SIRಗಿಂತ ಮೊದಲೇ ಬಿಜೆಪಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಚ್ಚರಿಕೆ
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆಸುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪಟ್ಟಿಯು(SIR) ನಿಜವಾದ ಮತದಾರರನ್ನು ತೆಗೆದುಹಾಕುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನೆಡೆಸಿದ್ದಾರೆ.
ಈ ಬಗ್ಗೆ SIR ವಿರುದ್ಧದ ಱಲಿಯಲ್ಲಿ ಮಾತನಾಡಿದ ಮಮತಾ, ನೆರೆಯ ರಾಜ್ಯವಾದ ಬಿಹಾರದಲ್ಲಿ ಬಿಜೆಪಿಯು ಆಟವನ್ನು ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಅಲ್ಲದೆ, ಬಂಗಾಳದಲ್ಲಿ ಇದೇ ರೀತಿ ಆಗುವುದಿಲ್ಲ ಎಂದು ಹೇಳಿದರು. ರಾಜ್ಯದಲ್ಲಿ ತನ್ನ ಜನರನ್ನು ಗುರಿಯಾಗಿಸಿಕೊಂಡರೆ, ದೇಶಾದ್ಯಂತ ಬೀದಿಗಿಳಿದು ಇಡೀ ದೇಶವನ್ನೇ ಅಲ್ಲಾಡಿಸುತ್ತೇನೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ.
ಮುಂದುವರೆದು ಮಾತನಾಡಿದ ಬಂಗಾಳ ಸಿಎಂ, ನೀವು ಬಂಗಾಳದಲ್ಲಿ ನನ್ನನ್ನು ಗುರಿಯಾಗಿಸಿಕೊಂಡರೆ, ನನ್ನ ಜನರ ಮೇಲಿನ ಯಾವುದೇ ದಾಳಿಯನ್ನು ವೈಯಕ್ತಿಕ ದಾಳಿ ಎಂದು ನಾನು ಪರಿಗಣಿಸುತ್ತೇನೆ. ಅಲ್ಲದೆ, ನಾನು ಇಡೀ ದೇಶವನ್ನೇ ನಡುಗಿಸುತ್ತೇನೆ. ಚುನಾವಣೆಯ ನಂತರ, ನಾನು ಇಡೀ ದೇಶವನ್ನು ಸುತ್ತುತ್ತೇನೆ ಎಂದು ಬಿಜೆಪಿ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ಬಂಗಾಲದಲ್ಲಿ ಚುನಾವಣಾ ಆಯೋಗಕ್ಕೆ ಒಂದೇ ಒಂದು ಹೆಸರನ್ನು ಅಳಿಸುವ ಅಧಿಕಾರವಿಲ್ಲ ಎಂದು ಜನರಿಗೆ ಭರವಸೆ ನೀಡಿದ್ದಾರೆ. SIR ನಡೆಸಲು 3 ವರ್ಷಗಳು ಬೇಕಾಗುತ್ತದೆ. ಇದನ್ನು ಕೊನೆಯದಾಗಿ 2002ರಲ್ಲಿ ಮಾಡಲಾಯಿತು. ನಾವು SIR ಅನ್ನು ಎಂದಿಗೂ ವಿರೋಧಿಸಲಿಲ್ಲ. ಆದರೆ, ಯಾವುದೇ ನಿಜವಾದ ಮತದಾರರನ್ನು, ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ತೆಗೆದುಹಾಕಲು ಸಾಧ್ಯವಿಲ್ಲ ಎಂದು ನಾವು ಹೇಳಿದ್ದೇವೆ ಎಂದಿದ್ದಾರೆ.
ಬಿಜೆಪಿ ತಮ್ಮ ಪಕ್ಷದ ಕಚೇರಿಯಿಂದ ಪಟ್ಟಿಯನ್ನು ಸರಿಪಡಿಸುತ್ತಿದೆ ಮತ್ತು EC ಅದಕ್ಕೆ ಅನುಗುಣವಾಗಿ ನಿರ್ಧರಿಸುತ್ತದೆ. EC ಯ ಕೆಲಸವೆಂದರೆ ನಿಷ್ಪಕ್ಷಪಾತವಾಗಿರುವುದು ಮತ್ತು ಬಿಜೆಪಿ ಆಯೋಗವಾಗುವುದು ಅಲ್ಲ ಎಂದು SIR ವಿರೋಧಿ ಉದ್ದೇಶಿಸಿ ಮಾತನಾಡುತ್ತಾ ಮಮತಾ ತಿಳಿಸಿದ್ದಾರೆ,(ಏಜೆನ್ಸೀಸ್).