ಬಂಗಾಳದಲ್ಲಿ ದೀದಿ ಕೋಟೆ ಧ್ವಂಸ: ಮಮತಾ ವಿರುದ್ಧ ತಿರುಗಿಬಿದ್ದ 20 ಪ್ರಭಾವಿ ಸಂಸದರಾದ ಶತ್ರುಘ್ನ, ಯೂಸುಫ್ ಪಠಾಣ್, ಸಯಾನಿ ಸೇರಿ ಇತರರ ಲಿಸ್ಟ್ ಔಟ್!
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಸೃಷ್ಟಿಯಾಗಿರುವ ಮಹಾ ಬಿಕ್ಕಟ್ಟು ಈಗ ತುತ್ತತುದಿಗೆ ತಲುಪಿದೆ. ಮಾಜಿ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ನಾಯಕತ್ವಕ್ಕೆ ಸೆಡ್ಡು ಹೊಡೆದು, ದೆಹಲಿಯಲ್ಲಿ ಲೋಕಸಭಾ ಸ್ಪೀಕರ್‌ಗೆ ಪತ್ರ ಬರೆದಿರುವ ಒಟ್ಟು 20 ಬಂಡಾಯ ಸಂಸದರ(TMC Rebel List) ರಹಸ್ಯ ಪಟ್ಟಿ ಕೊನೆಗೂ ಬಹಿರಂಗವಾಗಿದೆ. ಈ ಪಟ್ಟಿಯಲ್ಲಿ ಬಾಲಿವುಡ್ ಶತ್ರುಘ್ನ ಸಿನ್ಹಾ, ಕ್ರಿಕೆಟಿಗ ಯೂಸುಫ್ ಪಠಾಣ್ ಹಾಗೂ ಚಿತ್ರನಟಿ ಸಯಾನಿ ಘೋಷ್ ಅವರಂತಹ ದೈತ್ಯ ತಾರೆಯರ ಹೆಸರುಗಳಿರುವುದು ಇಡೀ ದೇಶದ ರಾಜಕಾರಣ ಬೆಚ್ಚಿಬೀಳುವಂತೆ ಮಾಡಿದೆ.
ಕಾಕೋಲಿ ಘೋಷ್ ದಸ್ತಿದಾರ್ ನೇತೃತ್ವದ ಈ ಬಂಡಾಯ ಪಡೆ ತಮಗೆ 20ಕ್ಕೂ ಹೆಚ್ಚು ಸಂಸದರ ಬೆಂಬಲವಿದೆ ಎಂದು ಹೇಳಿಕೊಂಡ ಬೆನ್ನಲ್ಲೇ ಈ 20 ಜನರ ಹೆಸರುಗಳು ಸಾರ್ವಜನಿಕವಾಗಿ ಹೊರಬಂದಿದ್ದು, ದೀದಿ ಕೋಟೆಯ ಅಡಿಪಾಯವೇ ಕಡುಗಿದೆ.
ಬಂಡಾಯವೆದ್ದ ಆ 20 ಸಂಸದರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ
ಮಮತಾ ವಿರುದ್ಧ ತಿರುಗಿಬಿದ್ದು ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಬೆಂಬಲ ನೀಡಲು ಸಜ್ಜಾಗಿರುವ 20 ತೃಣಮೂಲ ಕಾಂಗ್ರೆಸ್ ಲೋಕಸಭಾ ಸಂಸದರ ಅಧಿಕೃತ ವಿವರ ಇಲ್ಲಿದೆ.
1. ಕಾಕೋಲಿ ಘೋಷ್ ದಸ್ತಿದಾರ್ (ಬಾರಾಸತ್)
2. ಸಯಾನಿ ಘೋಷ್ (ಜಾದವ್‌ಪುರ)
3. ಯೂಸುಫ್ ಪಠಾಣ್ (ಬಹರಾಂಪುರ್)
4. ಶತ್ರುಘ್ನ ಸಿನ್ಹಾ (ಅಸನ್ಸೋಲ್)
5. ಜಗದೀಶ್ ಚಂದ್ರ ಬರ್ಮಾ ಬಸುನಿಯಾ (ಕೂಚ್ ಬೆಹಾರ್)
6. ಖಲೀಲರ್ ರೆಹಮಾನ್ (ಜಂಗೀಪುರ)
7. ಅಬು ತಾಹೇರ್ ಖಾನ್ (ಮುರ್ಷಿದಾಬಾದ್)
8. ಪಾರ್ಥ ಭೌಮಿಕ್ (ಬ್ಯಾರಕ್‌ಪುರ)
9. ಬಾಪಿ ಹಾಲ್ದಾರ್ (ಮಥುರಾಪುರ)
10. ಮಾಲಾ ರಾಯ್ (ಕೋಲ್ಕತ್ತಾ ದಕ್ಷಿಣ)
11. ರಚನಾ ಬ್ಯಾನರ್ಜಿ (ಹೂಗ್ಲಿ)
12. ಶತಬ್ದಿ ರಾಯ್ (ಬೀರ್‌ಭೂಮ್)
13. ಅಸಿತ್ ಕುಮಾರ್ ಮಾಲ್ (ಬೋಲ್‌ಪುರ)
14. ಡಾ. ಶರ್ಮಿಳಾ ಸರ್ಕಾರ್ (ಬರ್ದಮಾನ್ ಪೂರ್ವ)
15. ಅರೂಪ್ ಚಕ್ರವರ್ತಿ (ಬಾಕುರಾ)
16. ಜೂನ್ ಮಾಲಿಯಾ (ಮೇದಿನಿಪುರ)
17. ಕಾಲಿಪದ ಸೊರೆನ್ (ಝರ್ಗ್ರಾಮ್)
18. ದೀಪಕ್ ಅಧಿಕಾರಿ [ದೇವ್] (ಘಟಾಲ್)
19. ಮಿಟಾಲಿ ಬ್ಯಾಗ್ (ಆರಾಂಬಾಗ್)
20. ಪ್ರಸೂನ್ ಬ್ಯಾನರ್ಜಿ (ಹೌರಾ)
(ಗಮನಿಸಿ: ಬಂಡಾಯಗಾರರ ಒಟ್ಟು ಸಂಖ್ಯಾಬಲ 20ರ ಆಸುಪಾಸಿನಲ್ಲಿದ್ದು, ಸದ್ಯ 20 ಪ್ರಮುಖ ನಾಯಕರ ಹೆಸರುಗಳು ದೃಢಪಟ್ಟಿವೆ).
