ಮದ್ಯದ ಬಾಟಲಿ  
ದೇಶ

ಸೀಲ್​ ಆದ ಬಿಯರ್​ ಬಾಟಲಿಯೊಳಗೆ... ಕಣ್ಣಾರೆ ಕಂಡು ದಂಗಾದ ವ್ಯಕ್ತಿ! ವಿಡಿಯೋ ಹರಿಬಿಟ್ಟು ಕಿಡಿ | Beer Bottle

ಪ್ರಮುಖ ಮುಖ್ಯಾಂಶಗಳು

  • ಬಿಯರ್​ ಬಾಟಲಿ ಕೊಂಡೊಯ್ದ ವ್ಯಕ್ತಿಗೆ ಕಾದಿತ್ತು ಶಾಕ್​
  • ಬಾಟಲಿಯೊಳಗಿದ್ದ ಜೀವವನ್ನು ಕಂಡು ಅಂಗಡಿ ಮಾಲೀಕನಿಗೆ ಕ್ಲಾಸ್​
Beer Bottle: ಒಂದು ಕಿಕ್​ ಹತ್ತಿಸುವ ಎಣ್ಣೆಯ ಬಾಟಲಿ ಅಥವಾ ಪ್ಯಾಕೆಟ್​ ಕೊಂಡೊಯ್ದು, ನಾಲ್ಕೈದು ಸ್ನೇಹಿತರ ಜೊತೆ ಕುಡಿಯುತ್ತ ಕುಳಿತರೆ, ಆ ಮಜವೇ ಬೇರೆ ಎನ್ನುತ್ತಾರೆ ಮದ್ಯಪ್ರಿಯರು. ಇದು ಹಾಟ್​ ಡ್ರಿಂಕ್ಸ್ ಆಗಿರಲಿ ಅಥವಾ ಬಿಯರ್ ಇರಲಿ, ಒಟ್ಟಿನಲ್ಲಿ ಕುಡಿದಾಗ ಎಲ್ಲ ಕಷ್ಟಗಳು, ನೋವುಗಳು ಮರೆತು ಹೋಗಲಿ ಎನ್ನತ್ತಾ ಎರಡು ಗುಟುಕು ಕುಡಿಯುವ ಮಂದಿ, ಕೆಲವೊಮ್ಮೆ ಇಡೀ ಜಗತ್ತನೇ ಮರೆಯುವುದು ಬೇಸರ.
ಇದೇ ರೀತಿ ಇಲ್ಲೊಬ್ಬರು ವ್ಯಕ್ತಿ ಇವತ್ತು ಚಿಲ್​ ಆಗಿ ಬಿಯರ್ ಹೊಡೆದು ನೆಮ್ಮದಿಯಿಂದ ನಿದ್ರಿಸೋಣ ಎಂದು ಮದ್ಯದ ಅಂಗಡಿಯಿಂದ ತನ್ನಿಷ್ಟದ ಬ್ರ್ಯಾಂಡ್​ನ ಎಣ್ಣೆಯನ್ನು ಖರೀದಿ ಮಾಡಿದ್ದಾನೆ. ಮನೆಗೆ ಹೋಗಿ ಎಲ್ಲ ರೆಡಿ ಮಾಡಿಕೊಂಡು ಓಪನ್​ ಮಾಡಬೇಕು ಎನ್ನುವಷ್ಟರಲ್ಲಿ ಸೀಲ್​ ಆಗಿದ್ದ ಬಾಟಲಿಯೊಳಗೆ ಅದೇನೋ ಓಡಾಡಿದಂತೆ ಕಂಡಿದೆ. ತಕ್ಷಣವೇ ಮುಚ್ಚಳದ ಮೇಲಿದ್ದ ಕೈಯನ್ನು ಕೆಳಗಿಟ್ಟು ಒಮ್ಮೆ ಬಿಯರ್ ಬಾಟಲಿಯನ್ನು ಪೂರ್ತಿಯಾಗಿ ಕಣ್ಣಾಡಿಸಿದಾಗ ಅದರಲ್ಲಿ ಜೀವಂತ ಮೀನು ಹರಿದಾಡುತ್ತಿರುವುದು ಪತ್ತೆಯಾಗಿದೆ.
ಈ ಘಟನೆ ಹೈದ್ರಾಬಾದ್​ನ ಮಲ್ಲಾಪುರದಲ್ಲಿ ವರದಿಯಾಗಿದ್ದು, ಸೀಲ್ಡ್​ ಬಿಯರ್​ ಬಾಟಲಿಯಲ್ಲಿ ಜೀವಂತ ಮೀನು ಹೇಗೆ ಬಂದಿತು ಎಂಬ ಪ್ರಶ್ನೆ ಗ್ರಾಹಕ ಮತ್ತು ಪೊಲೀಸರಲ್ಲಿ ಕಾಡಿದೆ. ಈ ಬಗ್ಗೆ ನಾಚಾರಮ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮದ್ಯದಂಗಡಿಯ ಮಾಲೀಕನನ್ನು ಖಾಕಿ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಆತ, ಅದನ್ನು ತಯಾರಿಸಿದ್ದು ನಾನಲ್ಲ. ಕೇವಲ ಮಾರಾಟ ಮಾಡಿದ್ದೇನೆ ಅಷ್ಟೇ ಎಂದಿದ್ದಾನೆ. ಈ ದೃಶ್ಯವನ್ನು ಬಿಯರ್ ಖರೀದಿಸಿದ ವ್ಯಕ್ತಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಇತರರಿಗೆ ಎಚ್ಚರಿಸಿದ್ದಾನೆ,(ಏಜೆನ್ಸೀಸ್).