Disha Patani 
ದೇಶ

ದಿಶಾ ಪಟಾನಿ ಮತ್ತು ಗಾಯಕ ತಲ್ವಿಂದರ್ ಡೇಟಿಂಗ್? ಕೈ ಕೈ ಹಿಡಿದು ಓಡಾಡುತ್ತಿರುವ ವಿಡಿಯೋ ವೈರಲ್..Disha Patani

ಮುಂಬೈ: ಬಾಲಿವುಡ್ ನಟಿ ದಿಶಾ ಪಟಾನಿ ( Disha Patani) ಮತ್ತು ಪಂಜಾಬಿ ಗಾಯಕ ತಲ್ವಿಂದರ್ ಇತ್ತೀಚೆಗೆ ಮುಂಬೈನಲ್ಲಿ ನಡೆದ 'ಲೋಲಾಪಲೂಜಾ ಇಂಡಿಯಾ 2026' (Lollapalooza India 2026) ಸಂಗೀತ ಉತ್ಸವದಲ್ಲಿ ಈ ಜೋಡಿ ಪರಸ್ಪರ ಕೈ ಕೈ ಹಿಡಿದು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮದಿಂದ ಹೊರಬರುವಾಗ ದಿಶಾ ಮತ್ತು ತಲ್ವಿಂದರ್ ಕೈ ಹಿಡಿದು ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಇಬ್ಬರೂ ಡೇಟಿಂಗ್ ಮಾಡುತ್ತಿರುವುದು ಈಗ ಪಕ್ಕಾ ಆಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಗಾಯಕ ತಲ್ವಿಂದರ್ ಸಾಮಾನ್ಯವಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಮಾಸ್ಕ್ ಅಥವಾ ಪೇಂಟ್ ಧರಿಸಿ ತಮ್ಮ ಮುಖವನ್ನು ಮರೆಮಾಚುತ್ತಿದ್ದರು. ಆದರೆ ಇತ್ತೀಚಿನ ವಿಡಿಯೋಗಳಲ್ಲಿ ಅವರು ಯಾವುದೇ ಮುಖವಾಡವಿಲ್ಲದೆ ದಿಶಾ ಜೊತೆ ನಗುನಗುತ್ತಾ ಕಾಣಿಸಿಕೊಂಡಿದ್ದಾರೆ.
ಈ ಹಿಂದೆ ಉದಯಪುರದಲ್ಲಿ ನಡೆದ ನೂಪುರ್ ಸನೋನ್ ಮತ್ತು ಸ್ಟೆಬಿನ್ ಬೆನ್ ಅವರ ಮದುವೆಯಲ್ಲೂ ಈ ಜೋಡಿ ಆಪ್ತವಾಗಿ ಕಾಣಿಸಿಕೊಂಡಿತ್ತು. ಅಂದಿನಿಂದಲೇ ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಶುರುವಾಗಿತ್ತು. ನಟ ಟೈಗರ್ ಶ್ರಾಫ್ ಜೊತೆಗಿನ ಬ್ರೇಕಪ್ ನಂತರ ದಿಶಾ ಪಟಾನಿ ಅವರ ಹೆಸರು ಕೇಳಿಬರುತ್ತಿರುವುದು ಇದೇ ಮೊದಲು.
ದಿಶಾ ಅಥವಾ ತಲ್ವಿಂದರ್ ಈ ವದಂತಿಗಳಿಗೆ ಪ್ರತಿಕ್ರಿಯಿಸದಿದ್ದರೂ, ಅವು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕುತ್ತಿವೆ.