ಸಾಂದರ್ಭಿಕ ಚಿತ್ರ  
ದೇಶ

ಕೆಲಸ ಬದಲಿಸಿದ್ದೀರಾ? ನಿಮ್ಮ ಹೆಸರಿನಲ್ಲಿ ಎಷ್ಟು ಪಿಎಫ್​ ಅಕೌಂಟ್​ಗಳಿವೆ ಗೊತ್ತಿದ್ಯಾ? ಹೀಗೆ ಚೆಕ್​ ಮಾಡಿ | PF Account

ಪ್ರಮುಖ ಮುಖ್ಯಾಂಶಗಳು

  • ನಿಮ್ಮ ಹೆಸರಿನಲ್ಲಿ ಎಷ್ಟು ಪಿಎಫ್ ಖಾತೆಗಳಿವೆ?
  • ಪ್ರತಿ ಬಾರಿ ಉದ್ಯೋಗ ಬದಲಾಯಿಸಿದಾಗ ಹೊಸ ಪಿಎಫ್ ಖಾತೆಯ ಓಪನ್​ ಅಗತ್ಯವಿದೆ
  • ಎಲ್ಲ ಪಿಎಫ್ ಖಾತೆಗಳು ಯುಎಎನ್ ಖಾತೆಗೆ ಲಿಂಕ್ ಆಗಿರುತ್ತಾ?
  • ಇದನ್ನು ಚೆಕ್​ ಮಾಡೋದು ಹೇಗೆ ಎಂಬುದರ ಕಂಪ್ಲೀಟ್​ ಡಿಟೇಲ್ಸ್ ಇಲ್ಲಿದೆ ನೋಡಿ
PF Account: ಹೊಸದಾಗಿ ಇನ್ನೊಂದು ಉದ್ಯೋಗ ಸಿಕ್ಕಿತು ಎಂದು ಹಳೆಯ ಸಂಸ್ಥೆಗೆ ಗುಡ್​ಬೈ ಹೇಳುವ ಉದ್ಯೋಗಿಗಳು, ಪ್ರತಿ ಬಾರಿ ಉದ್ಯೋಗ ಬದಲಾಯಿಸಿದಾಗ ಹೊಸ ಕಂಪನಿಯಲ್ಲಿ ಮತ್ತೊಂದು ನೂತನ ಪಿಎಫ್ ಅಕೌಂಟ್​ ಅನ್ನು ತೆರೆಯಬೇಕು. ಹಾಗೆ ನೋಡಿದರೆ, ಇಷ್ಟು ವರ್ಷಗಳಲ್ಲಿ ನೀವು ಸೇವೆ ಸಲ್ಲಿಸಿದ ಸಂಸ್ಥೆಗಳ ಒಟ್ಟು ಪಿಎಫ್​ ಖಾತೆಗಳು ಎಷ್ಟಿವೆ? ಹಳೆಯ ಅಕೌಂಟ್​ಗಳಿಂದ ಹಣ ಡ್ರಾ ಮಾಡಿಕೊಳ್ಳದಿದ್ದರೆ ಏನು ಸಮಸ್ಯೆ? ಅದನ್ನು ಚೆಕ್​ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಉದ್ಯೋಗ ಬದಲಾಯಿಸುವಾಗ ನಿಮ್ಮ ಹಳೆಯ ಪಿಎಫ್ ಖಾತೆಯಲ್ಲಿ ಹಣವನ್ನು ತೆಗೆಯದೆ ಸುಮ್ಮನಾಗಬೇಡಿ. ನಿಮ್ಮ ಹಳೆಯ ಪಿಎಫ್ ಖಾತೆಯನ್ನು ಹೊಸದಕ್ಕೆ ವರ್ಗಾಯಿಸದಿದ್ದರೆ, ಭವಿಷ್ಯದಲ್ಲಿ ನೀವು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ನೀವು ಒಂದಕ್ಕಿಂತ ಹೆಚ್ಚು ಪಿಎಫ್ ಸದಸ್ಯರ ಐಡಿ ಅಥವಾ ಯುಎಎನ್ ಸಂಬಂಧಿತ ಖಾತೆಗಳನ್ನು ಹೊಂದಿದ್ದೀರಾ ಎಂಬುದನ್ನು ಮೊದಲು ಪರಿಶೀಲಿಸಿ. ಇಲ್ಲದಿದ್ದರೆ, ನಿವೃತ್ತಿಗಾಗಿ ಉಳಿಸಿದ ಹಣವನ್ನು ಹಿಂಪಡೆಯಲು ಕಷ್ಟವಾಗಬಹುದು.
ಒಬ್ಬ ಇಪಿಎಫ್ ಸದಸ್ಯನಿಗೆ 12 ಅಂಕಿಯ ಯುಎಎನ್ ಕೊಡಲಾಗುತ್ತದೆ. ಈ ಸಂಖ್ಯೆಯ ಮೂಲಕ, ವಿವಿಧ ಉದ್ಯೋಗಗಳಿಗೆ ಸಂಬಂಧಿಸಿದ ಪಿಎಫ್ ಸದಸ್ಯರ ಐಡಿಗಳನ್ನು ಒಂದೇ ಖಾತೆಗೆ ಲಿಂಕ್ ಮಾಡಬಹುದು. ಸಾಮಾನ್ಯವಾಗಿ, ಉದ್ಯೋಗಿ ಪ್ರತಿ ಬಾರಿ ಉದ್ಯೋಗ ಬದಲಾಯಿಸಿದಾಗ ಹೊಸದಾಗಿ ಯುಎಎನ್​ ಪಡೆಯುವ ಅಗತ್ಯವಿಲ್ಲ. ಪ್ರಸ್ತುತ UAN ಅನ್ನು ಹೊಸ ಸಂಸ್ಥೆಗೆ ಒದಗಿಸಿದರೆ, ಪಿಎಫ್​ ಸೇವಾ ದಾಖಲೆಯನ್ನು ಅದರಲ್ಲೇ ಮುಂದುವರಿಸಬಹುದು.