ಧೈರ್ಯವಿದ್ದರೆ ರಾಜೀನಾಮೆ ಕೊಡಿ": ಬಂಡಾಯಗಾರರ ವಿರುದ್ಧ ಟಿಎಂಸಿ ಕೆಂಗಣ್ಣು!
ಈ ಪಟ್ಟಿ ಹೊರಬರುತ್ತಿದ್ದಂತೆ ತೃಣಮೂಲ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕಲ್ಯಾಣ್ ಬ್ಯಾನರ್ಜಿ ಮತ್ತು ಕೀರ್ತಿ ಆಜಾದ್ ಅವರು ಬಂಡಾಯ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಂಡಾಯಗಾರರಿಗೆ ಯಾವುದೇ ರಾಜಕೀಯ ನೈತಿಕತೆ ಇಲ್ಲ. ಪಕ್ಷ ಮತ್ತು ಕಾರ್ಯಕರ್ತರು ಸಂಕಷ್ಟದಲ್ಲಿರುವಾಗ ಬೆನ್ನಿಗೆ ಚೂರಿ ಹಾಕಿ ಓಡಿಹೋಗುತ್ತಿದ್ದಾರೆ. ನಿಮಗೆ ಅಷ್ಟೊಂದು ತಾಕತ್ತಿದ್ದರೆ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿ. ನಮ್ಮ ಮಾಜಿ ಸಂಸದ ಸುಖೇಂದು ಶೇಖರ್ ರಾಯ್ ಅವರಂತೆ ನೈತಿಕತೆ ಪ್ರದರ್ಶಿಸಿ ಹೊರನಡೆಯಿರಿ ಎಂದು ಕಲ್ಯಾಣ್ ಬ್ಯಾನರ್ಜಿ ಸವಾಲು ಹಾಕಿದ್ದಾರೆ.
ಅಲ್ಲದೆ, ಈ ಬಂಡಾಯ ನಾಯಕರು ಬಿಜೆಪಿಯ ಸುವೇಂದು ಅಧಿಕಾರಿ ಅವರೊಂದಿಗೆ ಸೇರಿ ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರನ್ನು ರಹಸ್ಯವಾಗಿ ಭೇಟಿಯಾಗಿದ್ದಾರೆ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ. "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಯೂಸುಫ್ ಪಠಾಣ್ ಅವರನ್ನು ನೇರವಾಗಿ ಸಂಪರ್ಕಿಸಿದ್ದಾರೆ. ಈ ಸಂಸದರು ಮಮತಾ ಬ್ಯಾನರ್ಜಿ ಅವರನ್ನು ಬಿಟ್ಟು ನರೇಂದ್ರ ಮೋದಿಯವರನ್ನು ತಮ್ಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಇವರೆಲ್ಲರೂ ತಮ್ಮ ಕ್ಷೇತ್ರಗಳಿಗೆ ವಾಪಸ್ ಹೋಗಿ ಕಾರ್ಯಕರ್ತರನ್ನು ಎದುರಿಸಲಿ ನೋಡೋಣ ಎಂದು ಕಲ್ಯಾಣ್ ಬ್ಯಾನರ್ಜಿ ಆಕ್ರೋಶ ಹೊರಹಾಕಿದ್ದಾರೆ. ಕೀರ್ತಿ ಆಜಾದ್ ಕೂಡ ಇದು ಪಕ್ಷಕ್ಕೆ ಮಾಡಿದ ದ್ರೋಹ ಎಂದಿದ್ದಾರೆ. ಆದರೆ, ಯಾರೇ ಹೋದರೂ ಮಮತಾ ಬ್ಯಾನರ್ಜಿ ಮತ್ತು ಲಕ್ಷಾಂತರ ಕಾರ್ಯಕರ್ತರು ಒಟ್ಟಿಗೇ ಇರಲಿದ್ದು, ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ಟಿಎಂಸಿ ಸಾರಿದೆ,(ಏಜೆನ್ಸೀಸ್).