ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್​ 
ದೇಶ

ಇದು ಯುಕ್ರೇನ್ ಮೇಲಿನ​ ಯುದ್ಧ... ಮೋದಿ ಜತೆ ಟ್ರಂಪ್​ ಫೋನ್​ ಕಾಲ್​;​ ಸುಂಕ ಇಳಿಕೆಯ ಹಿಂದೆ ಇಷ್ಟೆಲ್ಲ? | Donald Trump

ಪ್ರಮುಖ ಮುಖ್ಯಾಂಶಗಳು

  • ಪ್ರಧಾನಿ ಮೋದಿ ಜತೆಗೆ ಫೋನ್​ ಕಾಲ್​ನಲ್ಲಿ ಮಾತನಾಡಿದ ಟ್ರಂಪ್​
  • ಭಾರತದ ಮೇಲಿನ ಆಮದು ಸುಂಕವನ್ನು ಇಳಿಸಿದ ಅಮೆರಿಕ
  • ಶೇ.25ರಿಂದ 18ಕ್ಕೆ ಇಳಿಸಿದ ಟ್ರಂಪ್​, ಮೋದಿ ಬಗ್ಗೆ ಗುಣಗಾನ
ನವದೆಹಲಿ: ನಿನ್ನೆ (ಫೆ.02) ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಿಢೀರ್ ದೂರವಾಣಿ ಕರೆ ಮಾಡಿ ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ (Donald Trump), ಭಾರತದ ಮೇಲಿನ ಆಮದು ಸುಂಕವನ್ನು ಶೇ.25ರಿಂದ 18ಕ್ಕೆ ಇಳಿಸುವುದಾಗಿ ಹೇಳಿದರು. ಇದು ಭಾರತಕ್ಕೆ ದೊಡ್ಡ ಮಟ್ಟದ ರಿಲೀಫ್​ ನೀಡಿದ್ದೇ ಆದರೂ ಇದರ ಬಗ್ಗೆ ಟ್ರಂಪ್​ ಆಡಿರುವ ಕೆಲವು ಮಾತುಗಳು ಕುತೂಹಲವನ್ನು ಕೆರಳಿಸಿದೆ.

ಶೇ.25ರಿಂದ 18ಕ್ಕೆ ಇಳಿಕೆ

ಪ್ರಧಾನಿ ಮೋದಿ ಅವರೊಂದಿಗೆ ಎರಡೂ ದೇಶಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತು ಚರ್ಚೆ ಮಾಡಿದ್ದಾಗಿ ಹೇಳಿರುವ ಟ್ರಂಪ್​, ರಷ್ಯಾದಿಂದ ತೈಲ ಖರೀದಿ ಮಾಡದಿರಲು ಭಾರತ ಒಪ್ಪಿದೆ ಎಂದರು. ಇದರೊಟ್ಟಿಗೆ ಭಾರತ ಮೇಲಿನ ಆಮದು ಸುಂಕವನ್ನು ನಾವು ಶೇ.25ರಿಂದ 18ಕ್ಕೆ ಇಳಿಸಿದ್ದಾಗಿ ಟ್ರಂಪ್​ ಘೋಷಿಸಿದರು. ಈ ಕುರಿತು ಸ್ವತಃ ಮೋದಿ ಕೂಡ ಪ್ರತಿಕ್ರಿಯಿಸಿ, ಟ್ರಂಪ್ ತಮ್ಮೊಂದಿಗೆ ಮಾತನಾಡಿದ್ದಾಗಿ ಸ್ಪಷ್ಟಪಡಿಸಿದರು.

ಮೋದಿ ನನ್ನ ಆತ್ಮೀಯ ಗೆಳೆಯರಲ್ಲಿ...

"ಪ್ರಧಾನಿ ಮೋದಿ ಅವರು ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಸ್ನೇಹ ಮತ್ತು ಗೌರವದಿಂದ ಅವರ ಕೋರಿಕೆಯ ಮೇರೆಗೆ, ತಕ್ಷಣವೇ ಜಾರಿಗೆ ಬರುವಂತೆ, ಆಮದು ಸುಂಕವನ್ನು ಇಳಿಸಿದ್ದೇವೆ. ಇದರೊಟ್ಟಿಗೆ ಭಾರತ ಮತ್ತು ಅಮೆರಿಕ ನಡುವಿನ ಟ್ರೇಡ್​ ಡೀಲ್​ಗೂ ಒಪ್ಪಿಕೊಂಡಿದ್ದೇವೆ. ದೂರವಾಣಿ ಕರೆಯಲ್ಲಿ, ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಭಾರತ ಸಮ್ಮತಿ ಸೂಚಿಸಿದೆ. ಇದರೊಟ್ಟಿಗೆ, ತೈಲ ಆಮದುಗಳನ್ನು ಅಮೆರಿಕ ಮತ್ತು ವೆನೆಜುವೆಲಾದಿಂದ ಪಡೆಯಲು ಮೋದಿ ಅಸ್ತು ಎಂದಿದ್ದಾರೆ ಎಂದು ಟ್ರಂಪ್ ತಮ್ಮ ಟ್ರೂತ್ ಸೋಷಿಯಲ್​ನಲ್ಲಿ ಬರೆದುಕೊಂಡಿದ್ದಾರೆ.

ಸುಂಕ ಇಳಿಕೆ ಹಿಂದೆ ಈ ಉದ್ದೇಶಗಳು?

ಪ್ರಧಾನಿ ಮೋದಿ ಅವರು ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಲು ಒಪ್ಪಿಕೊಂಡಿರುವುದು ಸ್ವಾಗತಾರ್ಹ. ಇದು ಯುಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಸಹಾಯ ಮಾಡುತ್ತದೆ. ವ್ಯಾಪಾರ, ರಷ್ಯಾ ಮತ್ತು ಯುಕ್ರೇನ್‌ ಯುದ್ಧ ಅಂತ್ಯಗೊಳಿಸುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ನಾವು ಮಾತನಾಡಿದ್ದೇವೆ. ರಷ್ಯಾ ಬದಲಿಗೆ ನಮ್ಮಿಂದ ಮತ್ತು ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸುವುಸುದಾಗಿ ಮೋದಿ ತಿಳಿಸಿದ್ದಾಗಿ ಟ್ರಂಪ್ ಹೇಳಿರುವುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).