- ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವುದು ನಿಜ
- ವೋಲ್ವೋ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ವಾಹನ EX30 ನಲ್ಲಿ ಗಂಭೀರ ಸಮಸ್ಯೆಯನ್ನು ಪತ್ತೆ ಹಚ್ಚಿದೆ
- ಈ ಹಿನ್ನಲೆ ಜಾಗತಿಕವಾಗಿ ಸುಮಾರು 40,323 ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ
- ವೋಲ್ವೋ EX30 ನಲ್ಲಿರುವ ಹೈ-ವೋಲ್ಟೇಜ್ ಬ್ಯಾಟರಿ ಪ್ಯಾಕ್ ಅತಿಯಾಗಿ ಬಿಸಿಯಾಗುವ ಸಾಧ್ಯತೆಯಿದೆ
Volvo Recall: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಪ್ರಪಂಚದಾದ್ಯಂತ ಜನಪ್ರಿಯತೆಯನ್ನು ಗಳಿಸುತ್ತಿರುವುದು ನಿಜ. ಆದರೆ, ವಾಹನಗಳಿಗೆ ಸಂಬಂಧಿಸಿದ ಸುರಕ್ಷತಾ ಕಾಳಜಿಗಳ ಬಗ್ಗೆ ಗಮನ ವಹಿಸಿದ ವೋಲ್ವೋ ಸಂಸ್ಥೆಯು ತನ್ನ ಎಲೆಕ್ಟ್ರಿಕ್ ವಾಹನ EX30 ನಲ್ಲಿ ಗಂಭೀರ ಸಮಸ್ಯೆಯನ್ನು ಪತ್ತೆ ಹಚ್ಚಿದ್ದು, ಜಾಗತಿಕವಾಗಿ ಸುಮಾರು 40,323 ಕಾರುಗಳನ್ನು ಹಿಂಪಡೆಯಲು ನಿರ್ಧರಿಸಿದೆ.
ವೋಲ್ವೋ EX30 ನಲ್ಲಿರುವ ಹೈ-ವೋಲ್ಟೇಜ್ ಬ್ಯಾಟರಿ ಪ್ಯಾಕ್ ಅತಿಯಾಗಿ ಬಿಸಿಯಾಗುವ ಸಾಧ್ಯತೆಯಿದ್ದು, ಇದು ವಾಹನಕ್ಕೆ ಬೆಂಕಿ ಹತ್ತಿಕೊಳ್ಳಲು ಕಾರಣವಾಗಬಹುದು ಎಂದು ಕಂಪನಿ ಅರಿತುಕೊಂಡಿದೆ. ಈ ಕಾರಣದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸುಮಾರು 40,323 ಯುನಿಟ್‌ಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಸುದ್ಧಿ ಮೂಲಗಳು ವರದಿ ಮಾಡಿವೆ.
ಕಂಪನಿಯು ಎಲ್ಲಾ ತೊಂದರೆಗೊಳಗಾದ ಮಾಲೀಕರನ್ನು ನೇರವಾಗಿ ಸಂಪರ್ಕಿಸಿ ಮುಂದಿನ ಹಂತಗಳ ಬಗ್ಗೆ ತಿಳಿಯುವುದಾಗಿ ಮಾಹಿತಿ ನೀಡಿದ್ದು, ದೋಷಪೂರಿತ ಬ್ಯಾಟರಿ ಮಾಡೆಲ್ಗಳನ್ನು ಉಚಿತವಾಗಿ ಬದಲಾಯಿಸಲಾಗುತ್ತದೆ. ಜೊತೆಗೆ ಗ್ರಾಹಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ ಆಗಿರುವುದರಿಂದ ಬ್ಯಾಟರಿ ಬದಲಾಯಿಸುವವರೆಗೂ ಗ್ರಾಹಕರು ಮುನ್ನಚ್ಚರಿಕೆ ವಹಿಸಬೇಕೆಂದು ಸೂಚನೆ ನೀಡಿದೆ.
ಕಂಪನಿ ಕೊಟ್ಟ ಸೂಚನೆಗಳೇನು?
1. ಗ್ರಾಹಕರು ತಮ್ಮ EX30 ಕಾರುಗಳನ್ನು ತೆರೆದ ಪ್ರದೇಶಗಳಲ್ಲಿ ನಿಲ್ಲಿಸಲು ಮತ್ತು ಅಪಾಯಗಳನ್ನು ತಪ್ಪಿಸಲು ಶೇ. 70 ಕ್ಕಿಂತ ಕಡಿಮೆ ಬ್ಯಾಟರಿ ಚಾರ್ಜ್ ಮಾಡಬಾರದು.
