Omar Abdullah | ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ 
ದೇಶ

ಕೇಂದ್ರ ಸರ್ಕಾರದ ಬಗ್ಗೆ ನನಗೆ ಯಾವ ದೂರುಗಳು ಇಲ್ಲ: ಸಿಎಂ ಒಮರ್​ ಅಬ್ದುಲ್ಲಾ | Omar Abdullah

Omar Abdullah: ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿದ ಭಾರೀ ಪ್ರಮಾಣದ ಅನುದಾನಕ್ಕೆ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಪ್ರಶಂಸೆ ವ್ಯಕ್ತಪಡಿಸಿದ್ದು, ಯಾರನ್ನೋ ಮೆಚ್ಚಿಸುವ ಸಲುವಾಗಿ ಹೊಗಳುತ್ತಿಲ್ಲ ಮತ್ತು ಈ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ ಎಂದಿದ್ದಾರೆ.
ಕೇಂದ್ರ ಸರ್ಕಾರದ ಔದಾರ್ಯ ತೋರಿಸಿದರು, ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸುವಲ್ಲಿ ವಿಫಲವಾಗಿದೆ ಎಂದು ಸಿಎಂ ಅಬ್ದುಲ್ಲಾ ವಿಷಾದ ವ್ಯಕ್ತಪಡಿಸಿದರು.
ನಾನು ರಾಜಕೀಯ ಮಾಡುವ ಮತ್ತು ಜನರನ್ನು ಮೋಸ ಮಾಡುವ ವ್ಯಕ್ತಿಯಲ್ಲ, ಕೇಂದ್ರ ಸರ್ಕಾರ ಎಲ್ಲೆಲ್ಲಿ ಒಳ್ಳೆಯದನ್ನು ಮಾಡುತ್ತಿದೆಯೋ ಅದನೆಲ್ಲಾ ನಾನು ಒಪ್ಪಿಕೊಳ್ಳುತ್ತೇನೆ ಮತ್ತು ತಪ್ಪುಗಳಾದಾಗ ಎತ್ತಿ ತೋರಿಸುತ್ತೇನೆ, ರಾಜ್ಯ ಸ್ಥಾನಮಾನದ ಪುನಃಸ್ಥಾಪನೆಯನ್ನು ಹೊರತುಪಡಿಸಿ ಕೇಂದ್ರ ಸರ್ಕಾರದ ವಿರುದ್ಧ ತಮಗೆ ಯಾವುದೇ ರೀತಿಯ ಅಸಮದಾನ ಇಲ್ಲ ಎಂದು ಹೇಳಿದರು. ರಾಜ್ಯತ್ವದ ಬಗ್ಗೆ ಕೇಂದ್ರವು ನಮಗೆ ದೂರುಗಳನ್ನು ಹೊರತುಪಡಿಸಿ, ಇತರ ಯಾವ ವಿಷಯಗಳ ಬಗ್ಗೆ ದೂರು ನೀಡಲು ಕೇಂದ್ರ ಸರ್ಕಾರ ಅವಕಾಶವನ್ನು ನೀಡಿಲ್ಲ ಎಂದರು. ಕೇಂದ್ರ ಸರ್ಕಾರ ನೀಡಿದ ಅನುದಾನದ ಬಗ್ಗೆ ಇತ್ತಿಚೆಗೆ ಸಿಎಂ ಅಬ್ದುಲ್ಲಾ ಹೊಗಳಿದ್ದನ್ನು ಪ್ರತಿಪಕ್ಷಗಳು ಟೀಕಿಸಿದ್ದವು.
ನಾನು ದೆಹಲಿಯಲ್ಲಿ ಒಂದು ಮಾತನ್ನು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಮಾತನ್ನು ಹೇಳುವುದಿಲ್ಲ, ಕೇಂದ್ರ ಸರ್ಕಾರ ನೀಡುವ ಉದಾರ ನಿಧಿಗಾಗಿ ನಾನು ಯಾವಾಗಲೂ ಅವರನ್ನು ಹೊಗಳಿದ್ದೇನೆ ಮತ್ತು ನ್ಯೂನ್ಯತೆಗಳಿದ್ದಾಗ ವಿರೋಧ ವ್ಯಕ್ತಪಡಿಸಿದ್ದೇನೆ, ಸಾರ್ವಜನಿಕ ಸಭೆಗಳಲ್ಲಿ, ವಿಧಾನಸಭೆಯ ಮಹಡಿಯಲ್ಲಿ. ವಿಧಾನಸಭೆಯಲ್ಲಿ ನನ್ನ ಭಾಷಣಗಳನ್ನು ಪರಿಶೀಲಿಸಿ ಎಂದು ಅಬ್ದುಲ್ಲಾ ಹೇಳಿದರು(ಏಜೆನ್ಸೀಸ್​).