Diljit Dosanjh 
ದೇಶ

ಕೆನಡಾದ ಲೈವ್​ ಕಾನ್ಸರ್ಟ್​ನಲ್ಲಿ ಖಲಿಸ್ತಾನಿಗಳ ಪ್ರತಿಭಟನೆ; ಹಾಡು ಅರ್ಧಕ್ಕೆ ನಿಲ್ಲಿಸಿ, ಹೋರಾಟಗಾರರಿಗೆ Diljit Dosanjh ಹೇಳಿದ್ದಿಷ್ಟು!

ಪ್ರಮುಖ ಮುಖ್ಯಾಂಶಗಳು

  • ಜಿಮ್ಮಿ ಫಾಲನ್ ಶೋನಲ್ಲಿ ಭಾಗವಹಿಸಿದ್ದರ ಬಗ್ಗೆ ಗಾಯಕ ಸ್ಪಷ್ಟನೆ ಕೊಟ್ಟಿದ್ದು ಹೀಗೆ
  • ಕೆನಡಾ ಲೈವ್ ಕಾನ್ಸರ್ಟ್‌ನಲ್ಲಿ ಪ್ರತಿಭಟನಾಕಾರರಿಗೆ ತಿರುಗೇಟು ನೀಡಿದ ದಿಲ್ಜಿತ್ ದೋಸಾಂಜ್
  • ಐತಿಹಾಸಿಕ ಕೊಮಗಾಟ ಮಾರು ಘಟನೆಯ ಬಗ್ಗೆ ಕೆನಡಾ ವೇದಿಕೆಯಲ್ಲಿ ಮಾತು.
ಕ್ಯಾಲ್ಗರಿ (ಕೆನಡಾ): ಪಂಜಾಬಿ ಗಾಯಕ ಮತ್ತು ನಟ ದಿಲ್ಜಿತ್ ದೋಸಾಂಜ್ (Diljit Dosanjh ) ಇತ್ತೀಚೆಗೆ ಕೆನಾಡದ ಕ್ಯಾಲ್ಗರಿಯಲ್ಲಿ ನಡೆದ ಸಂಗೀತ ಕಾನ್ಸರ್ಟ್​ ವೇಳೆ ಖಲಿಸ್ತಾನಿಗಳು ನಡೆಸಿದ ಪ್ರತಿಭಟನೆಯನ್ನು ದಿಟ್ಟವಾಗಿ ಎದುರಿಸಿದ ವಿಡಿಯೋ ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಪಂಜಾಬ್​ ಬಗ್ಗೆ ಮಾತನಾಡಲು ಅವಕಾಶ ಸಿಗುವ ಪ್ರತಿ ವೇದಿಕೆಯನ್ನು ಬಳಕೆ ಮಾಡಿಕೊಂಡಿದ್ದೇನೆ ಎಂದು ತಮ್ಮ ಹಾಡನ್ನು ಹಾಡುವುದು ನಿಲ್ಲಿಸಿ, ಹೇಳುವ ಮೂಲಕ ಸೋಷಿಯಲ್​ ಮೀಡಿಯಾದಲ್ಲಿ ಹಲವರ ಮನವನ್ನು ಗೆದ್ದಿದ್ದಾರೆ.
ಖಲಿಸ್ತಾನಿ ಪರ ಪ್ರತಿಭಟನಾಕಾರರು ಅವರ ಶೋನಲ್ಲಿ ಹಳದಿ ಬಣ್ಣದ ದೋಸಂಜ್​ ದ್ವಜಗಳನ್ನು ತೋರಿಸುತ್ತಾ ನಿಂತಿರುವುದು ಕಾಣಿಸುತ್ತದೆ. ಕೆಲವು ಪ್ರತ್ಯೇಕತಾವಾದಿ ಪ್ರತಿಭಟನಾಕಾರರು ಧ್ವಜಗಳನ್ನು ಪ್ರದರ್ಶಿಸುವ ಮೂಲಕ ಅಡ್ಡಿಪಡಿಸಲು ಯತ್ನಿಸಿದರು.

ದಿಲ್ಜಿತ್​ ಹೇಳಿದ್ದಿಷ್ಟು

ಕಾರ್ಯಕ್ರಮದಲ್ಲಿ ಹಾಡೋದನ್ನು ಅರ್ಧಕ್ಕೆ ನಿಲ್ಲಿಸಿದ ದಿಲ್ಜಿತ್, "ನೀವು ಎಷ್ಟು ಬೇಕಾದರೂ ಧ್ವಜಗಳನ್ನು ಪ್ರದರ್ಶಿಸಿ, ಅದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಜಿಮ್ಮಿ ಫಾಲನ್ ಅಂತಹ ದೊಡ್ಡ ವೇದಿಕೆಗೆ ನಾನು ಹೋಗಿದ್ದು ನನ್ನ ವೈಯಕ್ತಿಕ ಪ್ರಚಾರಕ್ಕಾಗಿ ಅಲ್ಲ, ಬದಲಾಗಿ ಪಂಜಾಬ್‌ನ ಹಿರಿಮೆಯನ್ನು ಜಗತ್ತಿಗೆ ಸಾರಲು," ಎಂದು ಉತ್ತರಿಸಿದರು.
"ನಾನು ಯಾವುದೇ ಅಂತರಾಷ್ಟ್ರೀಯ ವೇದಿಕೆಗೆ ಹೋದರೂ ಪಂಜಾಬ್ ಬಗ್ಗೆಯೇ ಮಾತನಾಡುಅಲ್ಲಿ ನಾನು ನನ್ನ ಹಾಡುಗಳ ಪ್ರಚಾರ ಮಾಡಲಿಲ್ಲ, ಪಂಜಾಬ್ ಪರವಾಗಿ ಧ್ವನಿ ಎತ್ತಿದೆ. ಪಂಜಾಬ್ ಪ್ರವಾಹ ಪೀಡಿತವಾಗಿದ್ದಾಗ ನಾನು ಮತ್ತು ನನ್ನ ತಂಡ ಸಕ್ರಿಯವಾಗಿ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದೆವು" ಎಂದು ದಿಲ್ಜಿತ್ ಸ್ಪಷ್ಟಪಡಿಸಿದರು.

ಏನಿದು ಕೊಮಗಾಟ ಮಾರು ದುರಂತ

ಇದೇ ವೇಳೆ 1914ರ ಐತಿಹಾಸಿಕ 'ಕೊಮಗಾಟ ಮಾರು' ಘಟನೆಯನ್ನು ನೆನಪಿಸಿಕೊಂಡ ಗಾಯಕ, "ಒಂದು ಕಾಲದಲ್ಲಿ ಭಾರತೀಯ ವಲಸಿಗರಿಗೆ ಕೆನಡಾ ಪ್ರವೇಶ ನಿರಾಕರಿಸಲಾಗಿತ್ತು. ಆದರೆ ಇಂದು ಅದೇ ಮಣ್ಣಿನಲ್ಲಿ 50,000ಕ್ಕೂ ಹೆಚ್ಚು ಜನರು ಭಾರತೀಯ ಸಂಗೀತವನ್ನು ಆಚರಿಸಲು ಸೇರಿದ್ದಾರೆ. ಇದು ಪಂಜಾಬ್ ಬೆಳೆದು ಬಂದ ಹಾದಿ" ಎಂದು ಭಾವುಕರಾಗಿ ನುಡಿದರು, (ಏಜೆನ್ಸೀಸ್​).