2. ಬ್ಯಾಟರಿಯನ್ನು ಅತಿಯಾಗಿ ಚಾರ್ಜ್ ಮಾಡುವುದರಿಂದ ಸೆಲ್‌ಗಳು ಹೆಚ್ಚು ಬಿಸಿಯಾಗಿ ಬೆಂಕಿಯ ಅಪಾಯವನ್ನು ಹೆಚ್ಚಿಸಬಹುದು.
3. ತೆರೆದ ಪ್ರದೇಶಗಳಲ್ಲಿ ಪಾರ್ಕಿಂಗ್ ಮಾಡುವುದರಿಂದ ತುರ್ತು ಸಂದರ್ಭಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
EX30 ನಲ್ಲಿ ಬಳಸಲಾದ ಬ್ಯಾಟರಿಗಳನ್ನು ವೋಲ್ವೋದ ಪೋಷಕ ಕಂಪನಿಯಾದ ಶಾಂಡೊಂಗ್ ಗೀಲಿ ಸನ್‌ವುಡ್ ಬ್ಯಾಟರಿಯನ್ನು ತಯಾರಿಸಿದೆ. ಹಾಗಾಗಿ ಬ್ಯಾಟರಿ ಸಮಸ್ಯೆಯನ್ನು ಸರಿಪಡಿಸಿ ಕೊಡುವುದಾಗಿ ಕಂಪನಿ ಭರವಸೆ ನೀಡಿದೆ.
ಅಮೇರಿಕಾದಲ್ಲೂ ಮರುಸ್ಥಾಪನೆ
ವೋಲ್ವೋ ಕಂಪನಿಯು ಅಮೆರಿಕದ ಪ್ರಮುಖ ಸುರಕ್ಷತಾ ಸಂಸ್ಥೆಯಾದ ರಾಷ್ಟ್ರೀಯ ಹೆದ್ದಾರಿ ಸಂಚಾರ ಸುರಕ್ಷತಾ ಆಡಳಿತ (NHTSA) ಕ್ಕೆ ಅಧಿಕೃತವಾಗಿ ಈ ರಿಕಾಲ್ ಬಗ್ಗೆ ವರದಿ ಸಲ್ಲಿಸಿದೆ. ಅಮೆರಿಕದಲ್ಲಿ ಕನಿಷ್ಠ 40 ಯುನಿಟ್‌ಗಳು ಆರಂಭಿಕ ಹಂತದಲ್ಲಿ ಬಾಧಿತವಾಗಿವೆ ಎಂದು ಗುರುತಿಸಲಾಗಿದೆ. 2025 ರ ಮೊದಲು ತಯಾರಾದ ಕೆಲವು ಮಾದರಿಗಳ ಹೈ-ವೋಲ್ಟೇಜ್ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆಯಿದ್ದು, ಇದು ಅತಿಯಾದ ಶಾಖಕ್ಕೆ ಕಾರಣವಾಗಬಹುದು ಎಂದು ಕಂಪನಿ ಒಪ್ಪಿಕೊಂಡಿದೆ.
ವರದಿಗಳ ಪ್ರಕಾರ, ಬ್ಯಾಟರಿ ಮಾಡ್ಯೂಲ್‌ಗಳನ್ನು ಬದಲಾಯಿಸಲು ವೋಲ್ವೋಗೆ ಸುಮಾರು 195 ಮಿಲಿಯನ್ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಆದಾಗ್ಯೂ, ಕಂಪನಿಯು ವರ್ಷಗಳಿಂದ ನಿರ್ಮಿಸಿರುವ ಸುರಕ್ಷಿತ ಕಾರು ತಯಾರಕ ಎಂಬ ಕಂಪನಿಯ ಖ್ಯಾತಿಗೆ ಹಾನಿ ಮಾಡುತ್ತದೆ. ಮರುಸ್ಥಾಪನೆ ಉಲ್ಲೇಖ ಸಂಖ್ಯೆ R10355, ಮತ್ತು ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ವೋಲ್ವೋ ಗ್ರಾಹಕ ಸೇವೆಯನ್ನು ಸಂಪರ್ಕಿಸಬಹುದು (ಏಜೆನ್ಸೀಸ್).