ಮಗಳು ದುವಾ ಜೊತೆ ದೀಪಿಕಾ-ರಣವೀರ್ ಕ್ಯೂಟ್ ಮ್ಯಾಟರ್ನಿಟಿ ಫೋಟೋಶೂಟ್
Deepika Padukone Pregnancy: ಬಾಲಿವುಡ್ ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ತಮ್ಮ ಎರಡನೇ ಪ್ರೆಗ್ನೆನ್ಸಿ ಖುಷಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಬಾರಿ ಮಗಳು ದುವಾ ಕೂಡ ಮ್ಯಾಟರ್ನಿಟಿ ಫೋಟೋಶೂಟ್‌ನಲ್ಲಿ ಕಾಣಿಸಿಕೊಂಡಿದ್ದು, ಫ್ಯಾಮಿಲಿ ಫೋಟೋಗಳು ಸಖತ್ ಗಮನ ಸೆಳೆಯುತ್ತಿವೆ.
ದಂಪತಿ ಇನ್‌ಸ್ಟಾಗ್ರಾಂನಲ್ಲಿ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಅವರ ಬೇಬಿ ಬಂಪ್ ಜೊತೆಗೆ ರಣವೀರ್ ಹಾಗೂ ಮಗಳು ದುವಾ ಜೊತೆಗಿನ ಕ್ಯೂಟ್ ಮತ್ತು ಇಂಟಿಮೇಟ್ ಕ್ಷಣಗಳು ಫೋಟೋಗಳಲ್ಲಿ ಸೆರೆಯಾಗಿವೆ.
ಒಂದು ಫೋಟೋದಲ್ಲಿ ದುವಾ ತನ್ನ ಅಮ್ಮ-ಅಪ್ಪನ ಮಧ್ಯೆ ನಗುತ್ತಾ ಕುಳಿತಿರುವುದು ಕಾಣಿಸಿದೆ. ಕ್ರೀಮ್ ಕಲರ್‌ನ ರಫಲ್ ಕಾಲರ್ ಟಾಪ್ ಹಾಗೂ ಮ್ಯಾಚಿಂಗ್ ಪ್ಯಾಂಟ್‌ನಲ್ಲಿ ದುವಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಇನ್ನು ರಣವೀರ್ ಓಪನ್ ಕಾಲರ್ ಶರ್ಟ್ ಹಾಗೂ ಬ್ಲೇಝರ್‌ನಲ್ಲಿ ಕಾಣಿಸಿಕೊಂಡರೆ, ದೀಪಿಕಾ ಲೇಸ್ ಎನ್ಸೆಂಬಲ್‌ನಲ್ಲಿ ಎಲಿಗಂಟ್ ಆಗಿ ಮಿಂಚಿದ್ದಾರೆ. ಮೂವರೂ ಒಟ್ಟಿಗೆ ನಗುತ್ತಿರುವ ಕ್ಷಣ ಅಭಿಮಾನಿಗಳ ಗಮನ ಸೆಳೆದಿದೆ.
ನಮ್ಮ ಹೃದಯಗಳು ಇನ್ನಷ್ಟು ದೊಡ್ಡದಾಗ್ತಿವೆ
ಫೋಟೋಗಳನ್ನು ಹಂಚಿಕೊಂಡಿರುವ ದೀಪಿಕಾ ಹಾಗೂ ರಣವೀರ್, ‘ಬೇಬಿ ದುವಾ ಮತ್ತು ನಮ್ಮ ಹೃದಯಗಳು ದೊಡ್ಡದಾಗುತ್ತಿವೆ. ನಿಮ್ಮ ಆಶೀರ್ವಾದಕ್ಕೆ ಧನ್ಯವಾದಗಳು’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಪೋಸ್ಟ್ ಶೇರ್ ಆದ ಕೆಲವೇ ಹೊತ್ತಿನಲ್ಲಿ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರಿಂದ ಭರ್ಜರಿ ಪ್ರೀತಿ ವ್ಯಕ್ತವಾಗಿದೆ.
ದುವಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ
ಈ ಫೋಟೋಶೂಟ್‌ನ ಮತ್ತೊಂದು ವಿಶೇಷತೆ ಅಂದ್ರೆ, ದಂಪತಿ ತಮ್ಮ ಮಗಳು ದುವಾಳನ್ನು ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳಲು ಬಿಡದೆ ಖಾಸಗಿಯಾಗಿಯೇ ಬೆಳೆಸುತ್ತಿದ್ದಾರೆ. ಆದರೆ ದುವಾ ಅವರ ಎರಡನೇ ಹುಟ್ಟುಹಬ್ಬದಂದು ಆಕೆಯನ್ನು ಅಧಿಕೃತವಾಗಿ ಅಭಿಮಾನಿಗಳಿಗೆ ಪರಿಚಯಿಸಿದ್ದರು.
ದೀಪಿಕಾ-ರಣವೀರ್ ಕುಟುಂಬಕ್ಕೆ ಮತ್ತೊಂದು ಜೀವ
ದೀಪಿಕಾ ಹಾಗೂ ರಣವೀರ್ ಏಪ್ರಿಲ್‌ನಲ್ಲಿ ತಮ್ಮ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಹಂಚಿಕೊಂಡಿದ್ದರು. ಮಗಳು ದುವಾ ಕೈಯಲ್ಲಿ ಪಾಸಿಟಿವ್ ಪ್ರೆಗ್ನೆನ್ಸಿ ಟೆಸ್ಟ್ ಇರುವ ಕ್ಯೂಟ್ ಫೋಟೋ ಮೂಲಕ ಈ ಗುಡ್‌ನ್ಯೂಸ್ ನೀಡಿದ್ದರು.
2024ರ ಸೆಪ್ಟೆಂಬರ್‌ನಲ್ಲಿ ದಂಪತಿಗೆ ಮಗಳು ದುವಾ ಜನಿಸಿದ್ದರು. ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ-ರಣವೀರ್ ಕುಟುಂಬದ ಹೊಸ ಮ್ಯಾಟರ್ನಿಟಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.(ಏಜೆನ್ಸೀಸ್)