DIG Yathish Chandra 
ದೇಶ

ಕನ್ನಡದಲ್ಲೇ ಕೊಟ್ಟಿಯೂರುಗೆ ಬನ್ನಿ ಎಂದು ಕರ್ನಾಟಕ ಜನರಿಗೆ ಮನವಿ ಮಾಡಿದ DIG Yathish Chandra; ಯಾರಿವರು?

ಪ್ರಮುಖ ಮುಖ್ಯಾಂಶಗಳು

  • ಕೊಟ್ಟಿಯೂರು ದೇವಸ್ಥಾನಕ್ಕೆ ಕನ್ನಡಿಗರು ಬರಬೇಕು ಎಂದ ಡಿಐಜಿ ಯತೀಶ್​ ಚಂದ್ರ
  • ಕೇರಳದಲ್ಲಿದ್ದರೂ ಕನ್ನಡ ಮರೆತಿಲ್ಲ ಎಂದು ಕೊಂಡಾಡಿದ ನೆಟ್ಟಿಗರು
  • ದೌರ್ಜನ್ಯ ಆರೋಪದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಯತೀಶ್​ ಚಂದ್ರ
DIG Yathish Chandra: ಕೇರಳದ ಕಣ್ಣೂರು ಜಿಲ್ಲೆ ಬಳಿ ಇರುವ ಕೊಟ್ಟಿಯೂರು ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವೈಶಾಖ ಮಹೋತ್ಸವ ಸಮಾರಂಭ ನಡೆಯಿತು ಈ ವೇಳೆ ಅಲ್ಲಿ ನಡೆದ ಗಲಾಟೆಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು.  ಇದನ್ನು ಉಲ್ಲೇಖಿಸಿ ಅಲ್ಲಿನ ಡಿಐಜಿ ಯತೀಶ್​ ಚಂದ್ರ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದಾರೆ.
ಕನ್ನಡಿಗರಿಗಾಗಿ ಯತೀಶ್​ ಚಂದ್ರ ಅವರು ಕನ್ನಡದಲ್ಲೇ ಮಾತನಾಡಿ, ನಾವು ನಿಮ್ಮ ಜೊತೆ ಇದ್ದೇವೆ. ನೀವು ಕಣ್ಣೂರಿಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಇಲ್ಲಿನ ಪ್ರವಾಸಿ ಸ್ಥಳಗಳನ್ನು ಸ್ವಚ್ಛವಾಗಿಡಬೇಕು. ಇಲ್ಲಿನ ಆಡಳಿತ ಮಂಡಳಿ ನಿಮಗಾಗಿ ಸಂಪೂರ್ಣ ಸುರಕ್ಷತಾ ವ್ಯವಸ್ಥೆ ಮಾಡಿದೆ ಎಂದು ಪೋಸ್ಟ್​ನಲ್ಲಿ ಮಾತನಾಡಿದ್ದಾರೆ. 

ಏನಾಗಿತ್ತು?

ವೈಶಾಖ ಮಹೋತ್ಸವಕ್ಕೆ ತೆರಳಿದ್ದ ಕರ್ನಾಟಕದ ಜನರ ಮೇಲೆ ಇಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ದೌರ್ಜನ್ಯ ಮಾಡಿದೆ ಎಂದು ಆರೋಪಿಸಿ ಸೋಶಿಯಲ್​ ಮೀಡಿಯಾದಲ್ಲಿ ವಿಡಿಯೋಗಳು ಹರಿದಾಡಿತ್ತು. ಶಿವನ ದರ್ಶನಕ್ಕೆ ಗಂಟೆ ಗಟ್ಟಲೇ ಕಾಯಬೇಕು. ವಿಐಪಿ ಸಂಸ್ಕೃತಿ, ಹಣ ಕೊಟ್ಟರು ದೇವರ ದರ್ಶನ ಮಾಡಲಾಗುತ್ತಿಲ್ಲ. ಮಲಯಾಳಂ ಬಾರದ ಕನ್ನಡಿಗರನ್ನು ಗುರಿಯಾಗಿಸಿಕೊಂಡು  ಅವಹೇಳನಕಾರಿ ಪದಗಳಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಈಗ ಈ ಬಗ್ಗೆ ಡಿಐಜಿ ಯತೀಶ್​ ಚಂದ್ರ  ಮಾತನಾಡಿದ್ದಾರೆ.

ಯತೀಶ್​ ಚಂದ್ರ ಹೇಳಿದ್ದೇನು?