ಅಕೌಂಟ್​ಗಳ ಪತ್ತೆ ಹೇಗೆ?

  • ನಿಮ್ಮ ಪ್ರಸ್ತುತ ಸಂಸ್ಥೆಯಲ್ಲಿ ನೀವು ಒಂದೇ ಯುಎಎನ್​ಬಳಸುತ್ತಿದ್ದೀರಾ ಎಂಬುದನ್ನು ಚೆಕ್​ ಮಾಡಿಕೊಳ್ಳಿ
  • EPFO ಪೋರ್ಟಲ್‌ಗೆ ಲಾಗಿನ್ ಆಗಿ, ಯುಎಎನ್​ ಮತ್ತು ಪಾಸ್‌ವರ್ಡ್‌ನೊಂದಿಗೆ ಸದಸ್ಯ ಪೋರ್ಟಲ್‌ಗೆ ಸೈನ್ ಇನ್ ಮಾಡಿ
  • Service History ಎಂಬ ಆಯ್ಕೆ ಕ್ಲಿಕ್​ ಮಾಡಿ
  • ಹಿಂದಿನ ಮತ್ತು ಪ್ರಸ್ತುತ ಸಂಸ್ಥೆಗಳಿಗೆ ಪಿಎಫ್​ ಸದಸ್ಯರ ಐಡಿಗಳನ್ನು ಪರಿಶೀಲಿಸಿ
  • ಹಿಂದಿನ ಉದ್ಯೋಗಗಳಿಂದ ಪಿಎಫ್​ ಹಣವನ್ನು ವರ್ಗಾಯಿಸಿದ ಖಾತೆಗಳನ್ನು ಗುರುತಿಸಿ
  • ಆನ್‌ಲೈನ್ ಸೇವೆಗಳನ್ನು ಆಯ್ಕೆ ಮಾಡಿ, ಒಬ್ಬ ಸದಸ್ಯ - ಒಬ್ಬ ಇಪಿಎಫ್​ ಖಾತೆ (ಟ್ರಾನ್ಸ್​ಫರ್​ ವಿನಂತಿ)
  • ಅಗತ್ಯವಿರುವಂತೆ ಹಳೆಯ ಸದಸ್ಯ ಐಡಿ ಅಥವಾ ಯುಎಎನ್​ ಅನ್ನು ಎಂಟ್ರಿ ಮಾಡಿ
  • ಪ್ರಸ್ತುತ ಪಿಎಫ್​ ಖಾತೆಗೆ ವರ್ಗಾಯಿಸಬೇಕಾದ ಹಳೆಯ ಖಾತೆಯನ್ನು ಆಯ್ಕೆ ಮಾಡಿ
  • ನೋಂದಾಯಿತ ಮೊಬೈಲ್‌ನಲ್ಲಿ ಸ್ವೀಕರಿಸಿದ ಒಟಿಪಿ (OTP) ಅನ್ನು ಹಾಕಿ ಮತ್ತು ರಿಕ್ವೆಸ್ಟ್​ ಸಲ್ಲಿಸಿ
  • ಟ್ರ್ಯಾಕ್ ಕ್ಲೈಮ್ ಸ್ಟೇಟಸ್​ ಮೂಲಕ ವರ್ಗಾವಣೆ ಪ್ರಕ್ರಿಯೆಯನ್ನು ಪರಿಶೀಲಿಸಿ

ಪಿಎಫ್ ಹಣ ವರ್ಗಾಯಿಸಲು ಎಷ್ಟು ಸಮಯ ಬೇಕು?

ಪರಿಶೀಲನೆ ಮತ್ತು ಅನುಮೋದನೆ ಪ್ರಕ್ರಿಯೆಯನ್ನು ಅವಲಂಬಿಸಿ ಹಳೆಯ ಪಿಎಫ್ ಖಾತೆ ವರ್ಗಾವಣೆ ವಿನಂತಿಗೆ ಸಾಮಾನ್ಯವಾಗಿ 10ರಿಂದ 15 ಕೆಲಸದ ದಿನಗಳ ಅಗತ್ಯವಿದೆ. ಪದೇ ಪದೇ ಉದ್ಯೋಗಗಳನ್ನು ಬದಲಾಯಿಸುವವರು ಹಳೆಯ ಪಿಎಫ್ ಖಾತೆಗಳು ಮತ್ತು ಅವುಗಳಲ್ಲಿರುವ ಹಣವನ್ನು ತಮ್ಮ ಚಾಲ್ತಿಯಿರುವ ಖಾತೆಗೆ ಸರಿಯಾಗಿ ಲಿಂಕ್ ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ಕಾಲಕಾಲಕ್ಕೆ ತಮ್ಮ ಸೇವಾ ಇತಿಹಾಸವನ್ನು ಪರಿಶೀಲಿಸುವುದು ಒಳಿತು. ಇದು ಭವಿಷ್ಯದಲ್ಲಿ ಪಿಎಫ್ ಉಳಿತಾಯವನ್ನು ಇನ್ನಷ್ಟು ಸುಲಭಗೊಳಿಸುತ್ತದೆ,(ಏಜೆನ್ಸೀಸ್).