ಪ್ರಧಾನಿ ಮೋದಿ ಮತ್ತು ಅಭಿಜಿತ್ ದಿಪ್ಕೆ 
ದೇಶ

ನಿಮಗೆ ಚಹಾ ಮಾರಿ ಎಂದು ನಾವು ಹೇಳಿದ್ವಾ? ಓದಿ ಉದ್ಯೋಗ ಗಿಟ್ಟಿಸಿಕೊಳ್ಳಬಹುದಿತ್ತು: ಪ್ರಧಾನಿ ಮೋದಿ ವಿರುದ್ಧ ಅಭಿಜಿತ್ ದಿಪ್ಕೆ ಕಿಡಿ | Abhijeet Dipke

ನೀವು ಚಹಾ ಯಾಕೆ ಮಾರಿದ್ದೀರಿ? ನಾವು ನಿಮಗೆ ಚಹಾ ಮಾರಲು ಹೇಳಿದ್ವಾ? ನೀವು ಶಾಲೆಗೆ ಹೋಗಬಹುದಿತ್ತು, ಓದಬಹುದಿತ್ತು ಹಾಗೂ ಕೆಲಸ ಪಡೆಯಬಹುದಿತ್ತು ಎಂದು ಪ್ರಧಾನಿ ಮೋದಿಯವರು ನಾನು ಚಹಾ ಮಾರಿದ್ದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ ವಾಗ್ದಾಳಿ ನಡೆಸಿದ್ದಾರೆ.

ಮುಂಬೈ: ನೀವು ಚಹಾ ಯಾಕೆ ಮಾರಿದ್ದೀರಿ? ನಾವು ನಿಮಗೆ ಚಹಾ ಮಾರಲು ಹೇಳಿದ್ವಾ? ನೀವು ಶಾಲೆಗೆ ಹೋಗಬಹುದಿತ್ತು, ಓದಬಹುದಿತ್ತು ಹಾಗೂ ಕೆಲಸ ಪಡೆಯಬಹುದಿತ್ತು ಎಂದು ಪ್ರಧಾನಿ ಮೋದಿಯವರು ನಾನು ಚಹಾ ಮಾರಿದ್ದೆ ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸಿಜೆಪಿ ಸ್ಥಾಪಕ ಅಭಿಜಿತ್ ದಿಪ್ಕೆ ವಾಗ್ದಾಳಿ ನಡೆಸಿದ್ದಾರೆ.

ಚುನಾವಣಾ ಆಯೋಗದ ಎಸ್​ಐಆರ್ ವಿವಾದಕ್ಕೆ ಸಂಬಂಧಿಸಿದಂತೆ ಪೊಲೀಸರ ಅನುಮತಿ ನಿರಾಕರಿಸಿದ ನಡುವೆಯೂ ಶುಕ್ರವಾರ(ಅ. 02) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಡೆಸಿದ ಪ್ರತಿಭಟನೆ ವೇಳೆ ಈ ಹೇಳಿಕೆ ನೀಡಿದ್ದಾರೆ.

ಈ ವ್ಯಕ್ತಿ ನಮ್ಮ ಹಣದಿಂದ ಜಗತ್ತನ್ನು ಸುತ್ತುತ್ತಿದ್ದಾನೆ. ಒಂದು ವಿಷಯವೆಂದರೆ ಅವರು ನಾನು ಚಹಾ ಮಾರಿದ್ದೇನೆ, ನಾನು ಚಹಾ ಮಾರಿದ್ದೇನೆ, ನಾನು ಚಹಾ ಮಾರಿದ್ದೇನೆ ಎಂದು ಹೇಳುತ್ತಿರುತ್ತಾರೆ. ನೀವು ಚಹಾ ಮಾರಿ ಎಂದು ನಾವು ಹೇಳಿದ್ವಾ? ನೀವು ಶಾಲೆಗೆ ಹೋಗಬಹುದಿತ್ತು, ಓದಬಹುದಿತ್ತು, ಕೆಲಸ ಮಾಡಬಹುದಿತ್ತು ಅಲ್ವಾ ಎಂದು ಕಿಡಿಕಾರಿದ್ದಾರೆ.

ಮುಂದುವರೆದು, ಪ್ರಧಾನಿ ಮೋದಿಯವರ ಫ್ಯಾಷನ್ ಸೆನ್ಸ್ ಮತ್ತು ಚರ್ಮದ ಆರೈಕೆ ಅತ್ಯುತ್ತಮವಾಗಿದೆ. ದೊಡ್ಡ ನಟರು, ಮಾಡೆಲ್‌ಗಳು ಸಹ ಅವರ ಶೈಲಿಗೆ ಸರಿಸಾಟಿಯಾಗಲು ಸಾಧ್ಯವಿಲ್ಲಎಂದು ವ್ಯಂಗ್ಯವಾಡಿದ್ದಾರೆ.

ಇನ್ನೂ ದೆಹಲಿಯ ಜಂತರ್ ಮಂತರ್​ನಲ್ಲಿ ನಡೆದ ಪ್ರತ್ಯೇಕ ಪ್ರತಿಭಟನೆಯ ಸಂದರ್ಭದಲ್ಲಿ ಪೊಲೀಸ್ ಕ್ರಮವನ್ನು ಟೀಕಿಸಿದ ದಿಪ್ಕೆ, ದೆಹಲಿ ಪೊಲೀಸ್ ಉಪ ಆಯುಕ್ತ ಸಚಿನ್ ಶರ್ಮಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆಪ್ತರಾಗಿದ್ದಾರೆ ಎಂದು ಆರೋಪಿಸಿದರು.

ಕೆಲವು ಪೊಲೀಸ್ ಅಧಿಕಾರಿಗಳು ಈ ಸಚಿನ್ ಶರ್ಮಾ ಒಬ್ಬ ಸಂಘಿ ಎಂದು ನನಗೆ ಹೇಳುತ್ತಿದ್ದರು. ಅವರು ಅಮಿತ್ ಶಾ ಅವರ ನೆಚ್ಚಿನವರು. ಆದ್ದರಿಂದ ನಾನು ಸಚಿನ್ ಶರ್ಮಾಗೆ ಹೇಳಲು ಬಯಸುತ್ತೇನೆ. ನೀವು ಸಂಘಿಯಾಗಿದ್ದರೆ, ಖಾಕಿ ಶಾರ್ಟ್ಸ್ (ಆರ್‌ಎಸ್‌ಎಸ್ ಸಮವಸ್ತ್ರ) ಧರಿಸಿ, ಪೊಲೀಸ್ ಸಮವಸ್ತ್ರ ಧರಿಸಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂಬೈನಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಹಿರಿಯ ನಟಿ ಶಬಾನಾ ಅಜ್ಮಿ , ಗಾಯಕ ವಿಶಾಲ್ ದದ್ಲಾನಿ, ನಟ ನಾಸಿರುದ್ದೀನ್ ಶಾ ಮತ್ತು ಇತರ ಸಾರ್ವಜನಿಕ ವ್ಯಕ್ತಿಗಳು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು (ಏಜೆನ್ಸೀಸ್).