ಕನ್ನಡಿಗರೆಲ್ಲರು ಕಣ್ಣೂರು ಜಿಲ್ಲೆ ಬಳಿ ಇರುವ ಕೊಟ್ಟಿಯೂರು ದೇವಸ್ಥಾನಕ್ಕೆ ಬರಬೇಕು ಇಲ್ಲಿನ ಆಡಳಿತ ಮಂಡಳಿ ಸರಿಯಾದ ವ್ಯವಸ್ಥೆಯನ್ನು ಮಾಡಿದೆ. ಪಾರ್ಕಿಂಗ್​ ವ್ಯವಸ್ಥೆ ತುಂಬಾ ಚೆನ್ನಾಗಿದೆ. ವರ್ಷ ಕಳೆದಂತೆ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದೇವೆ. ಇಂತಹ ಪ್ರಶಸ್ತ ಸ್ಥಳಕ್ಕೆ ನೀವು ಭೇಟಿ ಕೊಡಬೇಕು. ನಿಮಗಾಗಿ ಕನ್ನಡದಲ್ಲೇ ಅನೌನ್ಸ್​ಮೆಂಟ್ ಮಾಡ್ತಿದ್ದೇವೆ. ಬೋರ್ಡ್​ ಸಹ ಕನ್ನಡದಲ್ಲೇ ಇದೆ. ಆದರೆ, ನೀವು ಬಂದಾಗ ನಿಮ್ಮ ಬಟ್ಟೆ, ಚಪ್ಪಲಿ, ಕವರ್​ ಸೇರಿದಂತೆ ಯಾವುದೇ ವಸ್ತುವನ್ನು ಇಲ್ಲಿ ಹಾಕಬೇಡಿ. ಇಲ್ಲಿ ಸ್ವಚ್ಛತೆ ಮುಖ್ಯ ಎಂದು ಹೇಳಿದ್ದಾರೆ.
📄 Embedded Content

ಯತೀಶ್​ ಚಂದ್ರ ಯಾರು?

ದಾವಣಗೆರೆ ಮೂಲದವರಾದ ಯತೀಶ್​ ಚಂದ್ರ ಅವರು ಎಂಜಿನಿಯರಿಂಗ್ ವಿದ್ಯಾರ್ಥಿ.  ಮೋಟೋರಾಲದಲ್ಲಿ ಕೆಲಸ ಮಾಡುತ್ತಿದ್ದ ಇವರು ಐಪಿಎಸ್​ ಪಾಸ್​ ಮಾಡಿದ್ದರು. ಶಬರಿ ಮಲೆ ವಿವಾದ, ಒಪ್ರತಿಭಟನೆ ನಿರ್ವಹಣೆ ವಿಚಾರಕ್ಕೆ ಇವರು ಪ್ರಖ್ಯಾತಿ ಪಡೆದಿದ್ದಾರೆ. 2021 ವೈಯಕ್ತಿಕ ಕಾರಣದಿಂದಾಗಿ ಇವರು ಕೇರಳದಿಂದ ಕರ್ನಾಟಕಕ್ಕೆ ವರ್ಗಾವಣೆಯಾಗಿದ್ದರು. ಕೆಲಕಾಲ ಇಲ್ಲಿ ಸೇವೆ ಸಲ್ಲಿಸಿ ಪುನಃ ಕೇರಳಕ್ಕೆ ತೆರಳಿದ್ದರು. 

ನೆಟ್ಟಿಗರು ಏನಂದ್ರು?

ಮಹತ್ವವಾದ ವಿಚಾರವನ್ನು ಎಲ್ಲ ಭಾಷೆಯಲ್ಲಿ ಹೇಳಿ. ಕನ್ನಡದಲ್ಲಿ ಮಾತನಾಡಿರುವುದು ಅದ್ಭುತ ಎಂದು ಸಂಧ್ಯಾ ಎನ್ನುವವರು ಕಾಮೆಂಟ್ ಮಾಡಿದ್ದಾರೆ.  ಇನ್ನು ಕೆಲವರು ಕನ್ನಡಿಗರೇ ದಯವಿಟ್ಟು ಗಮನಿಸಿ ಎಂದು ಸಲಹೆ ಕೊಟ್ಟಿದ್ದಾರೆ.  ಹಾಗೇ ಆ ಜನರಿಗೂ ಹೇಳಿ ಹೆಂಗಸರಿಗೆ ಸಮಸ್ಯೆ ಮಾಡೋದು ಇಲ್ಲಿನ ಜನರಿಗೆ ಅವಮಾನ ಮಾಡೋದು ಬಿಡಿ ಅಂತ ಎಂದು ಕೇಳಿಕೊಂಡಿದ್ದಾರೆ.
ರಾಜೇಶ್​ ಎನ್ನುವವರು ಕಾಮೆಂಟ್​ ಮಾಡಿ, ಕನ್ನಡಿಗರು ಮಾತ್ರವಲ್ಲ ಕೊಟ್ಟಿಯೂರು ಮತ್ತು ಶಬರಿಮಲೆಯಲ್ಲಿ ದರ್ಶನ ಪಡೆಯುವ ಪ್ರತಿಯೊಬ್ಬರು ಉಡುಪುಗಳು ಇತ್ಯಾದಿಗಳನ್ನು ದೇವಾಲಯದಲ್ಲಿ ಬಿಡುತ್ತೇವೆ. ಈ ವಾಡಿಕೆ ಹೇಗೆ ಶುರುವಾಯ್ತೋ ಗೊತ್ತಿಲ್ಲ. ಆದರೆ ಶಬರಿಮಲೆ ಅಥವಾ ಕೊಟ್ಟಿಯೂರಿನಲ್ಲಿ ಅಂತಹ ಪದ್ಧತಿ ಇಲ್ಲ, ಅಲ್ಲೆ ಬಿಡುವ ಬಟ್ಟೆಯಿಂದಾಗಿ ದೇವಾಲಯದ ಆವರಣ ಕೊಳಕಾಗುತ್ತಿದೆ ಎಂದಿದ್ದಾರೆ.