ತೃತಿಯ ರಂಗ ರಚನೆಗೆ ಸ್ಟಾಲಿನ್ ಮಾಸ್ಟರ್ ಪ್ಲ್ಯಾನ್...?  
ದೇಶ

ಎಸ್‌ಐಆರ್ ವಿರುದ್ಧದ ಪತಿಭಟನೆ ಬೆನ್ನಲ್ಲೇ ಡಿಎಂಕೆ ಹೈವೋಲ್ಟೇಜ್ ಸಭೆ: ತೃತಿಯ ರಂಗ ರಚನೆಗೆ ಸ್ಟಾಲಿನ್ ಮಾಸ್ಟರ್ ಪ್ಲಾನ್...? | DMK Holds Key Meet

ಚೆನ್ನೈ: ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ದೇಶದಲ್ಲಿ ಭುಗಿಲೆದ್ದಿರುವ ತೀವ್ರ ವಿರೋಧ ಹಾಗೂ ಆಕ್ರೋಶದ ಅಲೆಗಳ ನಡುವೆ, ಇಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ಸಂಸದರ ಸಭೆಯನ್ನು (DMK Holds Key Meet) ಕರೆದಿದೆ.

ಚೆನ್ನೈ: ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ದೇಶದಲ್ಲಿ ಭುಗಿಲೆದ್ದಿರುವ ತೀವ್ರ ವಿರೋಧ ಹಾಗೂ ಆಕ್ರೋಶದ ಅಲೆಗಳ ನಡುವೆ, ಇಂದು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ತನ್ನ ಸಂಸದರ ಸಭೆಯನ್ನು (DMK Holds Key Meet) ಕರೆದಿದೆ. ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಪ್ರಮುಖವಾಗಿ ಎಸ್‌ಐಆರ್ ವಿವಾದ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತು ಗಂಭೀರ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ಕೆಲವು ದಿನಗಳಿಂದ ಪ್ರತಿಭಟನಾಕಾರರ ಮೇಲೆ ನಡೆಯುತ್ತಿರುವ ಪೊಲೀಸ್ ಕ್ರಮವನ್ನು ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದು, ನಿನ್ನೆ ತಿರಂಗಾ ಯಾತ್ರ ಮುನ್ನ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಬಂಧನ ವಿರೋಧಿಸುತ್ತಾ ಕೇಂದ್ರ ಸರ್ಕಾರದ ವಾಗ್ದಾಳಿ ನಡೆಸಿದ್ದ ಡಿಎಂಕೆ ಮುಖ್ಯಸ್ಥ, ಇಂತಹ ಪೊಲೀಸ್ ದಬ್ಬಾಳಿಕೆಗಳು ತಂತ್ರಗಳು ಪ್ರತಿಭಟನೆಯನ್ನು ದುರ್ಬಲಗೊಳಿಸುವುದಿಲ್ಲ, ಬದಲಿಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತವೆ ಎಂದು ಎಚ್ಚರಿಕೆ ನೀಡಿದ್ದರು.

ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸ್ಟಾಲಿನ್​, ಅಭಿಜಿತ್ ದೀಪ್ಕೆ ಮತ್ತು ನೇಹಾ ಬೋರಾ ಎಲ್ಲಿದ್ದಾರೆ..? ಅವರ ಬಗ್ಗೆ ಮಾಹಿತಿ ನೀಡದೆ ವಶಕ್ಕೆ ಪಡೆದಿರುವುದು ಸಂಪೂರ್ಣ ಕಾನೂನುಬಾಹಿರ ಮತ್ತು ಅಮಾನವೀಯ. ಕೇಂದ್ರ ಸರ್ಕಾರ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಶಾಂತಿಯುತ ಪ್ರತಿಭಟನೆಗಳನ್ನು ಹತ್ತಿಕ್ಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ #GyaneshKumarMustGo ಹ್ಯಾಷ್‌ಟ್ಯಾಗ್ ಬಳಸಿದ ಅವರು, ಕೇಂದ್ರ ಸರ್ಕಾರಕ್ಕೆ ಇದನ್ನು ಬಿಟ್ಟು ಬೇರೆ ಯಾವುದೇ ಅವಕಾಶವಿಲ್ಲ ಎಂದೂ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಯುಪಿ ಗದ್ದುಗೆಗೆ ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಸಾರಥ್ಯ...? ನ್ಯೂಸ್18 ಮೆಗಾ ಸಮೀಕ್ಷೆಯಲ್ಲಿ ಅಚ್ಚರಿಯ ಮಾಹಿತಿ ಬಹಿರಂಗ! | News18 Mega Survey

ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಜೆಪಿ ನಾಯಕರಾದ ಅಶುತೋಷ್ ರಂಕಾ ಹಾಗೂ ಸೌರವ್ ದಾಸ್ ಅವರ ಬಂಧನವನ್ನೂ ಸ್ಟಾಲಿನ್ ಮುಂಚೆಯೇ ಖಂಡಿಸಿದ್ದರು. ಈ ಸರ್ಕಾರ ಎಷ್ಟು ಪ್ರತಿಭಟನಾಕಾರರನ್ನು ಬಂಧಿಸಬಹುದು? ಬಿಜೆಪಿ ಎಷ್ಟು ಯುವ ಧ್ವನಿಗಳನ್ನು ಅಡಗಿಸಲು ಸಾಧ್ಯ..? ಎಂದು ಪ್ರಶ್ನಿಸಿದ್ದ ಅವರು, ಸಿಜೆಪಿಯವರ ಈ ಹೋರಾಟಕ್ಕೆ ಡಿಎಂಕೆ ಸಂಪೂರ್ಣ ಕಾನೂನು ನೆರವು ನೀಡುವುದಾಗಿ ಭರವಸೆ ನೀಡಿದ್ದರು.

ತೃತಿಯ ರಂಗ ರಚನೆಗೆ ತೆರೆಮರೆಯ ಕಸರತ್ತು

ಕಳೆದ ಕೆಲವು ದಿನಗಳಿಂದ ಡಿಎಂಕೆ ಪಕ್ಷವು ತೃತಿಯ ರಂಗವನ್ನು (Third Front) ರಚಿಸುವ ಕುರಿತು ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದ್ದು, ಇದಕ್ಕಾಗಿ ಸಿಜೆಪಿ ಹಾಗೂ ಕೆಲವು ಪ್ರಾದೇಶಿಕ ನಾಯಕರೊಂದಿಗೆ ಸಂಪರ್ಕ ಸಾಧಿಸುತ್ತಿದೆ ಎಂದು ಎನ್‌ಡಿಟಿವಿ ಮೂಲಗಳು ತಿಳಿಸಿವೆ. ತಮಿಳುನಾಡಿನಲ್ಲಿ ಕಾಂಗ್ರೆಸ್ ಜೊತೆಗಿನ ಮೈತ್ರಿ ಕಡಿದುಕೊಂಡ ನಂತರ, ಡಿಎಂಕೆ ಇಂಡಿಯಾ ಮೈತ್ರಿಕೂಟದಿಂದ ದೂರವೇ ಉಳಿದುಕೊಂಡಿದೆ. ಈಗ ಎಸ್‌ಐಆರ್ ವಿರುದ್ಧದ ಹೋರಾಟದಲ್ಲಿ ಹೊಸ ರಂಗವನ್ನು ತೆರೆಯಲು ಮುಂದಾಗಿದೆ.

