Dominos Pizza ಆರ್ಡರ್ ಮಾಡಿದ ಕುಟುಂಬ (Instagram)
- ವಿಮಾನ ನಿಲ್ದಾಣಗಳಲ್ಲಿ ಒಂದು ಸಣ್ಣ ನೀರಿನ ಬಾಟಲಿ ತೆಗೆದುಕೊಳ್ಳಬೇಕಾದರು ನೂರು ಬಾರಿ ಯೋಚಿಸಬೇಕು
- ಪರಿಸ್ಥಿತಿ ಹೀಗಿದ್ದಾಗ ಮಧ್ಯಮ ವರ್ಗದವರು ಅಲ್ಲಿ ಊಟ ಮಾಡುವುದು ಕನಸಿನ ಮಾತೇ ಸರಿ
- ಕುಟುಂಬವೊಂದು ಏರ್‌ಪೋರ್ಟ್ ಹೋಟೆಲ್ನಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲಿಗೆ ಪಿಜ್ಜಾ ಆರ್ಡರ್ ಮಾಡಿದೆ
Dominos Pizza: ವಿಮಾನ ನಿಲ್ದಾಣಗಳಲ್ಲಿ ಒಂದು ಸಣ್ಣ ನೀರಿನ ಬಾಟಲಿ ತೆಗೆದುಕೊಳ್ಳಬೇಕಾದರು ನೂರು ಬಾರಿ ಯೋಚಿಸಬೇಕು, ಅಷ್ಟರ ಮಟ್ಟಿಗೆ ಬೆಲೆ ದುಬಾರಿಯಾಗಿರುತ್ತವೆ. ಪರಿಸ್ಥಿತಿ ಹೀಗಿದ್ದಾಗ ಮಧ್ಯಮ ವರ್ಗದವರು ಅಲ್ಲಿ ಊಟ ಮಾಡುವುದು ಕನಸಿನ ಮಾತೇ ಸರಿ.
ವಿಮಾನ ವಿಳಂಬವಾದ ಹಿನ್ನಲೆಯಲ್ಲಿ ಹಸಿವಿನಿಂದ ಕಂಗಾಲಾಗಿ ಅಮೆರಿಕ ಕುಟುಂಬವೊಂದು ಏರ್‌ಪೋರ್ಟ್ ರೆಸ್ಟೋರೆಂಟ್ಗಳಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲಿಗೆ ಡೊಮಿನೊಸ್ನಿಂದ ಪಿಜ್ಜಾ ಆರ್ಡರ್ ಮಾಡಿ, ಪಿಜ್ಜಾ ಬಾಕ್ಸ್‌ಗಳನ್ನು ಸ್ವೀಕರಿಸುತ್ತಿರುವ ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ "ಏರ್‌ಪೋರ್ಟ್ ಫುಡ್ ಹ್ಯಾಕ್, ಲೆಟ್ಸ್ ಗೋ!" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು.
ವಿಡಿಯೋದಲ್ಲೇನಿದೆ?
ವಿಮಾನ ನಿಲ್ದಾಣದಲ್ಲಿ ಅಮೆರಿಕ ಕುಟುಂಬವು ಡೊಮಿನೋಸ್ ಆರ್ಡರ್ನ್ನು ಸ್ವೀಕರಿಸುತ್ತಿರುವುದನ್ನು ಕಾಣಬಹುದಾಗಿದೆ. ಈ ವೇಳೆ ಅವರು ನಮ್ಮ ವಿಮಾನ ವಿಳಂಬವಾಯಿತು. ಹಾಗಾಗಿ ನಾವು ವಿಮಾನ ನಿಲ್ದಾಣದಲ್ಲಿ ಆಹಾರದ ಬೆಲೆಯನ್ನು ಪಾವತಿಸಲು ಬಯಸಲಿಲ್ಲ. ಬದಲಾಗಿ, ವಿಮಾನ ನಿಲ್ದಾಣಕ್ಕೆ ಡೋಮಿನೋಸ್ ಆರ್ಡರ್ ಮಾಡಿದೆವು ಎಂದು ಬರೆದು ಪೋಸ್ಟ್ ಮಾಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ, ಅನೇಕರು ಲೈಕ್ ಮತ್ತು ಕಾಮೆಂಟ್ ಮಾಡಿದ್ದಾರೆ. ಆದಾಗ್ಯೂ, ಡೊಮಿನೊಸ್ ಪಿಜ್ಜಾ ಕೂಡಾ ಈ ಪೋಸ್ಟ್ಗೆ just plane delicious ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದೆ.
ನೆಟ್ಟಿಗರ ಪ್ರತಿಕ್ರಿಯೆ!
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಅನೇಕ ಚರ್ಚೆಯನ್ನು ಹುಟ್ಟುಹಾಕಿತು, ಹೆಚ್ಚಿನ ಬಳಕೆದಾರರು ವಿಮಾನ ನಿಲ್ದಾಣದಂತಹ ಮುಚ್ಚಿದ ಅಥವಾ ಎಸಿ ಇರುವ ಜಾಗಗಳಲ್ಲಿ ಪಿಜ್ಜಾದಂತಹ ತೀವ್ರವಾದ ವಾಸನೆ ಬರುವ ಆಹಾರವನ್ನು ತಿನ್ನುವುದು ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡುತ್ತದೆ. ಇದು ಸಾರ್ವಜನಿಕ ನಡವಳಿಕೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.