ಕಾಂಗ್ರೆಸ್​ ಹಾಗೂ ಆಮ್​ ಆದ್ಮಿ ಪಾರ್ಟಿ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮುಂಬರುವ ಚುನಾವಣೆಯನ್ನು ಗಮದಲ್ಲಿಟ್ಟುಕೊಂಡು ಕಾಂಗ್ರೆಸ್​ ಮುಖಂಡ ಹಾಗೂ ಲೋಕಸಭಾ ವಿರೋಧ ಪಕ್ಷಗಳ ನಾಯಕ ರಾಹುಲ್​ ಗಾಂಧಿ, ಪಂಜಾಬ್​ ಸಿಎಂ ಭಗವಂತ್​ ಮಾನ್​ ವಿರುದ್ಧ ನೀಡುರುವ ಹೇಳಿಕೆ ಈಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ಮಾನ್​ ಒಬ್ಬ ಹಗಲುಕುಡುಕ!

ಬುಧವಾರ (ಅ.4) ಸಂಗ್ರೂರ್​​ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, ಪಂಜಾಬ್​ ಮುಖ್ಯಮಂತ್ರಿಯನ್ನು ಸಂಸತ್ತಿನಲ್ಲಿ ಬೇಟಿಯಾದ ಸಂದರ್ಭವನ್ನು ನೆನಪಿಸಿಕೊಂಡು, ಒಂದು ಸಲ ಭಗವಂತ್​ ಮಾನ್​​ ಸಂಸತಿನಲ್ಲಿ ನನ್ನ ಜೊತೆ ಕುಳಿತಿದ್ದರು. ಅವರು ನಮ್ಮೊಂದಿಗೆ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಆಗ ಸಮಯ ಬೆಳಿಗ್ಗೆ 11 ಆಗಿತ್ತು. ಆದರೆ, ಅವರ ಬಾಯಿಂದ ಮದ್ಯದ ವಾಸನೆ ಬರುತ್ತಿತ್ತು ಎಂದು ಆರೋಪಿಸಿದ್ದಾರೆ. ಇಂತಹ ಹಗಲುಕುಡುಕರಿಂದ ರಾಜ್ಯದಲ್ಲಿರುವ ಮಾದಕವಸ್ತು ವ್ಯಸನವನ್ನು ತಡೆಯಲು ಸಾಧ್ಯವೆ ಎಂದು ರಾಹುಲ್​ ಗಾಂಧಿ ಮಾನ್​ ಅವರ ಬದ್ಧತೆಯನ್ನು ಪ್ರಶ್ನಿಸಿದ್ದರು.

ಹಾಗೆಂದು ಕುಡಿಯುವುದು ಅವರ ವೈಯಕ್ತಿಕ ವಿಚಾರ. ಆದರೆ ಹೀಗೆ ದಿನಾಲೂ ಕುಡಿದು ಬಂದು ರಾಜ್ಯವನ್ನು, ಅಲ್ಲಿನ ಸಮಸ್ಯೆಯನ್ನು, ಅದರಲ್ಲೂ ಪಂಜಾಬ್​ನಲ್ಲಿ ಕಾಡುತ್ತಿರುವ ಡ್ರಗ್ಸ್​ ಪಿಡುಗಿಗೆ ಅವರು ನಶೆಯಲ್ಲಿ ಸಮರ್ಪಕವಾಗಿ ಕೆಲಸ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಮೇಲೂ ಆರೋಪಗಳಿವೆ, ಮರೆಯಬೇಡಿ!

ತಮ್ಮ ಪಕ್ಷದ ಮುಖ್ಯಮಂತ್ರಿ ಭಗವಂತ್​ ಮಾನ್​ ಅವರ ಕುಡಿತದ ಬಗ್ಗೆ ಮಾತನಾಡಿರುವ ರಾಹುಲ್​ ಗಾಂಧಿ ವಿರುದ್ಧ ಆಮ್ ಆದ್ಮಿ ಪಕ್ಷ ಮುಗಿಬಿದ್ದಿದೆ. ಎಎಪಿಯ ದೆಹಲಿ ಘಟಕದ ಅಧ್ಯಕ್ಷ ಸೌರಭ್​ ಭಾರಧ್ವಾಜ್​, "ರಾಹುಲ್ ಗಾಂಧಿ ವಿರುದ್ಧವೂ ಮಾದಕ ದ್ರವ್ಯ ಸೇವನೆಯ ಆರೋಪಗಳನ್ನು ಮಾಡಲಾಗಿದೆ. ಆದರೆ ಆರೋಪ ಮಾಡುವುದರಿಂದ ಏನನ್ನೂ ಸಾಧಿಸಲಾಗುವುದಿಲ್ಲ. ರಾಹುಲ್ ಗಾಂಧಿ ಇಷ್ಟು ಕೆಳ ಮಟ್ಟದ ಹೇಳಿಕೆಗಳನ್ನು ನೀಡಬಾರದೆಂದು ತಿರುಗೇಟನ್ನ ನೀಡಿದ್ದಾರೆ.

ನೀವು ಆಮ್​ ಆದ್ಮಿ ಪಕ್ಷದ ಆಡಳಿವಿರುವ ರಾಜ್ಯದಲ್ಲಿ ಅಲ್ಲಿ ಮುಖ್ಯಮಂತ್ರಿಗಳ ವಿರುದ್ಧ ಇಂತಹ ಹೇಳಿಕೆ ನೀಡುತ್ತಿರಾ. ಆದರೆ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಅಥವಾ ಉತ್ತರಾಖಂಡ ರಾಜ್ಯದ ಪುಷ್ಕರ್​ ಸಿಂಗ್ ಧಾಮಿ ವಿರುದ್ಧ ಇದೇ ಮಾದರಿಯ ಹೇಳಿಕೆಯನ್ನು ನೀಡಲು ನಿಮಗೆ ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ, (ಏಜೆನ್ಸೀಸ್​).