ಬಾಬಾ ರಾಮ್​ದೇವ್​ಗೆ ಕಂಗನಾ ಕೌಂಟರ್​!  
ದೇಶ

ನನ್ನ ಯೌವನದ ಬಗ್ಗೆ ಹಗಲುಗನಸು ಕಾಣಬೇಡಿ: ನಿಮ್ಮಂತೆ ಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿಲ್ಲ; ಬಾಬಾ ರಾಮ್​ದೇವ್​ಗೆ ಕಂಗನಾ ಕೌಂಟರ್​! Kangana Ranaut on Baba Ramdev

ಪ್ರಮುಖ ಮುಖ್ಯಾಂಶಗಳು

  • ಕಂಗನಾ ಗಟರ್ ಜನರೇಷನ್​ ಹೇಳಿಕೆ ವಿವಾದ
  • ಕೊಳಕು ಮನಸ್ಥಿತಿಯವರ ಬಗ್ಗೆ ನಾನು ಮಾತನಾಡಲ್ಲ ಎಂದಿದ್ದ ಬಾಬಾ ರಾಮ್​ದೇವ್​
  • ಬಾಬಾ ರಾಮ್​ದೇವ್​ಗೆ ಕಂಗನಾ ಕೌಂಟರ್​!
ಮುಂಬೈ: ಬಿಜೆಪಿ ಸಂಸದೆ ಹಾಗೂ ಬಾಲಿವುಡ್​ ನಟಿ ಕಂಗನಾ ರಣಾವತ್​ ಮತ್ತು ಬಾಬಾ ರಾಮ್‌ದೇವ್ (Kangana Ranaut on Baba Ramdev) ನಡುವೆ ಈಗ ಹೊಸದೊಂದು ಮಾತಿನ ಸಮರ ಜೋರಾಗಿದೆ.

ಇತ್ತೀಚೆಗೆ ಬಾಬಾ ರಾಮ್‌ದೇವ್ ನೀಡಿದ ಹೇಳಿಕೆಗೆ ಕಂಗನಾ, ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ತಿರುಗೇಟು ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.

ಅಸಲಿಗೆ ಗಲಾಟೆ ಶುರುವಾಗಿದ್ದು ಎಲ್ಲಿಂದ?

ಸಂದರ್ಶನವೊಂದರಲ್ಲಿ ಯೋಗ ಗುರು ಬಾಬಾ ರಾಮ್‌ದೇವ್ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ಅವರ 'ಗಟರ್ ಜನರೇಷನ್' ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು. ದೇಶದ ಯುವಕರನ್ನು 'ಗಟರ್' ಎಂದು ಕರೆಯುವುದು ವಿಕೃತ ಮನಸ್ಸಿನ ಸಂಕೇತ ಎಂದು ಅವರು ಕಿಡಿಕಾರಿದ್ದರು.

ಅಷ್ಟೇ ಅಲ್ಲದೆ, ಅವರ ಬಾಲ್ಯ, ಯೌವನ ಮತ್ತು ಹಿಂದಿನ ಸಂಗತಿಗಳು ಹೇಗಿದ್ದವು? ಅಂತಹವರ ಬಗ್ಗೆ ನಾನು ಮಾತನಾಡಲು ಬಯಸುವುದಿಲ್ಲ ಎಂದು ಕಂಗನಾ ಅವರ ಹಿನ್ನೆಲೆಯನ್ನು ಪ್ರಶ್ನಿಸಿದ್ದರು. ರಾಮ್‌ದೇವ್ ಅವರ ಈ ಮಾತುಗಳು ಬಾಲಿವುಡ್ ಹಾಗೂ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿತ್ತು.


ಬಾಬಾ ರಾಮ್‌ದೇವ್‌ಗೆ ಕಂಗನಾ ವಾರ್ನಿಂಗ್!

ಬಾಬಾ ರಾಮ್‌ದೇವ್ ಅವರ ಈ ಟೀಕೆಗೆ ಕಂಗನಾ ತಮ್ಮದೇ ಶೈಲಿಯಲ್ಲಿ ಖಡಕ್ ಉತ್ತರ ನೀಡಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಬರೆದುಕೊಂಡಿರುವ ಕಂಗನಾ, ಬಾಬಾ ಜಿ, ನನ್ನ ಯೌವನ ಅಥವಾ ಮಲಗುವ ಕೋಣೆಯ ಬಗ್ಗೆ ಹಗಲುಗನಸು ಕಾಣಬೇಡಿ. ವದಂತಿಗಳು ಮತ್ತು ಗಾಸಿಪ್‌ಗಳ ಆಧಾರದ ಮೇಲೆ ಮಾತ್ರ ನೀವು ಊಹಿಸಬಲ್ಲಿರಿ ಎಂದು ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು ಬಾಬಾ ರಾಮ್‌ದೇವ್ ಅವರ ವೈದ್ಯಕೀಯ ವಿವಾದಗಳ ಬಗ್ಗೆಯೂ ಪ್ರಸ್ತಾಪಿಸಿರುವ ಅವರು, ಕನಿಷ್ಠ ನನಗೆ ಸುಪ್ರೀಂ ಕೋರ್ಟ್‌ನಿಂದ ತರಾಟೆ ಅಥವಾ ಬೈಗುಳ ಸಿಕ್ಕಿಲ್ಲ. ನನ್ನದು ಯಾವುದೇ ಗಾಸಿಪ್ ಅಥವಾ ಊಹಾಪೋಹವಲ್ಲ. ನಿಮ್ಮಂತೆ ವಂಚನೆ ಅಥವಾ ಸುಳ್ಳು ವೈದ್ಯಕೀಯ ಹಕ್ಕುಗಳನ್ನು ನಾನು ಮಂಡಿಸಿಲ್ಲ.
ಹೀಗಾಗಿ ನನಗೆ ಪಾತ್ರದ ಪಾಠಗಳನ್ನು ಹೇಳಿಕೊಡಲು ಬರಬೇಡಿ. ನನ್ನ ಪಾತ್ರ ನಿಮ್ಮಗಿಂತ ತುಂಬಾ ಉತ್ತಮವಾಗಿದೆ ಮತ್ತು ಇಲ್ಲಿ ಯಾವುದೇ ವಂಚನೆ ಪತ್ತೆಯಾಗಿಲ್ಲ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ, (ಏಜನ್ಸೀಸ್​).