ಮುಂದಿನ ದಿನಗಳಲ್ಲಿ ಸ್ಟಾಲಿನ್ ಅವರು ಅಭಿಜಿತ್ ದೀಪ್ಕೆಯನ್ನು ಭೇಟಿಯಾಗುವ ಸಾಧ್ಯತೆಯಿದ್ದು, ಇದು ತೃತಿಯ ರಂಗದ ಕುರಿತ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಡಿಎಂಕೆ ಈ ಪ್ರಾದೇಶಿಕ ಪಕ್ಷಗಳನ್ನು ಒಂದೆಡೆ ಸೇರಿಸುವಲ್ಲಿ ಯಶಸ್ವಿಯಾದರೆ, ಇದು ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕು ಮೂಡಿಸುವುದಲ್ಲದೆ, ಮುಂಬರುವ ಚುನಾವಣೆಗಳಿಗೂ ಮುನ್ನ ವಿರೋಧ ಪಕ್ಷಗಳ ಸಮೀಕರಣವನ್ನು ಸಂಪೂರ್ಣವಾಗಿ ಬದಲಾಯಿಸಬಹುದು.

ಮತ್ತೊಂದೆಡೆ, ಎಸ್‌ಐಆರ್ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ವಿರುದ್ಧವೂ ಡಿಎಂಕೆ ವಾಗ್ದಾಳಿ ನಡೆಸುತ್ತಿದೆ. ಆದರೆ ಟಿವಿಕೆ ಮಾತ್ರ ತಮಿಳುನಾಡಿನಲ್ಲಿ ಎಸ್‌ಐಆರ್‌ಗೆ ಡಿಎಂಕೆಯೇ ಮೂಲ ಕಾರಣ ಎಂದು ಆರೋಪಿಸಿ, ಸ್ಟಾಲಿನ್​ರನ್ನು ಮುಖ್ಯ ಅಪರಾಧಿ ಎಂದು ಜರೆದಿದೆ.

ಈ ರಾಜಕೀಯ ಬೆಳವಣಿಗೆಗಳ ನಡುವೆಯೇ, ಕೇಂದ್ರ ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಚಿಂತನೆ ನಡೆಸಿದೆ ಎಂಬ ಸುದ್ದಿಗಳು ಹರಡಿದ್ದು, ಈ ಹಿಂದೆ ವಿಫಲಗೊಂಡಿದ್ದ ಕ್ಷೇತ್ರ ಪುನರ್ವಿಂಗಡನೆ ಹಾಗೂ ಮಹಿಳಾ ಮೀಸಲಾತಿ ಮಸೂದೆಗಳನ್ನು ಜಾರಿಗೆ ತರಲು ಸರ್ಕಾರ ಬಯಸಿದೆ ಎನ್ನಲಾಗಿದೆ. ಡಿಎಂಕೆ ಕ್ಷೇತ್ರ ಪುನರ್ವಿಂಗಡನೆಯ ತೀವ್ರ ವಿರೋಧಿಗಳಲ್ಲಿ ಒಂದಾಗಿದ್ದರೂ ಸಹ, ಕಾಂಗ್ರೆಸ್ ಜತೆಗಿನ ಬಿರುಕಿನ ಬಳಿಕ 22 ಸಂಸತ್ ಸದಸ್ಯರನ್ನು ಹೊಂದಿರುವ ಡಿಎಂಕೆ ಜತೆಗೆ ಬಿಜೆಪಿ ನಾಯಕರು ಮಾತುಕತೆ ಆರಂಭಿಸಿದ್ದಾರೆ ಎಂದು ಎನ್‌ಡಿಟಿವಿ ಮೂಲಗಳು ತಿಳಿಸಿವೆ. ಶೇಕಡಾ 50ರಷ್ಟು ಸೀಟುಗಳ ಹೆಚ್ಚಳದ ಭರವಸೆಯೊಂದಿಗೆ ಡಿಎಂಕೆಯ ಬೆಂಬಲವನ್ನು ಪಡೆದುಕೊಳ್ಳಲು ಸರ್ಕಾರ ನಿರೀಕ್ಷಿಸುತ್ತಿದೆ(ಏಜೆನ್ಸೀಸ್​).